ಮುದ್ದೆ ತಿನ್ನೋದು ಅಂದ್ರೆ ಸುಮ್ನೇನಾ? ಎಲ್ಲರಿಗೂ ಬರಲ್ಲ ಬಿಡಿ! ಪುಟ್ಟಕ್ಕ ಹೇಳಿಕೊಡ್ತಾಳೆ ನೋಡಿ...

By Suvarna News  |  First Published May 1, 2024, 2:26 PM IST

ಬೆಂಗಳೂರಲ್ಲಿ ಹುಟ್ಟಿ ಬೆಳೆದು ಮುದ್ದೆ ತಿನ್ನಲು ಪರದಾಡುತ್ತಿರೋ ರಾಮ್​ಗೆ ಅದನ್ನು ತಿನ್ನುವುದು ಹೇಗೆ ಎಂದು ಪುಟ್ಟಕ್ಕ ಕಲಿಸಿದ್ದಾಳೆ ನೋಡಿ... 
 


ಮುದ್ದೆ ತಿನ್ನಲು ಅದರದ್ದೇ ಆದ ಪದ್ಧತಿ ಇದೆ. ಮುದ್ದೆಯನ್ನು ಸರಿಯಾಗಿ ತಿನ್ನುವುದು ಗೊತ್ತಿಲ್ಲದವರಿಗೆ ಸುಲಭವೇನಲ್ಲ. ಹಾಸನ, ಮಂಡ್ಯ ಈ ಭಾಗಗಳಲ್ಲಿ ಹುಟ್ಟಿ ಬೆಳೆದವರಿಗೆ ಹುಟ್ಟಿನಿಂದಲೇ ಮುದ್ದೆ ತಿನ್ನುವ ಕಲೆ ಕರಗತವಾಗಿರುತ್ತದೆ. ಆದರೆ ಬಯಲುಸೀಮೆ, ಮಲೆನಾಡು, ಬೆಂಗಳೂರು... ಹೀಗೆ ಹಲವು ಭಾಗಗಳ ಎಷ್ಟೋ ಮಂದಿ ಮುದ್ದೆಯನ್ನು ಜೀವನದಲ್ಲಿ ಒಂದು ಬಾರಿಯೂ ಕಣ್ಣಾರೆ ನೋಡಿರುವುದಿಲ್ಲ, ಮುಟ್ಟಿರುವುದೂ ಇಲ್ಲ. ಇನ್ನು ತಿನ್ನುವುದಂತೂ ದೂರದ ಮಾತೇ. ಒಂದು ವೇಳೆ ಅವರಿಗೆ ಆಸೆಯಾಗಿ ಮುದ್ದೆ ತಿನ್ನಲು ಟ್ರೈ ಮಾಡಿದರೂ ಸಾಂಬಾರಿನಲ್ಲಿ ಅದನ್ನು ಅದ್ದಿ ತಿನ್ನುವುದು ಮೊದಲ ಬಾರಿಗಂತೂ ಸುಲಭದ ಮಾತಲ್ಲ. ಅದರಲ್ಲಿಯೂ ಬೇರೆ ಅಡುಗೆ ಪದಾರ್ಥಗಳದ್ದು ಒಂದು ಪದ್ಧತಿಯಾದ್ರೆ, ಮುದ್ದೆಯದ್ದು ಇನ್ನೊಂದೇ ತಿನ್ನುವ ರೀತಿ. 

ಅದನ್ನೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಪುಟ್ಟಕ್ಕ ಹೇಳಿ ಕೊಟ್ಟಿದ್ದಾಳೆ. ಮುದ್ದೆಯನ್ನು ಸರಿಯಾಗಿ ತಿನ್ನುವುದು ಹೇಗೆ ಎಂದು ಆಕೆ ವಿವರಿಸಿದ್ದಾಳೆ. ಅಷ್ಟಕ್ಕೂ ಈಕೆ ಅದನ್ನು ಹೇಳಿಕೊಟ್ಟಿರುವುದು ಸೀತಾರಾಮ ಸೀರಿಯಲ್​ ರಾಮ್​ಗೆ! ಹೌದು. ಪುಟ್ಟಕ್ಕನ ಮೆಸ್​ ಫೇಮಸ್​ ಎನ್ನುವ ಹೆಸರು ಕೇಳಿ ರಾಮ್ ಅಲ್ಲಿಗೆ ಬಂದಿದ್ದಾನೆ. ಮೆಸ್​ ಮುಗಿಸುವ ಸಮಯವದು. ವೇಳೆಯಲ್ಲದ ವೇಳೆ ಅಲ್ಲಿಗೆ ರಾಮ್​ ಬಂದಿದ್ದಾನೆ. ಏನಾದ್ರೂ ಮಿಕ್ಕಿದ್ರೆ ಅದನ್ನೇ ಕೊಡಿ ಸಾಕು ಎಂದಿದ್ದಾನೆ. ಹೇಳಿಕೇಳಿ ಈಕೆ ಪುಟ್ಟಕ್ಕ, ಅನ್ನಪೂರ್ಣೆ. ಬಂದವರನ್ನು ಬರಿಗೈಯಲ್ಲಿ ಕಳಿಸಲಾರಳು. ಅದಕ್ಕೇ, ಮಿಕ್ಕ ಅನ್ನಕ್ಕೆ ಪುಳಿಯೊಗರೆ ಗೊಜ್ಜು ಮಿಕ್ಸ್​ ಮಾಡುವಂತೆ ಸಹನಾಳಿಗೆ ಹೇಳಿದ್ದಾರೆ. ಇರುವ ಮುದ್ದೆಯನ್ನು ಕೊಟ್ಟಿದ್ದಾಳೆ.

Tap to resize

Latest Videos

ಸೀತಾಳ ವಿರುದ್ಧವೇ ರೊಚ್ಚಿಗೆದ್ದ ಅಭಿಮಾನಿಗಳು: ರಾಮ್​ ಇವಳನ್ನು ಬಿಟ್ಟುಬಿಡು ಪ್ಲೀಸ್​ ಅಂತಿರೋದ್ಯಾಕೆ?

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುವ ರಾಮ್​ಗೆ ಮುದ್ದೆ ತಿನ್ನುವುದು ಗೊತ್ತಾಗುವುದಾದರು ಹೇಗೆ? ಇಡೀ ಮುದ್ದೆಯನ್ನು ಸಾಂಬಾರ್​ಗೆ ಅದ್ದಲು ನೋಡಿದಾಗ ಪುಟ್ಟಕ್ಕ, ಹೇಗೆ ಮುದ್ದೆ ತಿನ್ನುವುದು ಎಂದು ಕಲಿಸಿದ್ದಾಳೆ. ಮುದ್ದೆಯನ್ನು ಚೂರು ಚೂರು ಮಾಡಿ, ಸಾಂಬಾರಿನಲ್ಲಿ ಅದ್ದಬೇಕು, ಆ ಬಳಿಕ ಅದನ್ನು ಬಾಯಿಗೆ ಹಾಕಿಕೊಳ್ಳಬೇಕು ಎಂದಿದ್ದಾಳೆ. ಸಾಮಾನ್ಯವಾಗಿ ಎಲ್ಲಾ ಆಹಾರಗಳನ್ನೂ ಜಗಿದೇ ತಿನ್ನುವುದು, ಆದರೆ ಮುದ್ದೆ ವಿಶೇಷವೇ ಬೇರೆ. ಅದನ್ನು ಬಾಯಿಗೆ ಇಟ್ಟತಕ್ಷಣ ಗುಳುಂ ಮಾಡಬೇಕು. ಅದನ್ನೇ ರಾಮ್​ಗೆ ಪುಟ್ಟಕ್ಕ ಹೇಳಿದ್ದಾಳೆ. ಇದು ಕೂಡ ಆರಂಭದಲ್ಲಿ ಮುದ್ದೆ ತಿನ್ನುವ ಅಭ್ಯಾಸ ಇಲ್ಲದವರಿಗೆ ಕಷ್ಟವೇ. ಇದೇ ಕಾರಣಕ್ಕೆ ಮುದ್ದೆಯ ವಿಶೇಷತೆಯೇ ಬೇರೆ.

ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಬರುವುದಾದರೆ, ಸಹನಾ ಮನೆಬಿಟ್ಟು ಹೋಗಿದ್ದಾಳೆ. ಮನೆ ಬಿಡುವ ಸಂದರ್ಭದಲ್ಲಿ ರಾಮ್​ ಮೆಸ್​ಗೆ ಬಂದಿರುವ ದಿನಗಳನ್ನು ನೆನಪಿಸಿಕೊಂಡಿದ್ದಾಳೆ. ತನ್ನವ್ವ ಪುಟ್ಟಕ್ಕ ಆತನಿಗೆ ಮಾಡಿರುವ ಆತಿಥ್ಯದ ಕುರಿತು ನೆನಪಿಸಿಕೊಂಡಿದ್ದಾಳೆ. ಕೈಯಲ್ಲಿ ದುಡ್ಡು ಇಟ್ಟುಕೊಂಡು ಓಡಾಡದ ರಾಮ್​, ಸ್ಕ್ಯಾನಿಂಗ್​ ಬಗ್ಗೆ ಕೇಳಿದಾಗ ಪುಟ್ಟಕ್ಕ ಅವೆಲ್ಲಾ ಇಲ್ಲ ಎಂದಿದ್ದಾಳೆ. ಪುಟ್ಟಕ್ಕನ ಕೈರುಚಿ ನೋಡಿ ಹಾಗೂ ಆಕೆಯ ಮಾತು ಕೇಳಿ ರಾಮ್​ಗೆ ತನ್ನ ತಾಯಿ ಇದ್ದಿದ್ದರೆ ಹೀಗೆಯೇ ಅಡುಗೆ ಮಾಡಿ ಹಾಕುತ್ತಿದ್ದಳೇನೋ ಎಂದು ಅಮ್ಮನ ನೆನಪಿಸಿಕೊಂಡಿದ್ದಾನೆ. ಇದಕ್ಕೆ ಪುಟ್ಟಕ್ಕ, ದುಡ್ಡಿಲ್ಲದಿದ್ದರೆ ಬಿಡಪ್ಪ, ನಿನ್ನ ಅಮ್ಮನ ಹಾಗೆ ಎಂದು ಹೇಳಿದ್ಯಾ, ದುಡ್ಡೆಲ್ಲಾ ಯಾಕೆ ಎಂದಿದ್ದಾಳೆ. ನಂತರ ರಾಮ್​ ತನ್ನ ವಿಸಿಟಿಂಗ್​ ಕಾರ್ಡ್​ ಕೊಟ್ಟು ಹೋಗಿದ್ದಾನೆ. ಮನೆ ಬಿಟ್ಟು ಹೋದ ಸಹನಾಳನ್ನು ಹುಡುಕಲು ಈಗ ರಾಮ್​ ಸಹಾಯ ಮಾಡುತ್ತಾನಾ? ಇದೊಂದು ರೀತಿಯಲ್ಲಿ ಸೀರಿಯಲ್​ಗೆ ಟ್ವಿಸ್ಟ್​ ಸಿಗತ್ತಾ ನೋಡಬೇಕಿದೆ. 

ಪೆನ್​ಡ್ರೈವ್​ ಪ್ರಕರಣದ ನಡುವೆ ನಟಿ ರಶ್ಮಿ ಗೌತಮ್​ ಪೋಸ್ಟ್​ ವೈರಲ್​: ಸಂಚಲನ ಸೃಷ್ಟಿಸಿರೋ ಹೇಳಿಕೆ...

click me!