ಅಷ್ಟಕ್ಕೂ ಕ್ವಾರಂಟೇನ್, ಐಸೋಲೇಶನ್ ಅಂದರೆ ಏನು? ಕೊರೋನಾದ ಕತೆ

By Suvarna NewsFirst Published Mar 16, 2020, 7:52 PM IST
Highlights

ಕೊರೋನಾ ವೈರಸ್ ಜತೆಗೆ ಹೊಸ ಹೊಸ ಶಬ್ದಗಳು ಕಾಲಿಟ್ಟವು/ ಔಟ್ ಬ್ರೇಕ್, ಎಪಿಡೆಮಿಕ್, ಮತ್ತು ಪೆಂಡಾಮಿಕ್ ಅರ್ಥ ತಿಳಿದುಕೊಂಡಿದ್ದೇವು/ ಇದೀಗ ಕ್ವಾರಂಟೇನ್, ಐಸೋಲೇಶನ್ ಮತ್ತು ಸೋಶಿಯಲ್ ಡಿಸ್ಟಂಸಿಂಗ್ ಸರದಿ/  ಎಚ್ಚರಿಕೆ, ಜಾಗೃತೆ ಮತ್ತು ಸ್ವಚ್ಛತೆ ನಮ್ಮನ್ನು ಕಾಪಾಡಲಿದೆ.

ಬೆಂಗಳೂರು(ಮಾ. 16) ಕೊರೋನಾ ವೈರಸ್ ಪರಿಣಾಮಕ್ಕೆ ಎಣೆ ಇಲ್ಲ. ಹೊಸ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ, ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 112 ಕ್ಕೆ ಏರಿದೆ. ಭಾನುವಾರ 93 ಇದ್ದಿದ್ದು ಸೋಮವಾರದ ಹೊತ್ತಿಗೆ 112 ಆಗಿದೆ. ಮಂಗಳವಾರದ ಹೊತ್ತಿಗೆ ಮತ್ತಷ್ಟು ಏರಿಕೆ ಕಾಣುವುದೋ? ಕರೋನಾ ಸೋಂಕು ಕಾಣಿಸಿಕೊಂಡ 10 ಜನರು ಚೇತರಿಸಿಕೊಂಡಿದ್ದಾರೆ ಎನ್ನುವುದು ಮಾತ್ರ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುವ ಸುದ್ದಿ.

ಕೊರೋನಾವನ್ನು ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಣೆ ಮಾಡಿದೆ.  ಇದೆಲ್ಲದರ ನಡುವೆ ಔಟ್ ಬ್ರೇಕ್, ಎಪಿಡೆಮಿಕ್, ಮತ್ತು ಪೆಂಡಾಮಿಕ್ ಎನ್ನುವ ಶಬ್ದಗಳ ನಡುವಿನ ವ್ಯತ್ಯಾಸ ತಿಳಿದುಕೊಂಡಿದ್ದೇವು. ಈಗ ಇದೇ ಕೊರೋನಾಗೆ ಸಂಬಂಧಿಸಿ ಪ್ರತಿದಿನ ಬಳಕೆ ಮಾಡುವ ಮತ್ತೊಂದಿಷ್ಟು ಶಬ್ದಾರ್ಥಗಳನ್ನು ತಿಳಿದುಕೊಳ್ಳೋಣ.

ಕರೋನಾ ಬಗ್ಗೆ ಗೊತ್ತಿಲ್ಲದ ಕತೆ ಹೇಳ್ತೆವೆ ಕೇಳಿ..ಸದ್ಯಕ್ಕೆ ಇದೊಂದು ಎಪಿಡಮಿಕ್

ಕ್ವಾರಂಟೇನ್, ಐಸೋಲೇಶನ್ ಮತ್ತು ಸೋಶಿಯಲ್ ಡಿಸ್ಟಂಸಿಂಗ್ ಎನ್ನುವ ಶಬ್ದಗಳನ್ನು ಜೋರಾಗಿ ಬಳಕೆ ಮಾಡಲಾಗುತ್ತದೆ,. ಮಾಧ್ಯಮಗಳಲ್ಲಿ, ಟಿವಿಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಎಲ್ಲಿ ನೋಡಿದರೂ ಈ ಶಬ್ದ ಇಂದಿನ ದಿನಮಾನಕ್ಕೆ ಸರ್ವೇ ಸಾಮಾನ್ಯ.

ಕ್ವಾರಂಟೇನ್(ರೋಗಿಯನ್ನು ಪ್ರತ್ಯೇಕಿಸುವುದು) :  ರೋಗಾಣು ಅಥವಾ ಸೋಂಕು ಹರಡುವುದನ್ನು ತಡೆಯಲು ತೆಗೆದುಕೊಳ್ಳುವ ಒಂದು ಆರಂಭಿಕ ಹಂತವೇ ಕ್ವಾರಂಟೇನ್. ಅಂದರೆ ಶಂಕಿತ ಅಥವಾ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಇತರರೊಂದಿಗಿನ ಸಂಪರ್ಕದಿಂದ ದೂರ ಮಾಡುವುದು.

ಔಟ್ ಬ್ರೇಕ್, ಎಪಿಡೆಮಿಕ್, ಮತ್ತು ಪೆಂಡಾಮಿಕ್ ಮೂರು ಹಂತಗಳಲ್ಲಿಯೂ ರೋಗಿಯನ್ನು ಪ್ರತ್ಯೇಕಿಸುವ ವ್ಯವಸ್ಥೆ ಮಾಡಲಾಗುತ್ತದೆ.  ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿಯೇ ಶಂಕಿತರನ್ನು ಬೇರೆಯದಾಗಿ ಆರೈಕೆ ಮಾಡುವ ಕೆಲಸ ಶುರುವಾಗುತ್ತದೆ.

ಐಸೋಲೇಶನ್ ಮತ್ತು ಕ್ವಾರಂಟೇನ್ ನಡುವಿನ ವ್ಯತ್ಯಾಸವೇನು?

ಎರಡನ್ನೂ ಒಂದೇ ಅರ್ಥದಲ್ಲಿ ಬಳಸಬಹುದು. ಆದರೆ ಐಸೋಲೇಶನ್ ಒಂದು ಹಂತ ಮೇಲೆ. ಇಲ್ಲಿ ರೋಗಿಯನ್ನು ಅಥವಾ ಸೋಂಕು ಕಾಣಿಸಿಕೊಂಡವನನ್ನು ಸಂಪೂರ್ಣವಾಗಿ ಇತರರಿಂದ ಪ್ರತ್ಯೇಕಿಸಿ ಇಡಲಾಗುತ್ತದೆ. ಕ್ವಾರಂಟೇನ್ ಒಂದು ಪ್ರಕ್ರಿಯೆಯಾಗಿದ್ದರೆ ಐಸೋಲೇಶನ್ ಅದರ ಸಂಪೂರ್ಣ ಅನುಷ್ಠಾನ.

ಕರೋನಾ ತಡೆಗೆ ಕರ್ನಾಟಕ ಸರ್ಕಾರದ ಮಾಸ್ಟರ್ ಪ್ಲಾನ್!

ಸೋಶಿಯಲ್ ಡಿಸ್ಟಂಸಿಂಗ್: ದೊಡ್ಡ ದೊಡ್ಡ ಸಭೆ ಸಮಾರಂಭಗಳಿಗೆ ನಿರ್ಬಂಧ, ಆರು ಅಡಿ ಅಥವಾ 2 ಮೀಟರ್  ಅಂತರ ವ್ಯಕ್ತಿಯಿಂದ ವ್ಯಕ್ತಿಯಿಂದ ವ್ಯಕ್ತಿಗೆ ದೂರ ಕಾಯ್ದುಕೊಳ್ಳುವುದು ಎಂದು ಹೇಳಿದರೂ ಇದಕ್ಕೆ ಸರಿಯಾದ ನಿರೂಪಣೆ ನೀಡಲು ಸಾಧ್ಯವಿಲ್ಲ. ಆದರೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಎಂದು ಕರೆಯಬಹುದು.

ಕೊರೋನಾ ಹಾವಳಿ ನೀಡುತ್ತಿರುವ ಈ ಸಂದರ್ಭದಲ್ಲಿ ನಾಗರಿಕರು ಸರ್ಕಾರ ಮತ್ತು ಮಾಧ್ಯಮಗಳು ನೀಡುವ ಜಾಗೃತಿ ಕ್ರಮಗಳನ್ನು, ಸೂಚನೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಎಚ್ಚರಿಕೆ, ಜಾಗೃತೆ ಮತ್ತು ಸ್ವಚ್ಛತೆ ನಮ್ಮನ್ನು ಕಾಪಾಡಲಿದೆ.

ಕರೋನಾದ ಸಕಲ ಸುದ್ದಿಗಳು

click me!