ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲೊಂದು 'ರಾಮಾಚಾರಿ'. ಇದರಲ್ಲಿ ವಿಲನ್ ವೈಶಾಖ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಐಶ್ವರ್ಯ ವಿನಯ್, ಇತ್ತೀಚಿಗೆ ಟ್ರೆಡಿಶನಲ್ ಲುಕ್‌ನ ಫೋಟೋ ಹಂಚಿಕೊಂಡಿದ್ದಾರೆ.ಫ್ಯಾನ್ಸ್ ಖಡಕ್ ವಿಲನ್‌ನ ಸ್ಯಾರಿ ಲುಕ್‌ಗೆ ಫಿದಾ ಆಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲೊಂದು 'ರಾಮಾಚಾರಿ'. ಇದರಲ್ಲಿ ವಿಲನ್ ವೈಶಾಖ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಐಶ್ವರ್ಯ ವಿನಯ್. ತಮ್ಮ ಅಭಿನಯದಿಂದಲೇ ಎಲ್ಲರ ಮನಗೆದ್ದಿರುವ ನಟಿ. ಖಡಕ್ ಖಳನಾಯಕಿ ಪಾತ್ರಕ್ಕೆ ಅತ್ಯುತ್ತಮವಾಗಿ ಜೀವ ತುಂಬಿದ್ದಾರೆ.
28
ಇನ್‌ಸ್ಟಾಗ್ರಾಂನಲ್ಲಿ ಸಹ ಐಶ್ವರ್ಯಾ ವಿನಯ್ ತುಂಬಾ ಆಕ್ಟಿವ್. ಯಾವಾಗಲೂ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಾಡರ್ನ್ ಲುಕ್, ಪಾರ್ಟಿ, ಟ್ರಿಪ್‌ನ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಟ್ರೆಡಿಶನಲ್ ಲುಕ್‌ನ ಫೋಟೋ ಹಂಚಿಕೊಂಡಿದ್ದಾರೆ.
38
ಫ್ಲೋರಲ್ ಪ್ರಿಂಟ್‌ನ ಮೆರೂನ್ ಕಲರ್ ಸೀರೆಯನ್ನು ಐಶ್ವರ್ಯಾ ಉಟ್ಟಿದ್ದು, ಸ್ಯಾರಿ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಐಶ್ವರ್ಯಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದು ಬ್ಯೂಟಿಫುಲ್, ಕ್ಯೂಟ್, ಗಾರ್ಜಿಯಸ್ ಎಂದೆಲ್ಲಾ ಹೊಗಳಿ ಕಾಮೆಂಟ್ ಮಾಡಿದ್ದಾರೆ.
48
ಐಶ್ವರ್ಯಾ ವಿನಯ್ ಇತ್ತೀಚಿಗಷ್ಟೇ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಶೂಟಿಂಗ್ ಸೆಟ್, ಟ್ರಿಪ್, ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
58
ನಟ ವಿನಯ್ ಸಾಲಿಮಠ್‌ರನ್ನು ಐಶ್ವರ್ಯಾ ಮದುವೆಯಾಗಿದ್ದಾರೆ. ಇಬ್ಬರು ಆಗಾಗ ಟ್ರಿಪ್ ಹೋಗೋ ಫೋಟೋವನ್ನು ಐಶ್ವರ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ.
68
ವಿನಯ್, ಅಗ್ನಿಸಾಕ್ಷಿ, ಮಹಾದೇವಿ, ಜೀವನದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ 'ಅಗ್ನಿಸಾಕ್ಷಿ' ಸೀರಿಯಲ್‌ನ ತನು ಪಾತ್ರದ ಮೂಲಕ ಅಭಿನಯ ಆರಂಭಿಸಿದರು.
78
ಆ ನಂತರ ಸೇವಂತಿ, ಜೇನುಗೂಡು ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಾಮಾಚಾರಿ ಸೀರಿಯಲ್‌ನ ಖಡಕ್ ವಿಲನ್ ಪಾತ್ರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಾರೆ.
88
ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ಮನೆ ಮುರಿಯೋ ಕೆಲ್ಸ ಮಾಡ್ತಿದ್ದ ವೈಶಾಖ ಪ್ರೆಗ್ನೆಂಟ್ ಆಗಿದ್ದಾಳೆ. ಹೀಗಾಗಿ ಈಕೆಯ ಬಗ್ಗೆ ಮನೆಮಂದಿಗೆ ಹೇಳಲು ಕಿಟ್ಟಿ ಹಿಂಜರಿಯುತ್ತಿದ್ದಾನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.