ಸೀತಾ ಮತ್ತು ರಾಮ್ ಒಂದಾಗಲಿ ಎಂದು ಆಶಿಸುತ್ತಿರುವ ಅಭಿಮಾನಿಗಳು ಸೀತಾಳ ವಿರುದ್ಧ ತಿರುಗಿಬಿದ್ದಿದ್ದಾರೆ. ಅಷ್ಟಕ್ಕೂ ಆಗಿರೋದೇನು?
ಸೀತಾ- ರಾಮ ಒಂದಾಗಲಿ. ಸಿಹಿಯೂ ಅವರ ಬಾಳಲ್ಲಿ ಇರಲಿ. ಯಾವುದೇ ಕಾರಣಕ್ಕೂ ಸೀತಾ-ರಾಮ ಬೇರೆಯಾಗಬಾರದು. ಹೀಗೇನಾದ್ರೂ ಆದ್ರೆ ಸೀರಿಯಲ್ ನೋಡೋದನ್ನೇ ಬಿಟ್ಟುಬಿಡ್ತೀವಿ ಎಂದೆಲ್ಲಾ ಇಲ್ಲಿಯವರೆಗೆ ಹೇಳ್ತಿದ್ದ ಸೀತಾರಾಮ ಅಭಿಮಾನಿಗಳು ಈಗ ಉಲ್ಟಾ ಹೊಡೆದಿದ್ದಾರೆ. ಸೀತಾಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸೀತಾಳಿಗಾಗಿ ಮಿಡಿಯುತ್ತಿದ್ದ ಅಭಿಮಾನಿಗಳ ಮನಸ್ಸು ಜರ್ಜರಿತವಾಗಿ ಹೋಗಿದೆ. ಇವಳದ್ದು ಓವರ್ ಆ್ಯಕ್ಟಿಂಗ್ ಆಯ್ತು, ನೀನು ಯಾವುದೇ ಕಾರಣಕ್ಕೂ ರಾಮ್ಗೆ ತಕ್ಕವಳು ಅಲ್ಲವೇ ಅಲ್ಲ ಎನ್ನುತ್ತಿದ್ದಾರೆ. ಇದೇ ವೇಳೆ ಪ್ಲೀಸ್ ರಾಮ್ ಇವಳು ನಿನಗೆ ಸರಿಯಾದ ಜೋಡಿಯಲ್ಲ, ಇವಳನ್ನು ಬಿಟ್ಟುಬಿಡು ಅನ್ನುತ್ತಿದ್ದಾರೆ!
ಹೌದು. ಒಂದೇ ಒಂದು ಎಪಿಸೋಡ್ನಲ್ಲಿ ಅಭಿಮಾನಿಗಳು ಈ ಪರಿ ಬದಲಾಗಲು ಕಾರಣವೂ ಇದೆ. ಅದೇನೆಂದರೆ, ರಾಮ್ ಮತ್ತು ಸೀತಾಳ ಪ್ರೇಮವನ್ನು ದೇಸಾಯಿ ಒಪ್ಪಿಕೊಂಡಿದ್ದಾರೆ. ಸಿಹಿಯಿಂದ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲ್ಲಿರೋದು ಸೀತಾಳ ಸಮಸ್ಯೆ. ದೇಸಾಯಿ ಅವರು ತಮ್ಮ ವಂಶವನ್ನು ಮುಂದುವರೆಸಲು ನಿನ್ನ ಮತ್ತು ರಾಮ್ನಿಂದ ಒಂದು ಮಗು ಬೇಕು ಎಂದಿದ್ದಾರೆ. ಆದರೆ ಇದು ಸೀತಾಳಿಗೆ ಇಷ್ಟವಿಲ್ಲ. ಸಿಹಿಯನ್ನು ಬಿಟ್ಟು ಬೇರೆ ಮಗು ಅವಳಿಗೆ ಬೇಡ. ಮತ್ತೊಂದು ಮಗು ಹೆರಲು ನಾನು ರೆಡಿ ಇಲ್ಲ. ಸಿಹಿ ಒಬ್ಬಳೇ ನನ್ನಮಗಳು ಎಂದಿದ್ದಾಳೆ. ಇದೇ ಮಾತನ್ನು ರಾಮ್ಗೂ ಹೇಳಿದ್ದಾಳೆ.
ಸೀರಿಯಲ್ಗಳಲ್ಯಾಕೆ ಲೇಡಿ ವಿಲನ್ಸ್ ಗುಣ ಗಂಡಸರಿಗೆ ಗೊತ್ತಾಗದಂತೆ, ದಡ್ಡರಂತೆ ಬಿಂಬಿಸೋದು?
ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ಸೀತಾಳ ವಿರುದ್ಧ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇವಳದ್ದು ಓವರ್ ಆಯ್ತು ಎನ್ನುತ್ತಿದ್ದಾರೆ. ಬೇರೊಂದು ಮಗುವನ್ನು ದೇಸಾಯಿ ಒಪ್ಪಿಕೊಂಡಿರುವುದು ಅವರ ದೊಡ್ಡತನ. ಹಾಗೆಂದು ಬೇರೆ ಮಗುವೇ ಬೇಡ ಎಂದು ಸೀತಾ ಪಟ್ಟುಹಿಡಿಯುವುದು ಎಷ್ಟು ಸರಿ ಎನ್ನುವುದು ನೆಟ್ಟಿಗರ ಪ್ರಶ್ನೆ. ವಂಶವನ್ನು ಮುಂದುವರೆಸುವ ಆಸೆ ದೇಸಾಯಿ ಕುಟುಂಬಕ್ಕೂ ಇರುವುದಿಲ್ಲವೆ? ತಮ್ಮದೇ ಒಂದು ಮಗು ಬೇಕು ಎಂದು ಅವರಿಗೆ ಇರುವುದಿಲ್ಲವೆ? ರಾಮ್ಗೂ ಆ ಆಸೆ ಇದ್ದೇ ಇರುತ್ತದೆ ತಾನೆ? ಇದರಲ್ಲಿ ತಪ್ಪೇನಿದೆ? ಯಾವುದೇ ಆ್ಯಂಗಲ್ನಿಂದ ನೋಡಿದರೂ ಸೀತಾ ಈ ಮಾತನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣವೇ ಇಲ್ಲ. ಇವಳದ್ದು ಅತಿಯಾಯ್ತು ಎಂದು ಹಲವಾರು ಮಂದಿ ಕಮೆಂಟ್ ಹಾಕಿದ್ದಾರೆ. ಸೀರಿಯಲ್ನಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಇಂಥ ಘಟನೆ ನಡೆದರೆ ಅಂಥವಳು ಮದುವೆ, ಪ್ರೀತಿಗೆ ಅರ್ಹಳೇ ಅಲ್ಲ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು!
ಇನ್ನು ಕೆಲವರು ನಿರ್ದೇಶಕರನ್ನು ಬೈಯುತ್ತಿದ್ದಾರೆ. ಒಳ್ಳೆಯ ಸೀರಿಯಲ್ನನ್ನು ಹಾಳು ಮಾಡಿಬಿಟ್ರಿ ಎನ್ನುತ್ತಿದ್ದಾರೆ. ಸುಖಾ ಸುಮ್ಮನೇ ಧಾರಾವಾಹಿ ಎಳೆಯುವುದಕ್ಕಾಗಿ ಸೀತಾಳನ್ನು ವಿಲನ್ ರೀತಿ ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ಸೀತಾಳ ಪರವಾಗಿ ಇದ್ದ ನಾವು ಈಗ ಆಕೆಯ ವಿರುದ್ಧವೇ ಆಗುವಂತೆ ಮಾಡುತ್ತಿರುವ ಸೀರಿಯಲ್ಗೆ ಧಿಕ್ಕಾರ ಎಂದೂ ಹೇಳುತ್ತಿದ್ದಾರೆ. ಅದೇ ಇನ್ನೊಂದೆಡೆ, ತನ್ನಿಂದಲೇ ಸೀತಾ ಮತ್ತು ರಾಮ್ ಮದುವೆಯಾಗುತ್ತಿಲ್ಲ ಎಂದು ಸಿಹಿ ಕೊರಗುತ್ತಿದ್ದಾಳೆ. ಇದಕ್ಕೆಲ್ಲಾ ಕಾರಣ ಸೀತಾಳ ಅಸಮಂಜಸ ನಿರ್ಧಾರ ತಾನೆ?
ಈ 'ವಿಶೇಷ' ತಮ್ಮನಿಗಾಗಿ ಬದುಕು ಮೀಸಲಿಟ್ಟಿರೋ ಪಾರು ದಿನನಿತ್ಯದ ಜೀವನ ಹೀಗಿದೆ ನೋಡಿ...