Diwali 2022: ದೀಪಾವಳಿ ಪಾರ್ಟಿಗಾಗಿ ನೀತಾ ಅಂಬಾನಿ ಜ್ಯುವೆಲ್ಲರಿ ಕಲೆಕ್ಷನ್‌

Published : Oct 26, 2022, 02:24 PM ISTUpdated : Oct 26, 2022, 02:25 PM IST

ದಿನದಲ್ಲಿಯೇ ಕೋಟಿಗಟ್ಟಲೆ ಸಂಪಾದನೆ ಮಾಡುವ ಅಂಬಾನಿ ಫ್ಯಾಮಿಲಿಯಲ್ಲಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಲೈಫ್‌ಸ್ಟೈಲ್‌ ಎಲ್ಲರನ್ನೂ ದಂಗುಪಡಿಸುತ್ತೆ. ಕಾಸ್ಟ್ಲೀ ಸೀರೆ, ಚಪ್ಪಲಿ, ವಾಚ್‌ ಕಲೆಕ್ಷನ್ ಇರೋ ನೀತಾ ಅಂಬಾನಿ ಬಳಿಯಿರೋ ಕಾಸ್ಟ್ಲೀ ನೆಕ್ಲೇಸ್ ಕಲೆಕ್ಷನ್ ಸಖತ್ತಾಗಿದೆ. ಅದರಲ್ಲೂ ದೀಪಾವಳಿ ಪಾರ್ಟಿಗೆ ಹೇಳಿ ಮಾಡಿಸಿದಂತಿರೋ ಜ್ಯುವೆಲ್ಲರಿ ಕಲೆಕ್ಷನ್ ನೋಡೋಣ ಬನ್ನಿ.  

PREV
17
Diwali 2022: ದೀಪಾವಳಿ ಪಾರ್ಟಿಗಾಗಿ ನೀತಾ ಅಂಬಾನಿ ಜ್ಯುವೆಲ್ಲರಿ ಕಲೆಕ್ಷನ್‌

ವಿಶ್ವದ ಸಿರಿವಂತರಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಪತ್ನಿ. ಲಕ್ಷಾಂತರ ಬೆಲೆ ಬಾಳುವ ಆಹಾರ ತಿನ್ನುತ್ತಾರೆ, ಬಟ್ಟೆ ಧರಿಸುತ್ತಾರೆ, ಚಪ್ಪಲಿ, ಬ್ಯಾಗ್ಸ್ ಎಲ್ಲವೂ ಬ್ರಾಂಡೆಂಡ್ ಆಗಿರುತ್ತೆ. ಅಷ್ಟೇ ಅಲ್ಲ ಸೌಂದರ್ಯ ಕಾಪಾಡಿಕೊಳ್ಳಲು ಏನೇನೇ ಸಾಧ್ಯವೋ ಎಲ್ಲವನ್ನೂ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ಅವರ ದುಬಾರಿ ಸೀರೆ, ನೆಕ್ಲೇಸ್ ಕಲೆಕ್ಷನ್ ವಾವ್ಹ್ ಅನ್ನುವಂತಿದೆ. ಇದರಲ್ಲಿ ಡೈಮಂಡ್, ಎಮರಾಲ್ಡ್‌, ಕುಂದನ್ ಜ್ಯುವೆಲ್ಲರಿ ಎಲ್ಲವೂ ಸೇರಿದೆ.
 

27

ಆರೆಂಜ್ ಸೀರೆ ಧರಿಸಿದ್ದ ನೀತಾ ಅಂಬಾನಿ ಲಾಂಗ್ ಡೈಮಂಡ್ ನೆಕ್ಲೇಸ್ ಧರಿಸಿದ್ದರು. ಇದು ಸಖತ್ ಹೈಲೈಟ್ ಆಗಿ ಕಾಣುತ್ತಿತ್ತು. ಡೈಮಂಡ್ ಸರಕ್ಕೆ ಮ್ಯಾಚಿಂಗ್ ಕಿವಿಯೋಲೆ ಇನ್ನಷ್ಟು ಚೆನ್ನಾಗಿ ಒಪ್ಪುತ್ತಿತ್ತು.

37
nita ambani

ಪ್ರಿನ್ಸೆಸ್-ಕಟ್ ಡೈಮಂಡ್ ನೆಕ್ಲೇಸ್
ಆನಂದ್ ಪಿರಾಮಲ್ ಜೊತೆ ಮಗಳು ಇಶಾ ಅಂಬಾನಿಯ ಮದುವೆಯಲ್ಲಿ, ನೀತಾ ಅಂಬಾನಿ ಅದ್ಭುತವಾಗಿ ಕಾಣುತ್ತಿದ್ದರು. ಅವರು ಬೇಬಿ ಪಿಂಕ್ ಬಣ್ಣದ ಶಿಫಾನ್ ಸೀರೆಯನ್ನು ಧರಿಸಿದ್ದರು. ಅದರ ಮೇಲೆ ಕೆನೆ ಬಣ್ಣದ ಕಲ್ಲು ಮತ್ತು ಬೂಟಿ ವರ್ಕ್‌ನಿಂದ ಹೆಚ್ಚು ಅಲಂಕರಿಸಲಾಗಿತ್ತು. ಜೊತೆಗೆ, ಘನಾಕೃತಿಯ ಆಕಾರದ ವಜ್ರಗಳು ಮತ್ತು ಹೊಂದಾಣಿಕೆಯ ಕಿವಿಯೋಲೆಗಳನ್ನು ಒಳಗೊಂಡ ರಾಜಕುಮಾರಿ-ಕಟ್ ಡೈಮಂಡ್ ನೆಕ್‌ಪೀಸ್ ಎಲ್ಲರ ಗಮನ ಸೆಳೆಯಿತು.

47

ಮೆರೂನ್‌ ಕಲರ್‌ಗೆ ಸೀರೆಗೆ ನೀತಾ ಅಂಬಾನಿ ಲಾಂಗ್ ನೆಕ್ಲೇಸ್ ಧರಿಸಿದ್ದರು. ಹಲವು ಸ್ಟೋನ್‌ಗಳಿಂದ ಅಲಂಕರಿಸಲ್ಪಟ್ಟ ಈ ನೆಕ್ಲೇಸ್ ವಿಭಿನ್ನ ಮತ್ತು ಆಕರ್ಷಕವಾಗಿತ್ತು. ದೀಪಾವಳಿ ಪಾರ್ಟಿಗೆ ಹೇಳಿ ಮಾಡಿಸಿದಂತಿತ್ತು.

57

ಪರ್ಲ್ಸ್‌ ಎಂಥಾ ಸಂದರ್ಭಗಳಿಗೂ, ಕಾರ್ಯಕ್ರಮಗಳಿಗೂ ಅತ್ಯುತ್ತಮವಾಗಿ ಸೂಟ್ ಆಗುತ್ತದೆ. ಇಂಥಹದ್ದೇ ಶಾರ್ಟ್ ಮತ್ತು ಐದು ಎಳೆಯ ಪರ್ಲ್‌ ನೆಕ್ಲೇಸ್‌ನಲ್ಲಿ ನೀತಾ ಅಂಬಾನಿ ಮಿಂಚಿದ್ದರು. ಮುತ್ತಗಳನ್ನೇ ಜೋಡಿಸಿದ ಕಿವಿಯೋಲೆಯನ್ನು ಧರಿಸಿದ್ದರು.

67

ಕಾರ್ಯಕ್ರಮವೊಂದಕ್ಕೆ ನೀತಾ ಅಂಬಾನಿ ಧರಿಸಿದ್ದ ಬೀಡ್ಸ್‌ ನೆಕ್ಲೇಸ್‌ ಎಂಥವರ ಗಮನವನ್ನೂ ಸೆಳೆಯುವಂತಿತ್ತು. ಪರ್ಲ್ಸ್‌ ಲಾಂಗ್ ನೆಕ್ಲೇಸ್‌ಗೆ ಮರೂನ್‌ ಬೀಡ್ಸ್ ಇರುವ ಸರ ಅಟ್ರ್ಯಾಕ್ಟಿವ್ ಆಗಿತ್ತು.

77

ಪಚ್ಚೆ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ವಜ್ರದ ಹಾರ
ಶ್ರೀಮಂತ ಉದ್ಯಮಿಯ ಪತ್ನಿ ಕೆಲವು ವಿಶಿಷ್ಟವಾದ ವಜ್ರದ ಆಭರಣಗಳನ್ನು ಹೊಂದಿದ್ದಾರೆ. ಅದರಲ್ಲೊಂದು ಕತ್ತರಿಸದ ವಜ್ರಗಳು ಮತ್ತು ದೈತ್ಯ ಪಚ್ಚೆಗಳಿಂದ ಅಲಂಕರಿಸಲ್ಪಟ್ಟ ವಿಶಿಷ್ಟವಾದ ಹಾರ. ಅವರು ತನ್ನ ನೆಕ್‌ಪೀಸ್ ಅನ್ನು ಹೊಂದಿಕೆಯಾಗುವ ಕಿವಿಯೋಲೆಗಳು, ದೊಡ್ಡ ಉಂಗುರ ಮತ್ತು ಹೂವಿನ ವಜ್ರದ ಬಳೆಗಳೊಂದಿಗೆ ಜೋಡಿಸಿದ್ದರು. ಕೆಂಪು ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.

Read more Photos on
click me!

Recommended Stories