Health Tips: ಹೆರಿಗೆಯ ನಂತರದ ಸಮಸ್ಯೆಗಳ ಬಗ್ಗೆ ಮಹಿಳೆಯರು ತಿಳಿದಿರಲೇಬೇಕು!

First Published Oct 27, 2022, 5:05 PM IST

ಹೆರಿಗೆ ಅನ್ನೋದು ಮಹಿಳೆಯರ ಜೀವನದ ಒಂದು ಪ್ರಮುಖ ಮತ್ತು  ಕಷ್ಟಕರವಾದ ಒಂದು ಘಳಿಗೆಯಾಗಿದೆ. ಈ ಸಮಯದಲ್ಲೂ ನಂತರದಲ್ಲೂ ಮಹಿಳೆಯರಿಗೆ ಹಲವು ಸಮಸ್ಯೆ ಉಂಟಾಗುತ್ತೆ. ಹೆರಿಗೆಯ ನಂತರ ಮಹಿಳೆಯರು ಕೆಲವು ಸಾಮಾನ್ಯ ಸಮಸ್ಯೆಗಳನ್ನು ಎದುರಿಸೋದು ಸಾಮಾನ್ಯ, ಹೆಚ್ಚಿನ ಮಹಿಳೆಯರು ಕೆಲವು ಅಹಿತಕರ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಮಹಿಳೆಯರು ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಅನ್ನೋದರ ಬಗ್ಗೆ ಮಾಹಿತಿ ತಿಳಿಯೋಣ.

ಮಗುವಿಗೆ ಜನ್ಮ ನೀಡೋದು ಸಾಮಾನ್ಯವಲ್ಲ, ಹೆರಿಗೆಯ(Delivery) ಸಮಯದಲ್ಲಿ, ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆ ಮತ್ತು ಗಾಯಗಳಾಗುತ್ತವೆ, ಅದು ಸರಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ ಆದರೆ ಅವರು ಸ್ವತಃ ಚೇತರಿಸಿಕೊಳ್ಳಲು ಮತ್ತು ಸಮಯದೊಂದಿಗೆ ಸಾಮಾನ್ಯವಾಗಲು ಪ್ರಾರಂಭಿಸುತ್ತಾರೆ. ಹೆರಿಗೆಯ ನಂತರ, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
 

ದೇಹ ಮತ್ತು ಅದರಲ್ಲಿನ ಎಲ್ಲಾ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಹೆರಿಗೆಯಾದ ಮಹಿಳೆಯರು ತಮ್ಮ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಮಗುವಿಗೆ ಮತ್ತು ತಮಗೆ ಸಮಯವನ್ನು ನೀಡಬೇಕು. ಆಗ ಮಾತ್ರ ನೀವು ಆರೋಗ್ಯವಾಗಿರುತ್ತೀರಿ, ಆಗ ಮಾತ್ರ ನೀವು ನಿಮ್ಮ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತೆ. ಅದಕ್ಕಾಗಿಯೇ ಇಂದು  ಹೆರಿಗೆಯ ನಂತರ ಉಂಟಾಗುವ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು(Health problems) ಇಲ್ಲಿ ಹೇಳಲಾಗಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ...

ಹೆರಿಗೆಯ ನಂತರ ಉಂಟಾಗುವ ಸಾಮಾನ್ಯ ಸಮಸ್ಯೆಗಳು 
ಹೆವಿ ಬ್ಲೀಡಿಂಗ್ (Heavy bleeding)
ಹೆರಿಗೆಯ ನಂತರ ರಕ್ತಸ್ರಾವವು ಸಾಮಾನ್ಯವಾಗಿರುತ್ತೆ, ಹೆಚ್ಚಿನ ಮಹಿಳೆಯರು ಹೆರಿಗೆಯ ನಂತರ 2 ರಿಂದ 6 ವಾರಗಳವರೆಗೆ ರಕ್ತಸ್ರಾವವನ್ನು ಹೊಂದಿರುತ್ತಾರೆ.  ಹೆರಿಗೆಯ ನಂತರ, ರಕ್ತಸ್ರಾವವು ಸಾಮಾನ್ಯವಾಗಲು ಪ್ರಾರಂಭಿಸುತ್ತೆ ಮತ್ತು ಸಮಯದೊಂದಿಗೆ ಕಡಿಮೆಯಾಗಲು ಪ್ರಾರಂಭಿಸುತ್ತೆ, ಆದರೆ ರಕ್ತಸ್ರಾವವು ಸಮಯದೊಂದಿಗೆ ಸಾಮಾನ್ಯವಾಗುವ ಬದಲು ಹೆಚ್ಚಾದರೆ ಮತ್ತು ಅದರೊಂದಿಗೆ ಹೆಪ್ಪುಗಟ್ಟುವ ಸಮಸ್ಯೆಯೂ ಇದ್ದರೆ, ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.

ಸೋಂಕು (Infection)
ದೇಹದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಹೊಲಿಗೆಗಳಿಂದ ಸೋಂಕು ಉಂಟಾಗಬಹುದು. ಆದ್ದರಿಂದ, ಹೆರಿಗೆಯ ನಂತರ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಹಾಗಾಗಿ, ಮೂತ್ರವಿಸರ್ಜನೆಯ ಸಮಯದಲ್ಲಿ ನಿಮಗೆ ನೋವು, ಜ್ವರ, ಕೆಂಪಾಗುವಿಕೆ, ಕಿರಿಕಿರಿ ಉಂಟಾದರೆ, ತಕ್ಶಣ ವೈದ್ಯರನ್ನು ಸಂಪರ್ಕಿಸಬೇಕು.

ಸ್ತನಗಳಲ್ಲಿ ನೋವು(Breast pain)
ಗರ್ಭಾವಸ್ಥೆಯಲ್ಲಿ ಹೆರಿಗೆಯ ನಂತರ ಬ್ರೆಸ್ಟ್ ಪೈನ್ ಸಮಸ್ಯೆ ಮತ್ತು ಅಸಹಜ ಭಾವನೆಗಳು ಸಾಮಾನ್ಯ. ಆರಂಭದಲ್ಲಿ, ಸ್ತನ್ಯಪಾನದ ಸಮಯದಲ್ಲಿ ಊತ ಮತ್ತು ನೋವನ್ನು ಹೊಂದಿರೋದು ಸಾಮಾನ್ಯ, ಅದರಿಂದ ಪರಿಹಾರ ಪಡೆಯಲು ಕೋಲ್ಡ್ ಮತ್ತು ಹಾಟ್ ಕಂಪ್ರೆಸ್ಸ್ ಗಳನ್ನು ಬಳಸಬಹುದು. ಸ್ತನಗಳಲ್ಲಿ ನೋವು, ಜ್ವರದಂತಹ ರೋಗಲಕ್ಷಣ, ಕೆಂಪಾಗುವಿಕೆ ಅನುಭವಿಸಿದರೆ,  ವೈದ್ಯರನ್ನು ಸಂಪರ್ಕಿಸಬೇಕಾಗುತ್ತೆ.

ಖಿನ್ನತೆ (Depression)
ಹೆರಿಗೆಯ ನಂತರ ಸ್ವಲ್ಪ ಸಮಯದವರೆಗೆ ಅನಾನುಕೂಲತೆಯನ್ನು ಅನುಭವಿಸೋದು ಅಥವಾ ಸ್ವಲ್ಪ ಅಪ್-ಡೌನ್ ಅನುಭವಿಸೋದು ಸಾಮಾನ್ಯ, ಹೆಚ್ಚಿನ ಮಹಿಳೆಯರು ಇದನ್ನು ಅನುಭವಿಸುತ್ತಾರೆ, ಆದರೆ ಸ್ವಲ್ಪ ಸಮಯದ ನಂತರ ನೀವು ಅದೇ ರೀತಿ ಭಾವಿಸಿದರೆ, ಈ ಕಾರಣದಿಂದಾಗಿ ನೀವು ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗೋದಿಲ್ಲ, ಆಗ ಅದು ಖಿನ್ನತೆಯ ಲಕ್ಷಣವಾಗಿರಬಹುದು.

ನಿಮಗೆ ಈ ರೀತಿ ಅನಿಸಿದ ತಕ್ಷಣ, ಅಂದರೆ ಖಿನ್ನತೆ ಉಂಟಾದರೆ ತಕ್ಷಣ ಅದನ್ನು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಮತ್ತು ಉತ್ತಮ ವೈದ್ಯರ ಸಹಾಯವನ್ನು ತೆಗೆದುಕೊಳ್ಳಿ .ಈ ಎಲ್ಲ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆದರೆ ಹ್ಯಾಪಿ ಮದರ್ ವುಡ್(Motherwood) ನಿಮ್ಮದಾಗುತ್ತೆ.  

click me!