ಪೆನ್ಡ್ರೈವ್ ಪ್ರಕರಣದ ನಡುವೆ ನಟಿ ನಟಿ ರಶ್ಮಿ ಗೌತಮ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಗಿದ್ದು, ಇದು ಸಕತ್ ಚರ್ಚೆಗೆ ಗ್ರಾಸವಾಗಿದೆ. ಏನಿದೆ ಇದರಲ್ಲಿ?
ಸದ್ಯ ಕರ್ನಾಟಕದಲ್ಲಿ ಪೆನ್ಡ್ರೈವ್ ಭಾರಿ ಸದ್ದು ಮಾಡುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಅಂತ ಹೇಳಲಾಗುತ್ತಿರುವ ರಾಸಲೀಲೆ ವಿಡಿಯೋಗಳ ಪ್ರಕರಣ ದಿಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಇದರ ನಡುವೆಯೇ ಅವರ ವಿರುದ್ಧ ಇದಾಗಲೇ ಹಲವಾರು ಮಂದಿ ಹೇಳಿಕೆ ನೀಡಿದ್ದಾರೆ. ತಮಗೆ ಆಮಿಷ ಒಡ್ಡಿ, ಬೆದರಿಸಿ ಈ ರೀತಿ ನಡೆಸಿಕೊಳ್ಳಲಾಗಿದೆ ಎಂದು ಕೆಲವು ಮಹಿಳೆಯರು ಹೇಳಿಕೆ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಏನಾದರೊಂದು ಸಹಾಯ ಕೇಳಿಕೊಂಡು ಬಂದಿರುವ, ಕೆಲಸ ಬೇಡಿಕೊಂಡು ಬಂದಿರುವ ಮಹಿಳೆಯರನ್ನು ಇವರು ಲೈಂಗಿಕ ಚಟುವಟಿಕೆಗೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಇದೆ.
ಇದರ ನಡುವೆಯೇ ತೆಲುಗಿನ ಜನಪ್ರಿಯ ಜಬರ್‌ದಸ್ತ್ ಕಾಮಿಡಿ ಶೋ ಮೂಲಕ ಗಮನ ಸೆಳೆಯುತ್ತಿರುವ ನಟಿ, ಆ್ಯಂಕರ್ ರಶ್ಮಿ ಗೌತಮ್ ಅವರು ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದು ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಅಷ್ಟಕ್ಕೂ ನಟಿ ಯಾರೊಬ್ಬರ ಬಗ್ಗೆ ಈ ಹೇಳಿಕೆ ನೀಡಿದ್ದಾರೆ, ಯಾರನ್ನು ಉದ್ದೇಶಿಸಿ ಎಂಬ ಬಗ್ಗೆ ಯಾರ ಹೆಸರೂ ಉಲ್ಲೇಖವಿಲ್ಲ. ಇದರ ಹೊರತಾಗಿಯೂ ಕರ್ನಾಟಕದಲ್ಲಿನ ಪೆನ್ಡ್ರೈವ್ ಕೇಸ್ಗೆ ರಶ್ಮಿ ಅವರ ಈ ಹೇಳಿಕೆಯನ್ನು ಹೋಲಿಕೆ ಮಾಡಲಾಗುತ್ತಿದ್ದು, ನಟಿ ಇದೇ ಉದ್ದೇಶಕ್ಕೇ ಇದನ್ನು ಹೇಳಿರುವುದಾಗಿ ಹೇಳಲಾಗುತ್ತಿದೆ.
ಅವರು ಮನೆಗೆ ಬಂದಾಗ ಮೂರೇ ಮೂರು ನಿಮಿಷ ಅಷ್ಟೇ... ಕಾಸ್ಟಿಂಗ್ ಕೌಚ್ ಕುರಿತು ನಟಿ ಅನಸೂಯಾ ಹೇಳಿದ್ದೇನು?
ಅಷ್ಟಕ್ಕೂ ರಶ್ಮಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಪೊಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಖ್ಯಾತ ಲೇಖಕಿ ರಾಚೆಲ್ ಮೋರನ್ ಅವರ ಕೋಟ್ ಹಂಚಿಕೊಂಡಿದ್ದಾರಷ್ಟೇ. ಆ ಪೋಸ್ಟ್ನಲ್ಲಿ ಇರುವುದು ಏನೆಂದರೆ, ಬಡತನದಲ್ಲಿರುವಾಗ ಮತ್ತು ಹಸಿವಿನಿಂದ ಬಳಲುತ್ತಿರುವಾಗ ನಾವು ಮನುಷ್ಯರಾಗಿ ಅವರ ಬಾಯಿಗೆ ಆಹಾರ ಇಡಬೇಕೇ ಹೊರತು ಖಾಸಗಿ ಅಂಗವಲ್ಲ ಎಂದು ಬರೆಯಲಾಗಿದೆ. ಅದರಲ್ಲಿ ಇನ್ನಷ್ಟು ಹೇಳಿಕೆಗಳಿವೆ. ಅದೇನೆಂದರೆ ಹೆಚ್ಚಿನ ಪುರುಷರು ಈ ಜಗತ್ತಿನಲ್ಲಿ ಒಳ್ಳೆಯರಾಗಿದ್ದರೆ ವ್ಯಭಿಚಾರ ಎಂಬುದು ಇರುತ್ತಲೇ ಇರಲಿಲ್ಲ ಎನ್ನುವ ಮೂಲಕ ಈ ಪೋಸ್ಟ್ ಶುರುವಾಗುತ್ತದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗೂ, ಈ ವಿಷಯಕ್ಕೂ ನೆಟ್ಟಿಗರು ತಾಳೆ ಮಾಡಿದ್ದು, ರಶ್ಮಿ ಅವರು ಇದೇ ಉದ್ದೇಶಕ್ಕಾಗಿ ಇದನ್ನು ಬರೆದಿರುವುದಾಗಿ ಹೇಳಲಾಗುತ್ತಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ.
ಇನ್ನು ರಶ್ಮಿ ಅವರ ಕುರಿತು ಹೇಳುವುದಾದರೆ, ಕೆಲವು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಶ್ಮಿ, ಕಳೆದ ವರ್ಷ ‘ಹಾಸ್ಟೆಲ್ ಹುಡುಗರು’ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಕನ್ನಡದ ‘ಹಾಸ್ಟೆಲ್ ಹುಡುಗರು’ ಚಿತ್ರದಲ್ಲಿ ರಮ್ಯಾ ನಟಿಸಿದ ಅತಿಥಿ ಪಾತ್ರವನ್ನು ತೆಲುಗಿನಲ್ಲಿ ರಶ್ಮಿ ಗೌತಮ್ ನಟಿಸಿ ಸೈ ಎನಿಸಿಕೊಂಡಿದ್ದರು. ಇತ್ತೀಚೆಗೆ ಇವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದೆ. ಇದಕ್ಕೂ ಮುನ್ನ ಇವರ ಹೆಸರು ಆಗಾಗ ಹಾಸ್ಯನಟ ಸುಡಿಗಾಲಿ ಸುಧೀರ್ ಜೊತೆ ಕೇಳಿ ಬಂದಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ನಾವಿಬ್ಬರೂ ಉತ್ತಮ ಸ್ನೇಹಿತರು. ಡೇಟಿಂಗ್ ಸುದ್ದಿ ಎಲ್ಲಾ ಸುಳ್ಳು ಎಂದು ರಶ್ಮಿ ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ನಟಿಯ ಮದುವೆ ಸುದ್ದಿ ಸಖತ್ ಚರ್ಚೆ ಆಗುತ್ತಿದೆ. ಅಮೆರಿಕದ ಹುಡುಗನ ಜೊತೆ ಮದುವೆ ಆಗುವುದಕ್ಕೆ ಮಾತುಕತೆ ಕೂಡ ನಡೆದಿದೆ ಎನ್ನಲಾಗುತ್ತಿದೆ.
ಭಾರಿ ತೂಕದ ವ್ಯಕ್ತಿ ಮೈಮೇಲೆ ಮಲಗಿರುವಾಗ.... ಇಂಟಿಮೇಟ್ ದೃಶ್ಯಗಳ ಕುರಿತು ನಟಿ ದಿವ್ಯಾ ಹೇಳಿದ್ದೇನು?