ಕೊರೋನಾ ಭಯದಿಂದ ಪಾರಾಗುವ 5 ಬಗೆಗಳು; ಡಾಕ್ಟರ್‌ ಹೇಳುವ ಮಾತು ಕೇಳಿ!

By Kannadaprabha NewsFirst Published Jul 9, 2020, 8:45 AM IST
Highlights

ಬಹಳ ಮುಖ್ಯವಾಗಿ ಕೊರೋನಾ ಅಂದಾಗ ನಮ್ಮನ್ನು ಕಾಡುವ ಆತಂಕಗಳು ಮೂರು. ಮೊದಲನೆಯದು- ಇದರಿಂದ ಸಾವು ಬರುತ್ತದೆ ಅನ್ನುವುದು, ಎರಡನೆಯದು- ಇದಕ್ಕೆ ಲಸಿಕೆ ಇಲ್ಲ ಅನ್ನೋದು. ಮೂರನೆಯದು- ಕೊರೋನಾ ಬಂದರೆ ಎರಡು ವಾರ ಆಸ್ಪತ್ರೆಯಲ್ಲಿ ಜೈಲಿನಲ್ಲಿ ಇದ್ದ ಹಾಗೆ ಇರಬೇಕಾಗುತ್ತೆ ಅನ್ನೋದು. ಆದರೆ ನಿಮ್ಮ ಈ ಆತಂಕ ನಿರಾಧಾರವಾದದ್ದು. ಕೊರೋನಾ ಭಯ ನಿಮಗೂ ಇದೆ ಅಂತಾದ್ರೆ ಇಲ್ಲಿ ಆ ಭಯದಿಂದ ಪಾರಾಗುವ ಐದು ವಿಧಾನಗಳಿವೆ.

- ಡಾ. ವಿಶಾಲ್‌ ರಾವ್‌

1. ಸಾವು ಬರುತ್ತಿರುವುದು ಶೇ.3ರಷ್ಟುಜನರಿಗೆ ಮಾತ್ರ

ಕೊರೋನಾ ಬಂದರೆ ಸಾವು ಬಂದ ಹಾಗೆ ಅನ್ನೋದು ತಪ್ಪು. ಕೊರೋನಾ ಬಂದವರಿಗೆಲ್ಲ ಸಾವು ಬರಲ್ಲ. ಶೇ.3ರಷ್ಟುಜನರಿಗೆ ಮಾತ್ರ ಬರುತ್ತದೆ. ಶೇ.97 ಜನರಿಗೆ ಸಾವು ಬರಲ್ಲ. ಸಾವಿನ ಭೀತಿ ಇರುವ ಶೇ.3 ಜನ ಬಿಪಿ, ಹೃದಯ ಕೋಶದ ತೊಂದರೆ, ಮಧುಮೇಹ, ಕ್ಯಾನ್ಸರ್‌ ರೋಗಿಗಳು, ಲಿವರ್‌ ಸಮಸ್ಯೆ ಇರುವವರು. ಈ ಬಗೆಯ ಸಮಸ್ಯೆಗಳಿರುವವರು ಮೆಡಿಸಿನ್‌ ಸಹಾಯದಿಂದ ಸಮಸ್ಯೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಏಕೆಂದರೆ ಇಂಥಾ ಸಮಸ್ಯೆ ಇರುವವರಲ್ಲಿ ಕೊರೋನಾದ ತೀವ್ರತೆ ಹೆಚ್ಚಿರುತ್ತದೆ. ಉಳಿದ ಶೇ.93 ಜನ ಉಳಿದೆಲ್ಲ ಕಾಯಿಲೆಯಂತೆ ಕೊರೋನಾದಿಂದಲೂ ಪಾರಾಗುತ್ತಾರೆ.

2. ಲಸಿಕೆ ನಮ್ಮೊಳಗೇ ಇದೆ

ಶೇ.97ರಷ್ಟುಜನರಲ್ಲಿ ಅವರ ದೇಹದೊಳಗೇ ಇದಕ್ಕೆ ಲಸಿಕೆ ಇದೆ. ಥೈಮಸ್‌ ಗ್ಲಾಂಡ್‌ ಒಳಗೆ ಈ ರೋಗಕ್ಕೆ ಪ್ರತಿರೋಧ ಶಕ್ತಿ ಸೃಷ್ಟಿಯಾಗುತ್ತದೆ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡು ಹಸಿರು ತರಕಾರಿ, ಮೊಳಕೆ ಕಾಳು, ಹಣ್ಣು ಇತ್ಯಾದಿ ಪೌಷ್ಠಿಕ ಆಹಾರಗಳನ್ನು ಸೇವಿಸುತ್ತಿದ್ದರೆ ಕೊರೋನಾ ಬಂದರೂ ಭಯ ಪಡಬೇಕಿಲ್ಲ.

ಮೈಕೈ ನೋವು ಹೋಗಲಾಡಿಸಲು ಬಿಕೆಎಸ್‌ ಅಯ್ಯಂಗಾರರ ಸರಳ ಯೋಗ

3. ಆಸ್ಪತ್ರೆಗೆ ಸೇರಿದರೂ ನಿಮ್ಮನ್ನು ಬ್ಯುಸಿಯಾಗಿಟ್ಟುಕೊಳ್ಳಿ

ಕೊರೋನಾ ಸೋಂಕಿತರಾಗಿ ಆಸ್ಪತ್ರೆಗೆ ಸೇರಿದವರಲ್ಲಿ ನಾನು ಪದೇ ಪದೇ ಹೇಳುತ್ತಿರುವುದು ನಿಮ್ಮನ್ನು ನೀವು ಬ್ಯುಸಿಯಾಗಿಟ್ಟುಕೊಳ್ಳಿ. ನಿಮ್ಮ ಈ ಟೈಮ್‌ನ ಕತೆಯನ್ನೇ ಕೂತು ಬರೆಯಿರಿ. ನಿಮ್ಮಿಷ್ಟದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಬದಲು ಬೇಜಾರು ಮಾಡಿಕೊಂಡು ಶಪಿಸುತ್ತಾ ಕೂರುವುದು ಒಳ್ಳೆಯದಲ್ಲ.

4. ಯುವಕರು ಹೆಚ್ಚು ಜಾಗೃತೆಯಿಂದಿರಿ

ಈ ಕೊರೋನಾ ವೈರಸ್‌ ಸೋಷಿಯಲ್‌ ವೈರಸ್‌. ಯುವಕರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚು. ನಾವೆಷ್ಟುಎಷ್ಟುಸೋಷಿಯಲ್‌ ಆಗಿರುತ್ತೇವೋ ಅಷ್ಟುಡೇಂಜರ್‌. ಹೀಗಾಗಿ 20 ರಿಂದ 40 ವಯಸ್ಸಿನ ಯುವಕರು ಬಹಳ ಜಾಗೃತೆಯಿಂದಿರಿ. ಸ್ನಾನ ಮಾಡಿದ ಬಳಿಕವೇ ಹಿರಿಯರನ್ನು, ಮಕ್ಕಳನ್ನು ಮಾತಾಡಿಸಿ. ಮನೆಯಲ್ಲಿರುವಾಗಲೂ ಮಾಸ್ಕ್‌ ಧರಿಸಿಯೇ ಅವರ ಜೊತೆಗೆ ಮಾತನಾಡಿ. ಅವರಲ್ಲಿ ಸಣ್ಣ ಪುಟ್ಟಕೆಮ್ಮು, ನೆಗಡಿಯಂಥಾ ಸಮಸ್ಯೆ ಬಂದರೂ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ.

5. ಇದು ಮಾನವೀಯತೆ ಮೆರೆಯಬೇಕಾದ ಕಾಲ

ನಿಮ್ಮ ಪಕ್ಕದ ಮನೆಯಲ್ಲಿ ಕೊರೋನಾ ಸೋಂಕಿತ ಇದ್ದರೆ ನಿರ್ದಯವಾಗಿ ವರ್ತಿಸಬೇಡಿ. ಇದು ಮಾನವೀಯತೆಯಿಂದ ಇರಬೇಕಾದ ಕಾಲ. ಅವರಿಗೆ ನಿಮ್ಮಿಂದ ಸಾಧ್ಯವಾದಷ್ಟುಸಹಾಯ ಮಾಡಿ. ಈಗ ನಾವು ಪರಸ್ಪರ ನೆರವಾಗಲೇಬೇಕಿದೆ. ನಮ್ಮ ಸ್ವಾರ್ಥ ಸಾಧನೆಯನ್ನೆಲ್ಲ ಪಕ್ಕಕ್ಕಿಡಲೇಬೇಕು. ಹೀಗಿದ್ದರೆ ಆತಂಕ ತನ್ನಿಂತಾನೇ ತಹಬಂದಿಗೆ ಬರುತ್ತದೆ.

ಕಧ: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕಷಾಯ

ಕೊರೋನಾ ಡೈರಿಯ ಇಂಟರೆಸ್ಟಿಂಗ್‌ ಪುಟಗಳು

ನನ್ನ ಕೊರೋನಾ ಪೇಶೆಂಟ್‌ಗಳಿಗೆ ಸದಾ ಬ್ಯುಸಿಯಾಗಿರಲು, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಈ ಟೈಮ್‌ ಅನ್ನು ಸದುಪಯೋಗಪಡಿಸಿಕೊಳ್ಳಲು ಹೇಳುತ್ತಿರುತ್ತೇನೆ. ನಾನು ಚಿಕಿತ್ಸೆ ನೀಡುತ್ತಿರುವ ಒಬ್ಬ ಕೊರೋನಾ ಪೇಶೆಂಟ್‌ ತಮ್ಮ ಈ ಕೊರೋನಾ ಅನುಭವಗಳದ್ದೇ ಪುಸ್ತಕ ಬರೆಯುತ್ತಿದ್ದಾರೆ. ಮತ್ತೊಬ್ಬ ಡಿಜೆ ಇದ್ದಾನೆ, ಆತ ಬೆಡ್‌ ಮೇಲೆ ಕೂತುಕೊಂಡೇ ಹೊಸ ಹೊಸ ರಾಗಗಳ ಸಂಯೋಜನ ಮಾಡುತ್ತಿದ್ದಾನೆ. ಇನ್ನೊಬ್ಬ ವ್ಯಕ್ತಿ ಆನ್‌ಲೈನ್‌ ಕಾನ್ಫರೆನ್ಸ್‌ ಮಾಡುತ್ತಾರೆ. ಜನರಿಗೆ ಪ್ರೇರಣೆ ಕೊಡುವ ಕೆಲಸ ಮಾಡುತ್ತಿದ್ದಾರೆ. ನಾನಿದಕ್ಕೆ ಕೊರೋನಾ ಡೈರಿ ಅಂತ ಹೆಸರಿಟ್ಟಿದ್ದೇನೆ. ಇದರಲ್ಲಿ ಹಲವಾರು ಇಂಟರೆಸ್ಟಿಂಗ್‌ ಕತೆಗಳಿವೆ.

click me!