ನಿಮ್ಮ ಆರೋಗ್ಯ ತಿಳಿಯೋಕೆ ಯಾವ ಟೆಸ್ಟೂ ಬೇಡ! ಇಲ್ಲಿವೆ ಪ್ರಕೃತಿಯೇ ನೀಡಿದ 8 ಸರಳ ಟೆಸ್ಟ್‌!

Suvarna News   | Asianet News
Published : Jun 22, 2021, 03:24 PM IST
ನಿಮ್ಮ ಆರೋಗ್ಯ ತಿಳಿಯೋಕೆ ಯಾವ ಟೆಸ್ಟೂ ಬೇಡ! ಇಲ್ಲಿವೆ ಪ್ರಕೃತಿಯೇ ನೀಡಿದ 8 ಸರಳ ಟೆಸ್ಟ್‌!

ಸಾರಾಂಶ

ನಿಮ್ಮ ದೇಹ ಆರೋಗ್ಯವಾಗಿದೆಯಾ ಇಲ್ಲವಾ ಅಂತ ನಿಮ್ಮ ದೇಹವೇ ಹೇಳುತ್ತದೆ. ಅದು ನೀಡುವ ಎಂಟು ಸಿಂಪಲ್ ಆರೋಗ್ ಟೆಸ್ಟ್‌ಗಳು ಹೀಗಿವೆ.

ಒಳ್ಳೇ ಆರೋಗ್ಯ ಅಂದರೆ ಹೇಗಿರಬೇಕು ಎನ್ನುವುದು ಸದಾಕಾಲ ಎಲ್ಲರೂ ಉತ್ತರ ಬಯಸುವ ಒಂದು ಪ್ರಶ್ನೆ, ನಾನು ಎಲ್ಲ ರೀತಿಯಿಂದಲೂ ಆರೋಗ್ಯವಾಗಿ ಇದ್ದೇನೆಂದು ನನಗೆ ಹೇಗೆ ಗೊತ್ತಾಗುತ್ತದೆ? ನಾನು ಆರೋಗ್ಯವಾಗಿಲ್ಲ ಎಂಬುದರ ಸೂಚನೆಗಳು ಯಾವುವು? ಇದಕ್ಕಾಗಿಯೇ ನೂರೆಂಟು ಟೆಸ್ಟ್‌ಗಳನ್ನು ಅಲೋಪತಿಯಲ್ಲಿ ಮಾಡಿಸಲಾಗುತ್ತದೆ. ಆದರೆ ಅದೆಲ್ಲಾ ನಿಜಕ್ಕೂ ಅಗತ್ಯವೇ? ನ್ಯಾಚುರೋಪತಿ ತಜ್ಞರು, ಆಯುರ್ವೇದ ಪರಿಣತರು ನಿಮ್ಮ ಆರೋಗ್ಯವನ್ನು ಅರ್ಥ ಮಾಡಿಕೊಳ್ಳೋಕೆ ಕೆಲವು ಸೂತ್ರಗಳನ್ನು ನೀಡುತ್ತಾರೆ, ಈ ಸೂತ್ರಗಳು ಒಂದು ಸುಂದರ ಸಂಸ್ಕೃತ ಶ್ಲೋಕದಲ್ಲಿ ಅಡಕವಾಗಿವೆ. ಅದು ಹೀಗೆ:

ದೇಹೇ ಸರ್ವತ್ರ ಚೌಸ್‌ನಸ್ಯ ಸಮತಾ ಲಾಘವಮ್ ಸುಖಮ್

ಶುತ ತೀಕ್ಷ್ಣ ಗಧ್ ನಿದ್ರಾ ಚ ಮಾನಸೋಪಿ ಪ್ರಸನ್ನತಾ

ಶರೀರೇ ಕರ್ಮಸಾಮರ್ಥ್ಯಮ್ ಅನಾಲಸ್ಯಾ ಚ ಕರ್ಮಾಶು

ಸ್ವತ ಸ್ವೇದೋ ಗಂ ಕಲೇ ಸ್ವಾಸ್ಥ್ಯ ಲಕ್ಷಣಾತಿ ಹಿ

ಇದರ ಅರ್ಥ ಸುಂದರವಾದ ಎಂಟು ಸೂತ್ರಗಳಲ್ಲಿದೆ.

1. ದಿನಕ್ಕೊಮ್ಮೆ ಸರಾಗ ಮಲವಿಸರ್ಜನೆ

ದಿನಕ್ಕೊಮ್ಮೆ ಸರಾಗವಾಗಿ ಮಲ ವಿಸರ್ಜನೆಯಾಗಬೇಕು. ವಿಸರ್ಜನೆಗೆ ಕಷ್ಟ ಪಡಬಾರದು. ಮಲಕ್ಕೆ ವಿಚಿತ್ರವಾದ ಬಣ್ಣ ಹಾಗೂ ವಿಲಕ್ಷಣ ವಾಸನೆ ಇರಬಾರದು. ಪ್ರತಿದಿನ ಒಂದೇ ನಿಗದಿತ ಹೊತ್ತಿಗೆ ವಿಸರ್ಜನೆ ಆಗುತ್ತಿರಬೇಕು. ಮುಂಜಾನೆ ಆಗುತ್ತಿದ್ದರೆ ಒಳ್ಳೆಯದು. ಇದಕ್ಕಾಗಿ ಯಾವುದೇ ಔಷಧ, ಮಾತ್ರೆ ತೆಗೆದುಕೊಳ್ಳುವಂತಿರಬಾರದು. ನಮಗೆ ಬೇಡವಾದ ವಸ್ತು ನಮ್ಮ ದೇಹದೊಳಗೇ ಇದ್ದರೆ ಅದು ವಿಷವಾಗಿ ಪರಿವರ್ತನೆಯಾಗುತ್ತದೆ.

2. ಹೆಚ್ಚಿನ ಮೈತೂಕ ಇರಬಾರದು

ದೇಹದಿಂದ ತ್ಯಾಜ್ಯ ಕಾಲಕಾಲಕ್ಕೆ ಹೊರಹೋಗುತ್ತಿದ್ದರೆ ದೇಹ ಅದರ ತೂಕವನ್ನು ಎಷ್ಟು ಬೇಕೋ ಅಷ್ಟು ಉಳಿಸಿಕೊಳ್ಳುತ್ತದೆ.

3. ನಿರ್ಮಲವಾದ ಚರ್ಮ

ನಮ್ಮ ದೇಹದ ಒಳಗೆ ಏನಾಗುತ್ತಿದೆ ಎಂಬುದರ ಸೂಚಕ ಚರ್ಮ. ನಮ್ಮ ಚರ್ಮದಲ್ಲಿ ಕಲೆಗಳು, ಅಕಾಲಿಕ ಸುಕ್ಕು, ಮೊಡವೆಗಳು, ದೇಹದೊಳಗೆ ಏನೋ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತವೆ.

4. ಸೋಮಾರಿತನ ಇಲ್ಲದಿರುವಿಕೆ

ಮುಂಜಾನೆ ಐದಕ್ಕೆ ಎದ್ದು ರಾತ್ರಿ ಹತ್ತರವರೆಗೂ ಕೆಲಸ ಮಾಡುವಷ್ಟು ಶಕ್ತಿಯನ್ನು ಪ್ರಕೃತಿ ನಮಗೆ ನೀಡಿರುತ್ತದೆ. ನಾವು ನಡುವೆ ಬ್ರೇಕ್ ಇಲ್ಲದೇ ಕೆಲಸ ಮಾಡಬಹುದು. ಆದರೆ ಬ್ರೇಕ್ ಅಗತ್ಯ ಬೀಳುತ್ತಿದೆ ಎನಿಸಿದರೆ, ದಣಿವಾಗುತ್ತಿದೆ ಎನಿಸಿದರೆ, ಏನೋ ಸಮಸ್ಯೆ ಇದೆ ಎಂದರ್ಥ.

ಅಶ್ವಗಂಧದಿಂದ, ಬ್ರಾಹ್ಮಿವರೆಗೂ... ಆಯುರ್ವೇದ ಗಿಡಮೂಲಿಕೆಗಳ ಪ್ರಯೋಜನವೇ ಅದ್ಭುತ ...
 

5. ಚೆನ್ನಾಗಿ ಹಸಿವಾಗುವಿಕೆ

ನಮಗೆ ಹಸಿವಾಗುವಾಗ ಚೆನ್ನಾಗಿ, ಜೋರಾಗಿ ಹಸಿವಾಗಬೇಕು. ಹಸಿವಾಗುತ್ತಿಲ್ಲ ಎಂದರೆ ಹಿಂದಿನ ಊಟ ಸರಿಯಾಗಿ ಜೀರ್ಣವಾಗಿಲ್ಲ ಎಂದರ್ಥ. ನಮ್ಮ ಜೀರ್ಣಶಕ್ತಿ ಚೆನ್ನಾಗಿದ್ದರೆ ಒಳ್ಳೆಯ ಹಸಿವಾಗಿಯೇ ಆಗುತ್ತದೆ. ದಿನಕ್ಕೆ ಐದು ಬಾರಿಯಾದರೂ ಚೆನ್ನಾಗಿ ಹಸಿವಾಗಬೇಕು. ಹಾಂ, ಹೊಟ್ಟೆ ಹಸಿವ ಮಾತ್ರ, ಮನದ ಹಸಿವಲ್ಲ.

6. ದೇಹದಲ್ಲಿ ನೋವಿಲ್ಲದಿರುವಿಕೆ

ಕೆಲವೊಮ್ಮೆ ತಲೆನೋವು, ಕೆಲವೊಮ್ಮೆ ಬೆನ್ನುನೋವು, ಕಾಲುನೋವು- ಹೀಗೆ ನೋವುಗಳು ಸದಾ ಇದ್ದರೆ ದೇಹದಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಆರೋಗ್ಯವಂತ ಮನುಷ್ಯನಲ್ಲಿ ನೋವಿರುವುದಿಲ್ಲ.

ಯೋಗ ಮತ್ತು ಮಹಿಳೆಯ ಆರೋಗ್ಯ; ಗಮನದಲ್ಲಿಡಬೇಕಾದ ಅಂಶಗಳು! ...
 

7. ಗಾಢ ನಿದ್ರೆ 

ಶಿಶು ನಿದ್ರಿಸಿದಂತೆ ನಿದ್ರಿಸಬೇಕು. ಮಗು ಸೋಫಾದಲ್ಲಿ ಬಿದ್ದು ನಿದ್ದೆಹೋದರೆ ಬೆಳಗ್ಗಿನವರೆಗೂ ತಾನು ಸೋಫಾದಲ್ಲಿ ಮಲಗಿದ್ದೇನೆ ಎಂಬ ಅರಿವೇ ಹೊಂದಿರುವುದಿಲ್ಲ. ಆರೋಗ್ಯವಂತ ನಿದ್ರೆ ಎಂದರೆ ನಿಮಗೆ ಬಿದ್ದ ಕನಸುಗಳು ಮರುದಿನ ನೆನಪಿರಬಾರದು. ಫ್ಯಾನ್, ಎಸಿ ನಡುರಾತ್ರಿ ಆಫ್ ಆದರೆ ನಮಗೆ ಗೊತ್ತೇ ಆಗಬಾರದು.

8. ಸಕಾರಾತ್ಮಕ ಚಿಂತನೆಗಳು

ನಮ್ಮ ಸುತ್ತಮುತ್ತ ಅನೇಕ ಕೋಲಾಹಲಗಳ ಆಗುತ್ತಿರುತ್ತವೆ. ನೋವು, ಯಾತನೆ ಎಲ್ಲ ಇದೆ. ಆದರೆ ಅದೆಲ್ಲದರಿಂದ ವಿಚಲಿತರಾಗಿದರುವ, ಶಾಂತ ಸ್ವಭಾವ ನಮ್ಮಲ್ಲಿದ್ದರೆ, ಸಕಾರಾತ್ಮಕ ಯೋಚನೆಗಳೇ ಬರುತ್ತಿದ್ದರೆ, ಆಗ ನೀವು ಆರೋಗ್ಯವಾಗಿದ್ದೀರಿ ಎಂದರ್ಥ.

ಟೆಸ್ಟೋಸ್ಟೆರಾನ್ ಹಾರ್ಮೋನ್ ಗಳ ಬಗ್ಗೆ ತಿಳಿಯದೇ ಇರುವ ವಿಷಯಗಳು!! ...
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್