ಕೊರೋನಾ ಎಂಬ ಮಹಾಮಾರಿ ಯಾವ ರೂಪದಲ್ಲಿ ವಕ್ಕರಿಸಿಕೊಳ್ಳುತ್ತದೆ ಎಂದು ಹೇಳಲಾಗದು. ಹಾಗಾಗಿ ನಾವು ನಿತ್ಯ ಬಳಸುವ ಕೆಲವು ವಸ್ತುಗಳನ್ನು ಹೊರಗೆ ಹೋಗಿ ಬಂದ ತಕ್ಷಣ ಶುಚಿಗೊಳಿಸೋದು ಅಗತ್ಯ.
ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ಈ ದಿನಗಳಲ್ಲಿ ಮನೆಯಿಂದ ಹೊರಗೆ ಕಾಲಿಡಲು ಭಯ. ಹಾಗಂತ ಎಷ್ಟು ದಿನ ಮನೆಯೊಳಗೆ ಕೂತಿರಲು ಸಾಧ್ಯ? ಅಗತ್ಯ ವಸ್ತುಗಳನ್ನು ಖರೀದಿಸಲು ಕೆಲವೊಮ್ಮೆ ಹೊರಗೆ ಹೋಗಲೇಬೇಕಾಗುತ್ತದೆ. ಇಂಥ ಸಮಯದಲ್ಲಿ ಮಾಸ್ಕ್ ಧರಿಸೋದು, ಕೈಗಳನ್ನು ಆಗಾಗ ಸ್ಯಾನಿಟೈಸರ್‍ನಿಂದ ಶುಚಿಗೊಳಿಸೋದು, ಮನೆಗೆ ಹಿಂತಿರುಗಿದ ಬಳಿಕ ಸ್ನಾನ ಮಾಡಿ ಬಟ್ಟೆಗಳನ್ನು ವಾಷ್ ಮಾಡೋದು ಸೇರಿದಂತೆ ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುತ್ತೇವೆ. ಖರೀದಿಸಿ ತಂದ ವಸ್ತುಗಳನ್ನು ಕ್ವಾರಂಟೈನ್ ಮಾಡೋದು ಇಲ್ಲವೆ ನೀರು ಮತ್ತು ಸೋಪ್‍ನಿಂದ ಸ್ವಚ್ಛಗೊಳಿಸುವ ಕಾರ್ಯವನ್ನು ಕೂಡ ಮಾಡುತ್ತಿದ್ದೇವೆ. ಆದ್ರೆ ಇಷ್ಟೆಲ್ಲ ಎಚ್ಚರಿಕೆ ವಹಿಸಿದ ಬಳಿಕವೂ ನಮಗೆ ಗೊತ್ತಿಲ್ಲದಂತೆ ಕೊರೋನಾ ನಮ್ಮೊಂದಿಗೆ ಮನೆ ಪ್ರವೇಶಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದು ಹೇಗೆ ಅಂತೀರಾ? ನಾವು ಶುಚಿಗೊಳಿಸಲು ಮರೆಯುವ ಅಥವಾ ನಿರ್ಲಕ್ಷ್ಯ ವಹಿಸುವ ಕೆಲವು ವಸ್ತುಗಳಿಂದ. ಅವು ಯಾವುವು ಅಂತೀರಾ?
ಕೊರೋನಾದಿಂದ ಚೇತರಿಸಿಕೊಂಡವ 'ಆ' ಕೆಲಸ ಮಾಡಲು ಎಷ್ಟು ದಿನ ಕಾಯಬೇಕು?
undefined
ಕನ್ನಡಕ ಅಥವಾ ಸನ್‍ಗ್ಲಾಸ್
ಕೊರೋನಾ ವೈರಸ್ ಕಣ್ಣುಗಳ ಮೂಲಕ ಕೂಡ ದೇಹ ಪ್ರವೇಶಿಸುವ ಸಾಧ್ಯತೆಯಿದೆ. ನೀವು ಕನ್ನಡಕ ಧರಿಸಿದ್ರೆ ಆಗಾಗ ಕಣ್ಣುಗಳನ್ನು ಮುಟ್ಟೋದು ತಪ್ಪುತ್ತೆ. ಹೀಗಾಗಿ ಈ ಸಮಯದಲ್ಲಿ ಹೊರಗೆ ಹೋಗುವಾಗ ಕನ್ನಡಕ ಧರಿಸೋದು ಸೇಫ್ ಎನ್ನುತ್ತಾರೆ ವೈದ್ಯರು. ಕನ್ನಡಕ ಧರಿಸೋದ್ರಿಂದ ವೈರಸ್ ಕಣ್ಣುಗಳೊಳಗೆ ಪ್ರವೇಶಿಸೋದಿಲ್ಲ ಎನ್ನುವುದೇನು ನಿಜ. ಆದ್ರೆ ಕನ್ನಡಕದ ಮೇಲೆ ವೈರಸ್ ಇರಬಹುದಲ್ಲ? ಆದಕಾರಣ ಹೊರಗೆ ಹೋಗಿ ಮನೆಗೆ ಬಂದ ತಕ್ಷಣ ಕನ್ನಡಕವನ್ನು ಕೂಡ ಶುಚಿಗೊಳಿಸೋದು ಅಗತ್ಯ. ಕನ್ನಡಕವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಒದ್ದೆ ಮಾಡಿಕೊಂಡು ಪಾತ್ರೆ ತೊಳೆಯುವ ಸೋಪನ್ನು ಬೆರಳಿನಲ್ಲಿ ಸ್ವಲ್ಪವೇ ತೆಗೆದುಕೊಂಡು ಲೆನ್ಸ್‍ಗಳನ್ನು ಶುಚಿಗೊಳಿಸಿ ಆ ಬಳಿಕ ನೀರಿನಿಂದ ತೊಳೆಯಬೇಕು. ನಂತರ ಒಣಗಿದ ಲೆನ್ಸ್ ಕ್ಲಾತ್ ಮೂಲಕ ಒರೆಸಬೇಕು. ಯಾವುದೇ ಕಾರಣಕ್ಕೂ ಪೇಪರ್ ಟವೆಲ್, ಡಿಸ್ ಟವೆಲ್ ಅಥವಾ ಇನ್ಯಾವುದೇ ಬಟ್ಟೆಯಿಂದ ಲೆನ್ಸ್ ಒರೆಸಬೇಡಿ. ಇದ್ರಿಂದ ಲೆನ್ಸ್ ಸ್ಕ್ರ್ಯಾಚ್ ಆಗುವ ಸಾಧ್ಯತೆಯಿದೆ.
ಕೀಗಳು
ನಿಮ್ಮ ಬೈಕ್, ಕಾರ್ ಕೀಗಳು ಅಥವಾ ಮನೆಯ ಕೀಲಿ ಕೈ ಕೂಡ ವೈರಸ್ ಹರಡಲು ಕಾರಣವಾಗಬಲ್ಲದು. ಆದಕಾರಣ ಹೊರಗೆ ಹೋಗಿ ಬಂದ ಬಳಿಕ ನಿಮ್ಮ ಬಳಿಯಿದ್ದ ಕೀಗಳನ್ನು ಕೂಡ ವೈರಸ್‍ಮುಕ್ತಗೊಳಿಸೋದು ಅಗತ್ಯ. ಡಿಸ್‍ಇನ್‍ಫೆಕ್ಟಿಂಗ್ ವೈಪ್ ಅಥವಾ ಸ್ಪ್ರೆಬಳಸಿ ಕೀಗಳನ್ನು ಸ್ವಚ್ಛಗೊಳಿಸಬಹುದು. ಒಂದು ವೇಳೆ ಕೀಗಳಲ್ಲಿ ಬ್ಯಾಟರಿಯಿದ್ರೆ ಸ್ವಚ್ಛಗೊಳಿಸುವಾಗ ಕೇರ್‍ಫುಲ್ ಆಗಿರೋದು ಅಗತ್ಯ. ಸ್ಯಾನಿಟೈಸರ್ ಅನ್ನು ಕಾಟನ್‍ಗೆ ತಾಗಿಸಿ ಅದ್ರಿಂದ ಕೀಗಳನ್ನು ಸ್ವಚ್ಛಗೊಳಿಸಬಹುದು. ಕೀ ಬಂಚ್ ಅನ್ನು ಹೊರಗೆ ತೆಗೆದುಕೊಂಡು ಹೋಗುವ ಬದಲು ಅಗತ್ಯವಿರುವ ಕೀಯನ್ನು ಮಾತ್ರ ಕೊಂಡು ಹೋಗೋದು ಒಳ್ಳೆಯದು.
ಕೊರೋನಾ ಜೊತೆಗೇ ಬಾಳಬೇಕು ಅಂದ್ರಲ್ಲ ಮೋದಿ, ಹಾಗಂದ್ರೇನು?
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್
ಶಾಪ್‍ಗೆ ಹೋಗಿ ಏನೋ ಸಾಮಾನು ಖರೀದಿಸುತ್ತೀರಿ. ಅಲ್ಲಿ ಕ್ಯಾಷ್ ಬದಲು ಕ್ರೆಡಿಟ್ ಕಾರ್ಡ್ ನೀಡುತ್ತೀರಿ. ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಶಾಪ್ ಕೀಪರ್ ಸ್ವೈಪ್ ಮಾಡಿ ನಿಮಗೆ ಹಿಂತಿರುಗಿಸುತ್ತಾರೆ. ಹೀಗೆ ನೀವು ಅನೇಕ ಕಡೆಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಸುತ್ತೀರಿ. ಸ್ವಲ್ಪ ಯೋಚಿಸಿ ನೋಡಿ, ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಕೂಡ ವೈರಸ್ ವಾಹಕವಾಗಬಲ್ಲದು ಅಲ್ಲವೆ? ಆದಕಾರಣ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳನ್ನು ಸ್ವಚ್ಛಗೊಳಿಸೋದು ಅತ್ಯಗತ್ಯ. ಲೈಸೋಲ್ ಅಥವಾ ಕ್ಲೊರೊಕ್ಸ್ ವೈಪ್ ಅಥವಾ ಡಿಸ್‍ಇನ್ಫೆಕ್ಟಂಟ್ ಸ್ಪ್ರೆ ಬಳಸಿ ಇವುಗಳನ್ನು ಕ್ಲೀನ್ ಮಾಡಬಹುದು.
ವ್ಯಾಲೆಟ್ ಅಥವಾ ಪರ್ಸ್
ಹಣ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ತೆಗೆಯಲು ನೀವು ಪರ್ಸ್ ಮುಟ್ಟಿಯೇ ಮುಟ್ಟಿರುತ್ತೀರಿ. ಹೀಗಾಗಿ ನಿಮ್ಮ ಪರ್ಸ್ ಕೂಡ ವೈರಸ್ ವಾಹಕವಾಗಬಹುದು. ಆದಕಾರಣ ಪರ್ಸ್ ಅಥವಾ ವ್ಯಾಲೆಟ್ ಕ್ಲೀನ್ ಮಾಡೋದು ಮುಖ್ಯ. ಲೆದರ್ ವ್ಯಾಲೆಟ್ ಕ್ಲೀನ್ ಮಾಡಲು ಬಿಸಿ ನೀರಿಗೆ ಪಾತ್ರೆ ತೊಳೆಯುವ ಸೋಪ್ ಮಿಕ್ಸ್ ಮಾಡಿ ಅದರಲ್ಲಿ ಬಟ್ಟೆಯನ್ನು ಅದ್ದಿ ಒರೆಸಿ. ಆ ಬಳಿಕ ಒಣಗಿದ ಬಟ್ಟೆಯಿಂದ ಒರೆಸಿ. ಈ ಎರಡೂ ಬಟ್ಟೆಗಳನ್ನು ಒಗೆದು ಬಿಸಿಲಿನಲ್ಲಿ ಒಣಗಿಸಿ.
AIDS ಎದುರಿಸಿದ ಪೋರ್ನ್ ಇಂಡಸ್ಟ್ರಿ
ಸ್ಟೇರಿಂಗ್ ವ್ಹೀಲ್
ನಿಮ್ಮ ಕಾರಿನ ಸ್ಟೇರಿಂಗ್ ವ್ಹೀಲ್ ಅನ್ನು ನೀವು ಮುಟ್ಟುವ ಕಾರಣ ಮನೆಗೆ ಬಂದ ತಕ್ಷಣ ಅದನ್ನು ಸ್ವಚ್ಛಗೊಳಿಸೋದು ಅಗತ್ಯ. ಲೈಸೋಲ್ ಅಥವಾ ಕ್ಲೋರೊಕ್ಸ್ ವೈಪ್ ಬಳಸಿ ಸ್ಟೇರಿಂಗ್ ವ್ಹೀಲ್ ಸ್ವಚ್ಛಗೊಳಿಸಿ.