ರೇಪ್ ಸಂತ್ರಸ್ತೆಯಿಂದ ದಂಡ ವಸೂಲಿ ಮಾಡಿದ ಪೊಲೀಸ್!

First Published May 14, 2020, 5:28 PM IST

ವಿಶ್ವವ್ಯಾಪಿ ಕೊರೋನಾ ವೈರಸ್‌ನಿಂದ ಜನರು ಕಂಗಾಲಾಗಿದ್ದರೆ. ಈ ವೈರಸ್‌ನಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈವರೆಗೂ 43 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಡಿದೆ. ಜೊತೆಗೆ ಇದರಿಂದ ಮೃತಪಟ್ಟವರ ಸಂಖ್ಯೆಯೂ 3 ಲಕ್ಷ ಸಮೀಪಿಸಿದೆ. ಈ ಮಹಾಮಾರಿಯಿಂದಾಗಿ ಅನೇಕ ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ರಷ್ಯಾದಲ್ಲೂ ಕೊರೋನಾದಿಂದಾಗಿ ಲಾಕ್‌ಡೌನ್ ಘೋಷಿಸಲಾಗಿದೆ. ಇಬ್ಬರು ಹೆಣ್ಮಕ್ಕಳು ಅಚಾನಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಮೇಲಾದ ರೇಪ್ ಹಾಗೂ ದರೋಡೆ ವಿಚಾರವಾಗಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ಮಾತ್ರ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದೀರೆಂದು ಉಲ್ಟಾ ಆ ಇಬ್ಬರು ಹೆಣ್ಮಕ್ಕಳ ವಿರುದ್ಧವೇ ಕಿಡಿ ಕಾರಿದ್ದು, ದಂಡ ವಿಧಿಸಿದ್ದಾರೆ. ಈ ಘಟನೆ ಜನರನ್ನು ಅಚ್ಚರಿಗೀಡು ಮಾಡಿದೆ.

ಈ ಘಟನೆ ನಡೆದಿದ್ದು ಏಪ್ರಿಲ್ 20 ರಂದು. ಆದರೆ ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ದ ಸನ್‌ನಲ್ಲಿ ಪ್ರಕಟಗೊಂಡ ವರದಿಯನ್ವಯ ಸೈಬೇರಿಯಾದ ಕ್ರಾನ್ನೋಯಾರ್ಕ್‌ ನಿವಾಸಿಗಳಾದ 17 ಹಾಗೂ 18 ವರ್ಷದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಹಾಗೂ ದರೋಡೆ ನಡೆದಿದೆ.
undefined
ಆತ್ಮೀಯ ಗೆಳತಿಯರಾಗಿರುವ ಈ ಇಬ್ಬರು ಯುವತಿಯರು, ಪರಿಸ್ಪರ ಭೇಟಿಯಾಗಿದ್ದರು. ಲಾಕ್‌ಡೌನ್‌ನಿಂದಾಗಿ ಗಲ್ಲಿ ಗಲ್ಲಿಗಳೂ ನಿರ್ಜನವಾಗಿದ್ದವು. ಹೀಗಿರುವಾಗ ದುಷ್ಕರ್ಮಿಯೊಬ್ಬ ಅವರನ್ನು ಹಿಡಿದಿದ್ದಾನೆ.
undefined
ಇವರಲ್ಲಿ ಒಬ್ಬಾಕೆ ಮೇಲೆ ಆತ ಅತ್ಯಾಚಾರ ನಡೆಸಿದ್ದು, ಮತ್ತೊಬ್ಬಾಕೆಯನ್ನು ಲೈಂಗಿಕವಾಗಿ ಶೋಷಿಸಿದ್ದಾನೆ. ಬಳಿಕ ಇಬ್ಬರ ಬಳಿ ಇದ್ದ ಚಿನ್ನ ಹಾಗೂ ಪರ್ಸ್ ತೆಗೆದುಕೊಂಡು ಪರಾರಿಯಾಗಿದ್ದಾನೆ.
undefined
ಘಟನೆ ಬಳಿಕ ಇಬ್ಬರೂ ಯುವತಿಯರು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲಿದ್ದ ಪೊಲೀಸರಿಗೆ ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಅದರ ಆಧಾರದ ಮೇಲೆ 55 ವರ್ಷದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಆತನ ಬಳಿ ಇದ್ದ ಈ ಇಬ್ಬರು ಯುವತಿಯರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
undefined
ಆದರೆ ಅತ್ಯಾಚಾರದಂತಹ ಅಪರಾಧದ ಸಂತ್ರಸ್ತರಾಗಿದ್ದ ಈ ಯುವತಿಯರಿಗೆ ಪೊಲಿಸರು ಈಗ ದಂಡ ವಿಧಿಸಿರುವುದೇ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿರುವುದಕ್ಕೆ ಇಬ್ಬರೂ ಯುವತಿಯರಿಗೆ ಪೊಲೀಸರು 6 ಸಾವಿರ ರೂ. ದಂಡ ವಿಧಿಸಿದ್ದಾರೆ.
undefined
ರಷ್ಯಾದಲ್ಲಿ ಕೇವಲ ಅಗತ್ಯ ಕಾರ್ಯ ನಿಮಿತ್ತ ಹೊರಗೆ ಸುತ್ತಾಡಲು ಅವಕಾಶವಿದೆ ಎಂಬುವುದು ಪೊಲೀಸರ ವಾದ. ಆದರೆ ಈ ಇಬ್ಬರು ಯುವತಿಯರುನೀಡಿರುವ ಹೇಳಿಕೆ ಅನ್ವಯ ಇವರು ಪರಸ್ಪರ ಭೇಟಿಯಾಗುವ ಸಲುವಾಗಿ ಹೊರಗೆ ಹೋಗಿದ್ದರೆಂಬುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
undefined
ಇದೇ ಕಾರಣದಿಂದ ಲಾಕ್‌ಡೌನ್ ನಿಮ ಉಲ್ಲಂಘಿಸಿದ್ದೀರೆಂದು ಪೊಲೀಸರು ದಂಡ ವಿಧಿಸಿದ್ದಾರೆ.
undefined
ಆದರೆ ಈ ವಿಚಾರ ಗಂಭೀರವಾಗಿ ಚಚರ್ಚೆ ಉಟ್ಟು ಹಾಕಿದಾಗ ಪೊಲೀಸರು ದಂಡ ಬೇಡವೆಂದು ಬಿಟ್ಟಿದ್ದಾರೆ.
undefined
click me!