ನಿಮಗೂ ಮರೆವಿನ ಕಾಯಿಲೆ ಇದೆಯೇ? ಇಲ್ಲಿದೆ ನೋಡಿ ಪರಿಹಾರ

By Suvarna NewsFirst Published May 20, 2024, 2:14 PM IST
Highlights

ವಯಸ್ಸಾದಂತೆ ಮರೆವಿನ ಕಾಯಿಲೆ ಶುರುವಾಗುವುದು ಸಹಜ, ಆದರೆ, ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಈ ಸಮಸ್ಯೆ ಕಾಡತೊಡಗುತ್ತಿದೆ. ಹೌದು, ಯಾವ ವಸ್ತು ಎಲ್ಲಿ ಇಟ್ಟೆ? ಈ ಸ್ಥಳಕ್ಕೆ ಏಕೆ ಬಂದೆ? ನಾನೇಕೆ ಈ ಕೆಲಸ ಮಾಡುತ್ತಿದ್ದೇನೆ? ಇಂತ ಸಣ್ಣ ಸಣ್ಣ ವಿಷಯಗಳನ್ನು ಮರೆಯುವ ಛಾಳಿ ಶುರುವಾಗುತ್ತದೆ.  ಈ ಮರೆವಿನ ಕಾಯಿಲೆ ಬರಲು ಕಾರಣವೇನು? ಹಾಗೂ ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ವೈದ್ಯರು ತಿಳಿಸಿದ್ದಾರೆ. 

ಡಾ. ನಿತಿನ್ ಕುಮಾರ್ ಎನ್, ಹಿರಿಯ ಸಲಹೆಗಾರ-ನ್ಯೂರಾಲಜಿ, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆ,

ವಯಸ್ಸಾದಂತೆ ಮರೆವಿನ ಕಾಯಿಲೆ ಶುರುವಾಗುವುದು ಸಹಜ, ಆದರೆ, ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಈ ಸಮಸ್ಯೆ ಕಾಡತೊಡಗುತ್ತಿದೆ. ಹೌದು, ಯಾವ ವಸ್ತು ಎಲ್ಲಿ ಇಟ್ಟೆ? ಈ ಸ್ಥಳಕ್ಕೆ ಏಕೆ ಬಂದೆ? ನಾನೇಕೆ ಈ ಕೆಲಸ ಮಾಡುತ್ತಿದ್ದೇನೆ? ಇಂತ ಸಣ್ಣ ಸಣ್ಣ ವಿಷಯಗಳನ್ನು ಮರೆಯುವ ಛಾಳಿ ಶುರುವಾಗುತ್ತದೆ. ಕೆಲವರು ಇದು ಸರ್ವೇ ಸಾಮಾನ್ಯವೆಂದುಕೊಳ್ಳುತ್ತಾರೆ. ಆದರೆ, ಇಂತಹ ಸಣ್ಣ ವಿಷಯಗಳು ಪದೇ ಪದೇ ಸಂಭವಿಸುತ್ತಿದ್ದರೆ, ಖಂಡಿತ ಇದು ಸಾಮಾನ್ಯ ವಿಷಯವಲ್ಲ. ನಿಮಗೂ ಮರೆವಿನ ಕಾಯಿಲೆ ಶುರುವಾಗಿದೆ ಎಂದರ್ಥ. ಸಣ್ಣ ವಯಸ್ಸಿನಲ್ಲಿಯೇ ಈ ಮರೆವಿನ ಕಾಯಿಲೆ ಬರಲು ಕಾರಣವೇನು? ಹಾಗೂ ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ವೈದ್ಯರು ತಿಳಿಸಿದ್ದಾರೆ. 

Latest Videos

ಜ್ಞಾಪಕಶಕ್ತಿ ಕುಂದುವಿಕೆಗೆ ಕಾರಣವೇನು?

ಒತ್ತಡ ಮತ್ತು ಆತಂಕ: ನೀವು ಕೆಲಸ ಅಥವಾ ಇತರೆ ವಿಷಯಕ್ಕೆ ಪದೇಪದೇ ಒತ್ತಡ ಹಾಗೂ ಆತಂಕಕ್ಕೆ ಒಳಗಾಗುತ್ತಿದ್ದರೆ ಇದು ನಿಮ್ಮ ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸಾಧ್ಯವಾದಷ್ಟು ಒತ್ತಡದ ಕೆಲಸದಿಂದ ಮುಕ್ತಿಗೊಳ್ಳಿ, ಎಲ್ಲಾ ವಿಷಯಕ್ಕೂ ಆತಂಕಕ್ಕೆ ಒಳಗಾಗುವುದನ್ನು ಕಡಿಮೆ ಮಾಡಿ, ಸಮಾಧಾನದಿಂದ ಇರಲು ಪ್ರಯತ್ನಿಸಿ.

ಯಾವ್ದೇ ವಿಷ್ಯ ಮರೆಯಬಾರದು ಅಂದ್ರೆ ಪಂಚೇಂದ್ರಿಯ ಬಳಸಿ

ನಿದ್ರಾಹೀನತೆ: ಇತ್ತೀಚಿನ ದಿನಗಳಳ್ಲಿ ಸಾಕಷ್ಟು ಜನರಿಗೆ ನಿದ್ರಾಹೀನತೆಯ ಸಾಮಾನ್ಯವಾಗಿದೆ, ಆದರೆ ನಿದ್ರಾಹೀನತೆಯೂ ಸಹ ಮೆಮೊರಿ ಲಾಸ್‌ಗೆ ಕಾರಣವಾಗಬಹುದು, ದಿನಕ್ಕೆ ಕನಿಷ್ಠ ೭ ಗಂಟೆ ನಿದ್ರೆ ಮಾಡದೇ ಹೋದಲ್ಲಿ ಇದು ನಿಮ್ಮ ಮೆಮೋರಿ ಮೇಲೆ ಪರಿಣಾಮ ಬೀರಲಿದೆ. ಕ್ರಮೇಣ ಮರೆವಿನ ಕಾಯಿಲೆ ಶುರುವಾಗಲು ಕಾರಣವಾಗಬಹುದು.

ತಲೆಯಲ್ಲಿನ ಗಾಯಗಳು: ಕನ್ಕ್ಯುಶನ್ (concussion) ಅಥವಾ ಇತರೆ ತಲೆಯಲ್ಲಿ ಆಗುವ ಪೆಟ್ಟಿನಿಂದಲೂ ನೆನಪಿನ ಶಕ್ತಿ ಕಡಿಮೆಯಾಗಬಹುದು. ಕನ್ಕ್ಯುಶನ್ ಎನ್ನುವುದು ಮಿದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುವ ಸೌಮ್ಯವಾದ ಆಘಾತಕಾರಿ ಮಿದುಳಿನ ಗಾಯವಾಗಿದೆ. ಹೀಗಾಗಿ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಪೋಷಕರು ಎಚ್ಚರವಹಿಸುವುದು ಉತ್ತಮ.

ಕೆಲವು ಔಷಧಿಗಳ ಸೈಡ್‌ಎಫೆಕ್ಟ್‌: ಕೆಲವರು ಸಣ್ಣ-ಪುಟ್ಟ ನೋವಿಗೆಲ್ಲಾ ಮಾತ್ರೆಗಳ ಮೊರೆ ಹೋಗುತ್ತಾರೆ, ಖಿನ್ನತೆಯಿಂದ ಬಳಲುತ್ತಿರುವವರು ಇದರಿಂದ ಹೊರಬರಲು ಸಹ ಮಾತ್ರೆಗಳನ್ನು ಸೇವಿಸುತ್ತಾರೆ, ಈ ಎಲ್ಲವೂ ನಿಮ್ಮ ಮೆಮೊರಿ ಮೇಲೆ ಪರಿಣಾಮ ಬೀರಬಹುದು.

 ವೈದ್ಯಕೀಯ ಇತಿಹಾಸ: ಇನ್ನೂ ಕೆಲವರಿಗೆ ಅತಿಯಾದ ಥೈರಾಯ್ಡ್ ಸಮಸ್ಯೆ , ವಿಟಮಿನ್ ಕೊರತೆ ಮತ್ತು ಖಿನ್ನತೆಯಂತಹ ವೈದ್ಯಕೀಯ ಸಮಸ್ಯೆ ಹೊಂದಿರುವವರಿಗೂ ಸಹ ಜ್ಞಾಪಕಶಕ್ತಿಯ ಮೇಲೆ ಪರಿಣಾಮ ಬೀರಬಹುದು.

ಇದಕ್ಕೆ ಪರಿಹಾರವೇನು?

ನೀವು ಸಹ ಇಂತಹ ಸಾಂದರ್ಭಿಕ ಮೆಮೊರಿ ಸಮಸ್ಯೆ ಎದುರಿಸುತ್ತಿದ್ದರೆ ಈ ಬಗ್ಗೆ ಕೂಡಲೇ ಎಚ್ಚರವಹಿಸಿ.
ಜೀವನಶೈಲಿಯ ಬದಲಾವಣೆ: ಮುಖ್ಯವಾಗಿ ಜೀವನ ಶೈಲಿಯ ಬದಲಾವಣೆ ಅವಶ್ಯಕ, ಪ್ರಮುಖವಾಗಿ ಸೂಕ್ತವಾಗಿ ನಿದ್ರಿಸುವುದು, (೭ರಿಂದ ೮ಗಂಟೆಗಳ ಕಾಲ), ಕೆಲಸ ಅಥವಾ ಇತರೆ ವಿಚಾರಗಳ ಬಗ್ಗೆ ಹೆಚ್ಚು ಒತ್ತಡಕ್ಕೆ ಸಿಲುಕುವುದನ್ನು ತಡೆಯುವುದು, ಸೊಪ್ಪು, ತರಕಾರಿ, ಹಣ್ಣು ಇತ್ಯಾದಿ ಆರೋಗ್ಯಕರ ಆಹಾರ ಸೇವನೆ ಕೂಡ ನಿಮ್ಮ ಆರೋಗ್ಯವನ್ನಷ್ಟೇ ಅಲ್ಲದೆ, ಜ್ಞಾನಪಶಕ್ತಿಯನ್ನು ಸಹ ವೃದ್ಧಿಸಲಿದೆ. ಈಗಾಗಲೇ ಸಣ್ಣ-ಪುಟ್ಟ ಮರೆವಿನ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಈ ಪರಿಹಾರವನ್ನು ಫಾಲೋ ಮಾಡಿದರೆ, ಮರೆವಿನ ಕಾಯಿಲೆ ಕ್ರಮೇಣ ಕಡಿಮೆಯಾಗಲಿದೆ.

ಅರಿವಿನ ವ್ಯಾಯಾಮ: ಮೆಮೊರಿ ಪವರ್‌ ಹೆಚ್ಚಿಸಲು ಹಾಗೂ ಕಾಪಾಡಿಕೊಳ್ಳಲು ಒಂದಷ್ಟು ಸೂಕ್ತ ವ್ಯಾಯಾಮ ಅವಶ್ಯಕ. ಯೋಗ, ಧ್ಯಾನವನ್ನು ಪ್ರತಿನಿತ್ಯ ಮಾಡುವುದರಿಂದ ಮನಸ್ಸು ನಿರ್ಮಲವಾಗುವ ಜೊತೆಗೆ, ಜ್ಞಾಪಕ ಶಕ್ತಿ ವೃದ್ಧಿಸಲಿದೆ.

Health Tips: ಅಯ್ಯೋ, ಮರೆತೋಯ್ತು ಅಂತೀರಾ? ದಿನನಿತ್ಯದ ಸಣ್ಣಪುಟ್ಟ ಮರೆವು ಒಳ್ಳೆದೇ ಬಿಡಿ!

ಮತ್ತೊಬ್ಬರನ್ನು ಹೀಯಾಳಿಸದಿರಿ: ಕೆಲವರಿಗೆ ಮರೆವು ಇದೆ ಎಂಬ ಮಾತ್ರಕ್ಕೆ ಅವರನ್ನು ಅವಮಾನಿಸುವುದು, ತಮಾಷೆ ಮಾಡುವುದು ಹೀಯಾಳಿಸುವುದು ಕೂಡ ಆ ವ್ಯಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ಅವರ ಕುಟುಂಬದವರು ಅವರಿಗೆ ಮರೆವಿನ ಕಾಯಿಲೆ ಇದ್ದರೂ ಸಹ ಅವರನ್ನು ಪ್ರೋತ್ಸಾಹಿಸುವುದು, ಅವರು ಯಾವುದೇ ವಸ್ತು ಮರೆತರೂ ನೀವು ಹೀಯಾಳಿಸದೆ ಬೆಂಬಲವಾಗಿ ನಿಲ್ಲುವುದು ಅವಶ್ಯಕ. ಇದರಿಂದಲೂ ಸಹ ಆ ವ್ಯಕ್ತಿ ತಮ್ಮ ಸಮಸ್ಯೆಯಿಂದ ಬೇಗ ಹೊರಬರಲು ಸಾಧ್ಯ.

ವೈದ್ಯಕೀಯ ಸ್ಥಿತಿ: ಕೆಲವರಿಗೆ ನರಮಂಡಲದ ಸಮಸ್ಯೆ ಇದ್ದರೆ, ಕೂಡಲೇ ಒಮ್ಮೆ ವೈದ್ಯರನ್ನು ಭೇಟಿ ಮಾಡಿ, ನಿಮ್ಮ ಮರೆವಿನ ಹಂತವನ್ನು ತಿಳಿಸಿ, ಕೆಲವು ಪರೀಕ್ಷೆಗಳ ನಂತರ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.

click me!