ಗರ್ಭಾವಸ್ಥೆಯಲ್ಲಿ instant noodles ತಿನ್ನೋದು ತುಂಬಾನೆ ಡೇಂಜರ್

First Published | Oct 28, 2022, 5:50 PM IST

ಇತ್ತೀಚಿನ ದಿನಗಳಲ್ಲಿ, ಫಟಾ ಫಟ್ ಆಗಿ ಸೇವಿಸುವಂತಹ ಅನೇಕ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ, ಅವುಗಳಿಂದ ಅಡುಗೆ ಮಾಡಲು ಕಷ್ಟಪಡಬೇಕಾಗಿಲ್ಲ. ಈ ಎಲ್ಲಾ ಆಹಾರಗಳಲ್ಲಿ, ಇನ್ಸ್ಟಂಟ್ ನೂಡಲ್ಸ್ ಜನರು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಇನ್ಸ್ಟಂಟ್ ನೂಡಲ್ಸ್ ಅನ್ನು ಎರಡು ನಿಮಿಷಗಳಲ್ಲಿ ತಯಾರಿಸಲಾಗುತ್ತೆ. ಅಷ್ಟೇ ಅಲ್ಲ ಇದು ತಿನ್ನಲು ಸಹ ರುಚಿಕರವಾಗಿರುತ್ತೆ, ಹಾಗಾಗಿ ಜನರು ಅವುಗಳನ್ನು ತಿನ್ನಲು ಇಷ್ಟಪಡ್ತಾರೆ.

ಗರ್ಭಧಾರಣೆಯ(Pregnancy) ಒಂಬತ್ತು ತಿಂಗಳುಗಳು ತುಂಬಾ ಸೂಕ್ಷ್ಮವಾಗಿರುತ್ತವೆ ಮತ್ತು ಗರ್ಭಿಣಿ ಮಹಿಳೆ ಈ ಸಮಯದಲ್ಲಿ ತನ್ನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲು ಹೇಳಲಾಗುತ್ತೆ. ನೀವು ಕೂಡ ಇನ್ಸ್ಟಂಟ್ ನೂಡಲ್ಸ್ ಇಷ್ಟಪಡುತ್ತಿದ್ದರೆ  ಮತ್ತು  ಗರ್ಭಾವಸ್ಥೆಯಲ್ಲಿ ಅದನ್ನು ತಿನ್ನಲು ಬಯಸಿದರೆ, ಅದಕ್ಕೂ ಮೊದಲು ಗರ್ಭಾವಸ್ಥೆಯಲ್ಲಿ ಇನ್ಸ್ಟಂಟ್ ನೂಡಲ್ಸ್ ತಿನ್ನೋದು ಎಷ್ಟು ಸುರಕ್ಷಿತ ಎಂದು ತಿಳಿಯಿರಿ.

ಸಂಸ್ಕರಿಸಿದ ಆಹಾರ ಮತ್ತು ತ್ವರಿತ ಆಹಾರವನ್ನು(Instant food) ಮಿತಿಯೊಳಗೆ ಸೇವಿಸಬೇಕು. ಕೆಲವೊಮ್ಮೆ ಇದನ್ನು ತಿನ್ನೋದರಿಂದ ಹೆಚ್ಚು ಹಾನಿಯಾಗೋದಿಲ್ಲ, ಆದರೆ ನೀವು ಇದನ್ನೇ ತಿನ್ನುತ್ತಿದ್ದರೆ, ಅದರಿಂದ ಆರೋಗ್ಯಕ್ಕೆ ಹಾನಿಯಾಗೋದು ಖಚಿತ. ಯಾಕೆಂದರೆ ಅವು ಕಡಿಮೆ ಪೌಷ್ಟಿಕಾಂಶವನ್ನು ಒದಗಿಸುತ್ತವೆ.
 

Latest Videos


ಝೀರೋ ಪೌಷ್ಠಿಕಾಂಶ(Zero nutrient)
ಇನ್ಸ್ಟಂಟ್ ನೂಡಲ್ಸ್ ಒಂದು ರೀತಿಯ ಫಾಸ್ಟ್ ಫುಡ್ ಆಗಿದ್ದು, ಇದನ್ನು ತಯಾರಿಸೋದು ತುಂಬಾ ಸುಲಭ. ಇದು ಹಸಿವನ್ನು ಶಾಂತಗೊಳಿಸುತ್ತೆ, ರುಚಿಯೂ ಚೆನ್ನಾಗಿರುತ್ತೆ ಮತ್ತು ಮಿತವ್ಯಯಕಾರಿ ಆದರೆ ಇದರಲ್ಲಿ ಯಾವುದೇ ಪೌಷ್ಟಿಕ ಅಂಶ ಇರೋದಿಲ್ಲ. ಇನ್ಸ್ಟಂಟ್ ನೂಡಲ್ಸ್ ಯಾವುದೇ ರೀತಿಯಲ್ಲಿ ಸಮತೋಲಿತ ಆಹಾರದ ಭಾಗವಾಗಲು ಸಾಧ್ಯವಿಲ್ಲ. 
 

ಇನ್ಸ್ಟಂಟ್ ನೂಡಲ್ಸ್, ಸಾಕಷ್ಟು ಉಪ್ಪು, ಕೃತಕ ಪರಿಮಳ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು(Saturated fat) ಹೊಂದಿರುತ್ತೆ. ಮೊನೊಸೋಡಿಯಂ ಗ್ಲುಟಮೇಟ್ ಮತ್ತು ಸಂರಕ್ಷಕಗಳಂತಹ ಸಂಯೋಜಕಗಳನ್ನು ಹೊಂದಿದೆ, ಅವುಗಳನ್ನು ದೀರ್ಘಕಾಲ ಬಾಳಿಕೆ ಬರಲು ಮತ್ತು ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತೆ.

ಅಧಿಕ ಉಪ್ಪು(Salt) ಹೊಂದಿರುವ ಆಹಾರ
ನೀವು ಈಗಾಗಲೇ ಗರ್ಭಾವಸ್ಥೆಯಲ್ಲಿ ಊತ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಅಪಾಯದಲ್ಲಿದ್ದೀರಿ, ಈ ಸಮಯದಲ್ಲಿ ನೀವು ಹೆಚ್ಚು ಸೋಡಿಯಂ ತೆಗೆದುಕೊಳ್ಳೋದರಿಂದ ಈ ಪರಿಸ್ಥಿತಿ ಹದಗೆಡಬಹುದು. ಅಧಿಕ ಸಾಲ್ಟ್ ಆಹಾರವು ಅಧಿಕ ರಕ್ತದೊತ್ತಡ ಮತ್ತು ಆರೋಗ್ಯ ಹಾನಿಗೆ ಕಾರಣವಾಗಬಹುದು.

ಇನ್ಸ್ಟಂಟ್ ನೂಡಲ್ಸ್ ನಲ್ಲಿ ಪ್ರೋಟೀನ್(Protein), ವಿಟಮಿನ್ಸ್, ಮಿನರಲ್ಸ್ ಮತ್ತು ಫೈಬರ್ ನಂತಹ ಅಗತ್ಯ ಪೋಷಕಾಂಶಗಳ ಕೊರತೆ ಇರುತ್ತದೆ, ಆದ್ದರಿಂದ ಅವು ಮುಖ್ಯ ಆಹಾರವಾಗಲು ಸಾಧ್ಯವಿಲ್ಲ. ಹಾಗಾಗಿ ಇನ್ಸ್ಟಂಟ್ ನೂಡಲ್ಸ್ ಹೆಚ್ಚು ಸೇವಿಸಬಾರದು. ಇದು ಮೈದಾ ಆಗಿರೋದರಿಂದ ದೇಹಕ್ಕೆ ಹೆಚ್ಚು ಹಾನಿಯಾಗುತ್ತೆ.

ಕೆಲವೊಮ್ಮೆ ತಿನ್ನಬಹುದು
ನೀವು ಕೆಲವೊಮ್ಮೆ ಇನ್ಸ್ಟಂಟ್ ನೂಡಲ್ಸ್ ತಿನ್ನಲು ಬಯಸಿದರೆ, ಉಪ್ಪು ಮತ್ತು ಇತರ ಕೃತಕ ಫ್ಲೇವರ್ ಗಳನ್ನು(Artificial flavour) ಕಡಿಮೆ ಸೇವಿಸಿ. ಪೌಚ್ ನೊಂದಿಗೆ ನೀಡಲಾದ ಫ್ಲೇವರ್ ಅಥವಾ ಟೆಸ್ಟ್ ಮೇಕರ್ ನ ಅರ್ಧ ಅಥವಾ ಅರ್ಧಕ್ಕಿಂತ ಕಡಿಮೆ ಭಾಗವನ್ನು ಮಾತ್ರ ಬಳಸಿ ಅಥವಾ, ನೀವು ಅದನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು.
 

ರುಚಿಯನ್ನು ಹೆಚ್ಚಿಸೋದು ಹೇಗೆ?
ಸಾದಾ ನೀರಿನಲ್ಲಿ ನೂಡಲ್ಸ್ ಕುದಿಸುವ ಬದಲು, ಮನೆಯಲ್ಲಿ ತಯಾರಿಸಿದ ತರಕಾರಿಗಳನ್ನು ಬಳಸಿ ಅಥವಾ ಚಿಕನ್(Chicken) ಸ್ಟೂಪ್ ಬಳಸಿ. ನೀರಿಗೆ ತಾಜಾ ಹರ್ಬ್ಸ್ ಮತ್ತು ಮಸಾಲೆಗಳನ್ನು ಸೇರಿಸಿ. ಬೆಳ್ಳುಳ್ಳಿ, ಈರುಳ್ಳಿ, ಕೊತ್ತಂಬರಿ, ಕರಿಮೆಣಸು ಮತ್ತು ನಿಂಬೆ ರಸ, ಇವೆಲ್ಲವೂ ರುಚಿಕರವಾದ ಟ್ವಿಸ್ಟ್ ಗಾಗಿ ಸೇರಿಸಬಹುದು.
 

ಆರೋಗ್ಯಕರವಾಗಿಸೋದು ಹೇಗೆ?
ನೂಡಲ್ಸ್ ಗೆ ಪೋಷಕಾಂಶ ಭರಿತ ಪದಾರ್ಥಗಳನ್ನು ಸೇರಿಸಿ. ಪಾಲಕ್, ಬೀನ್ಸ್, ಕ್ಯಾರೆಟ್, ಅಣಬೆ, ಹೂಕೋಸು, ಬಟಾಣಿ, ಹಸಿರು ಈರುಳ್ಳಿ, ಕ್ಯಾಪ್ಸಿಕಂ ಅಥವಾ ಎಲೆಕೋಸು ಮುಂತಾದ ತರಕಾರಿಗಳನ್ನು ಸೇರಿಸಿ.  ಚೀಸ್ ಕ್ಯೂಬ್, ಟೋಫು, ಬೇಯಿಸಿದ ಮೊಟ್ಟೆ(Egg), ಬೇಯಿಸಿದ ಚಿಕನ್ ಅಥವಾ ಮೀನನ್ನು ಸಹ ಸೇರಿಸಬಹುದು.
 

click me!