ಗರ್ಭಾವಸ್ಥೆಯಲ್ಲಿ ಖಿನ್ನತೆ : ಇವಿಷ್ಟು ಗೊತ್ತಿದ್ದರೆ ಒಳ್ಳೆಯದು

Suvarna News   | Asianet News
Published : May 05, 2021, 05:28 PM ISTUpdated : May 05, 2021, 05:53 PM IST

ಹೆಣ್ಣು ತಾಯಿ ಆಗುವಳು ಎಂದಾಗ ಅವಳಲ್ಲಿ ಸಂತೋಷ ದುಗುಡ ಭಯ ಇವೆಲ್ಲ ಆವರಿಸಿಕೊಂಡು ಬಿಡುತ್ತದೆ. ಹೀಗಾಗಿ ದೈಹಿಕ ಮತ್ತು ಮಾನಸಿಕವಾಗಿ ಅವಳಲ್ಲಿ ಬದಲಾವಣೆ ಕಾಣಲು ಶುರುವಾಗುತ್ತದೆ. ಇಂತಹ ಸಂದರ್ಭಗಳಲ್ಲೆ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದು. ಕೆಲವರಿಗೆ ಹೆರಿಗೆಯ ಮೊದಲು ಇನ್ನು ಕೆಲವರಿಗೆ ಹೆರಿಗೆಯ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. 

PREV
110
ಗರ್ಭಾವಸ್ಥೆಯಲ್ಲಿ ಖಿನ್ನತೆ : ಇವಿಷ್ಟು ಗೊತ್ತಿದ್ದರೆ ಒಳ್ಳೆಯದು

ಹೌದು ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಖಿನ್ನತೆ ಸಾಮಾನ್ಯ. ಇದರ ಬಗ್ಗೆ ಹೆಚ್ಚಿನ ಜನ ಮಾಹಿತಿ ನೀಡುವುದಿಲ್ಲ. ಇಂತಹ ಖಿನ್ನತೆಗಳನ್ನೂ ಸಾಮಾನ್ಯವಾಗಿ ಯಾರು ಗಮನಕ್ಕೆ ತೆಗೆದು ಕೊಳ್ಳೋದಿಲ್ಲ. ಇಂತಹ ಸಂದರ್ಭಗಳಲ್ಲೇ ಸಂಸಾರದಲ್ಲಿ ಹೆಚ್ಚು ಭಿನ್ನಾಭಿಪ್ರಾಯ ತಲೆದೋರುತ್ತದೆ. ಹಾಗಾಗಿ ಇಂತಹ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹೇಗೆ ಖಿನ್ನತೆಯಿಂದ ಹೊರಬರಬಹುದು ಎಂಬುದನ್ನು ತಿಳಿದು ಕೊಳ್ಳಬೇಕು. 

210

ಮೊದಲು ಗರ್ಭಿಣಿಯರಲ್ಲಿ ಹುಟ್ಟುವ ಖಿನ್ನತೆಗಳು ಇದು ದೇಹದಲ್ಲಾಗುವ ಬದಲಾವಣೆ, ಸಾಂಸಾರಿಕ ಜೀವನ ಮತ್ತು ಮಾನಸಿಕ ಒತ್ತಡ ಅಲ್ಲದೆ ಹೊಸ ಸದಸ್ಯರು ಬರುತ್ತಿದ್ದಾರೆ ಎಂದು ಗೊತ್ತಿದರು ಆತಂಕಕ್ಕೆ ಒಳಗಾಗುವವರು ಇವು ಮಾನಸಿಕವಾಗಿ ಒತ್ತಡ ಹೆಚ್ಚಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

310

ಮಾನಸಿಕ ಒತ್ತಡದಿಂದ ಅಧಿಕ ರಕ್ತದ ಒತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಅಲ್ಲದೇ ಸಮಯಕ್ಕಿಂತ ಮೊದಲೇ ಮಗು ಹುಟ್ಟುವ ಸಾಧ್ಯತೆ ಹೆಚ್ಚು. ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 

410

ಕೆಲವರಲ್ಲಿ ಹೆರಿಗೆಯ ನಂತರ ಖಿನ್ನತೆಗೆ ಒಳಗಾಗುತ್ತಾರೆ ಇದನ್ನು ಪಿಪಿಡಿ ಎನ್ನುತ್ತಾರೆ. ಪೋಸ್ಟ್ ಪಾಟಮ್ ಡಿಪ್ರೆಶನ್. ಇದರ ಗುಣಲಕ್ಷಣಗಳು ಎಂದರೆ ಅತಿಯಾದ ಆಹಾರ ಸೇವನೆ, ಕೆಲವೊಮ್ಮೆ ಹಸಿವಾಗದೆ ಇರುವುದು, ದಪ್ಪಗಾಗುವುದು, ಕಾರಣವಿಲ್ಲದೆ ಅಳುವುದು, ಮೂಡಿಯಾಗಿರುವುದು. 

510

ಇದಲ್ಲದೆ ಸಾಯುವ ಆಲೋಚನೆ, ಚಿಕ್ಕ ಚಿಕ್ಕ ವಿಷಯಕ್ಕೆ ಕೋಪಗೊಳ್ಳೋದು, ಮಗುವಿನ ಬಗ್ಗೆ ಗಮನ ಕೊಡಲು ಸಾದ್ಯವಾಗದಿರುವುದು, ಗಂಡ ಹೆಂಡತಿ ಮಧ್ಯ ಭಿನ್ನಾಬಿಪ್ರಾಯ, ಕೆಲಸದ ಒತ್ತಡ, ಮನೆಗೆಲಸ ಇವೆಲ್ಲವನ್ನು ಸಂಭಾಳಿಸಲು ಅಸಾಧ್ಯವಾಗದೆ ಹೀಗೆ ಹಲವು ಕಾರಣಗಳು ಮಹಿಳೆ ಖಿನ್ನತೆಗೆ ಒಳಗಾಗುತ್ತಾಳೆ. ಕೆಲವೊಮ್ಮೆ ಈ ಖಿನ್ನತೆಗಳನ್ನು ಗಮನಹರಿಸದೆ ಹೋದಲ್ಲಿ ಹೆಚ್ಚಾಗುವ ಸಾಧ್ಯತೆ ಹೆಚ್ಚು.

610

ಈ ಮಾನಸಿಕ ಖಿನ್ನತೆಗೆ ಪರಿಹಾರವಿದೆ. ಗರ್ಭವಾಸ್ಥೆಯಲ್ಲಿ ಆಗುವ ಖಿನ್ನತೆಯನ್ನು ಹೇಗೆ ಹೋಗಲಾಡಿಸಬಹುದು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೀರಿ? ಗರ್ಭಾವಸ್ಥೆ ತಾತ್ಕಾಲಿಕ ಎಂಬುದನ್ನು ನಾವು ಅರಿಯಬೇಕು. ಆರೋಗ್ಯದ ಕಡೆ ಗಮನಕೊಡಬೇಕು, ಒಳ್ಳೆಯ ಪೌಷ್ಟಿಕಯುತ ಆಹಾರ, ನಿದ್ದೆ, ವ್ಯಾಯಾಮ ಇವು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. 

710

ನಿಮ್ಮ ಸಂಗಾತಿಗೆ ಪರಿಸ್ಥಿತಿಯ ಬಗ್ಗೆ ತಿಳಿ ಹೇಳಿ. ಜೊತೆಗೆ ಮನೆ ಕೆಲಸಕ್ಕೆ ಸಹಾಯ ಮಾಡುವಂತೆ ತಿಳಿಸಿ. ಆದಷ್ಟು ಸಂತೋಷವಾಗಿರಿ, ಧನಾತ್ಮಕ ವಿಚಾರಗಳ ಬಗ್ಗೆ ಮಾತ್ರ ಗಮನ ಕೊಡಬೇಕು. ಹುಟ್ಟುವ ಮಗುವಿನ ಲಾಲನೆ ಪಾಲನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇವು ಖಿನ್ನತೆಯಿಂದ ಹೊರಬರಲು ಬಹಳ ಉಪಕಾರಿ. 

810

ಇನ್ನು ಹೆರಿಗೆಯ ಬಳಿಕ ಆಗುವ ಖಿನ್ನತೆ ಪಿಪಿಡಿ. ಇದು ಮಗು ಆದ ಬಳಿಕ ನಾಲ್ಕು ವಾರಗಳಲ್ಲಿ ಕಾಣಲು ಶುರುವಾಗುವಂತಹದ್ದು ಇವುಗಳಿಗೆ ಡಾಕ್ಟರ್ ಸಲಹೆ ಮತ್ತು ಕೌನ್ಸೆಲಿಂಗ್ ಅವಶ್ಯ. ಈ ಖಿನ್ನತೆ ಪ್ರತಿಶತ ಶೇಕಡಾ 70 % ರಷ್ಟು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಹಾರ್ಮೋನುಗಳ ಬದಲಾವಣೆ ಈ ಖಿನ್ನತೆಗೆ ಕಾರಣ. 

910

ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಮಹಿಳೆಯಲ್ಲಿ ಕಾಣಿಸಿಕೊಂಡಾಗ ನಮ್ಮಲ್ಲೇ ನಾವು ಕೆಲವು ಒಳ್ಳೆಯ ಅಭ್ಯಾಸ ರೂಡಿಸಿಕೊಳ್ಳಬೇಕು  ದಿನ ಯೋಗಾಭ್ಯಾಸ ಮಾಡುವುದು, ಪ್ರಾಣಾಯಾಮ, ಆರೋಗ್ಯಕರ ಆಹಾರ, ನಮಗೋಸ್ಕರ ನಾವು ಸಮಯ ನೀಡುವುದು, ವಿಶ್ರಾಂತಿ ತೆಗೆದುಕೊಳ್ಳುವುದು ಇತ್ಯಾದಿ. 

1010

ಅಲ್ಲದೆ ಮಗುವಿಗೆ ಮೊಲೆ ಹಾಲು ಕೊಡುತ್ತಿದ್ದರೆ ಅದರ ಬಗ್ಗೆ ಸರಿಯಾಗಿ ಗಮನ ಕೊಡುವುದು, ಆದಷ್ಟು ಎಣ್ಣೆ ಪದಾರ್ಥಗಳನ್ನು ದೂರವಿಡುವುದು, ಧನಾತ್ಮಕ ಆಲೋಚನೆ, ಎಲ್ಲರ ಜೊತೆ ಬೆರೆಯುವುದು ಇವು ಸಾಮಾನ್ಯ ಮಟ್ಟದ ಖಿನ್ನತೆಗೆ ಉಪಕಾರಿ. ಕೆಲವೊಮ್ಮೆ ಪಿಪಿಡಿ ಹೆಚ್ಚಾಗಿದ್ದರೆ ವೈದ್ಯರ ಸಲಹೆ ಮತ್ತು ಸಮಾಲೋಚನೆ ಅವಶ್ಯಕ. ಇದರಿಂದ ಗುಣವಾಗುವುದು ಖಂಡಿತ.

click me!

Recommended Stories