ಕಪ್ಪಾಗಿ ವಾಸನೆ ಬರ್ತಿರೋ ಟೀ ಸ್ಟ್ರೈನರ್ ಕ್ಲೀನ್ ಮಾಡೋದು ಹೇಗೆ ಹೇಳ್ತಿದ್ದಾರೆ ಚೆಫ್ ಪಂಕಜ್

By Suvarna NewsFirst Published May 1, 2024, 1:04 PM IST
Highlights

ಅಡುಗೆ ಮನೆಯಲ್ಲಿರುವ ಅಗತ್ಯ ಪಾತ್ರೆಗಳಲ್ಲಿ ಟೀ ಜರಡಿ ಕೂಡ ಒಂದು. ಅದು ಕಪ್ಪಾಗಿದ್ರೆ ಕೊಳಕಿನ ಜೊತೆ ರುಚಿ ಕೂಡ ಹಾಳಾಗುತ್ತೆ. ಎಷ್ಟೇ ತೊಳೆದ್ರೂ ಕಪ್ಪು ಕಲೆ ಹೋಗಲ್ಲ ಎನ್ನುವ ಮಹಿಳೆಯರು ಚೆಫ್ ಪಂಕಜ್ ಟಿಪ್ಸ್ ಫಾಲೋ ಮಾಡಿ. 
 

ಅಡುಗೆ ಮನೆಯಲ್ಲಿ ರುಚಿ ರುಚಿ ಆಹಾರ ಸಿದ್ಧವಾಗ್ತಿದ್ರೆ ಸಾಲೋದಿಲ್ಲ, ಅಡುಗೆ ಮನೆ ಸ್ವಚ್ಛತೆ ಕೂಡ ಮುಖ್ಯ. ಒಂದು ಮನೆ ಹೇಗಿದೆ ಅನ್ನೋದನ್ನು ನೋಡೋಕೆ ಅವರ ಅಡುಗೆ ಮನೆ ನೋಡಿದ್ರೆ ಸಾಕು ಎನ್ನುವ ಮಾತಿದೆ. ಅತಿಥಿಗಳ ಮನೆಗೆ ಹೋದಾಗ ಅತ್ಯಂತ ರುಚಿಕರ ಖಾದ್ಯವನ್ನು ಕೊಳಕು ಪ್ಲೇಟಿನಲ್ಲಿ ಸರ್ವ್ ಮಾಡಿದ್ರೆ ತಿನ್ನೋಕೆ ಮನಸ್ಸಾಗೋದಿಲ್ಲ. ಅದೇ ರೀತಿ ನಿಮ್ಮ ಮನೆ ಸ್ವಚ್ಛತೆ ಬಗ್ಗೆಯೂ ನೀವು ಗಮನ ಹರಿಸಬೇಕು. ಇದನ್ನು ಏಕೆ ಹೇಳ್ತಿದ್ದೇವೆ ಅಂದ್ರೆ ನಿಮ್ಮ – ನಮ್ಮ ಮನೆ ಮಾತ್ರವಲ್ಲ ಭಾರತದ ಬಹುತೇಕರ ಮನೆಯಲ್ಲಿ ದಿನಕ್ಕೊಮ್ಮೆ ಆದ್ರೂ ಟೀ ಸಿದ್ಧವಾಗುತ್ತೆ. ಮನೆಯಲ್ಲಿ ಟೀ ಪ್ರೇಮಿಗಳಿದ್ದರೆ ದಿನಕ್ಕೆ ನಾಲ್ಕೈದು ಬಾರಿ ಚಹಾ ತಯಾರಿಸಲಾಗುತ್ತದೆ. ಟೀ ಕುಡಿದ್ರೆ ಸಾಲದು ಟೀ ಮಾಡುವಾಗ ನೀವು ಬಳಸುವ ಪಾತ್ರೆ, ಜರಡಿ ಸ್ವಚ್ಛತೆ ಮುಖ್ಯವಾಗುತ್ತದೆ. ಕಪ್ಪಾಗಿರುವ ಟೀ ಜರಡಿಯಲ್ಲಿ ನೀವು ಟೀ ಫಿಲ್ಟರ್  ಮಾಡಿದ್ರೆ ಅತಿಥಿಗಳ ಮುಂದೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಇದು ಆರೋಗ್ಯಕ್ಕೆ ಕೂಡ ಒಳ್ಳೆಯದಲ್ಲ. ಟೀ ಎಲೆ ಹಾಗೂ ಹಾಲು ಅದ್ರ ಸಂದಿಯಲ್ಲಿ ಸೇರಿಕೊಳ್ಳುವ ಕಾರಣ ಜರಡಿ ಬಹುಬೇಗ ಕಪ್ಪಾಗುತ್ತದೆ. ಅಲ್ಲದೆ ಇದರಿಂದ ಬರುವ ವಾಸನೆ ಟೀ ರುಚಿಯನ್ನು ಹಾಳು ಮಾಡುತ್ತದೆ. ನಿರಂತರವಾಗಿ ಇದರ ಬಳಕೆ ಮಾಡುವ ಕಾರಣ ನೀವು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ.

ಅನೇಕ ಮಹಿಳೆಯರು ಸ್ಟ್ರೀಲ್ (Streel) ಜರಡಿ ಕಪ್ಪಾಗ್ತಿದ್ದಂತೆ ಅದನ್ನು ಎಸೆದು ಇನ್ನೊಂದು ಬಳಸ್ತಾರೆ. ಕೆಲವರು ಕಪ್ಪಾದ ಜರಡಿಯನ್ನೇ ಬಳಸ್ತಿರುತ್ತಾರೆ. ನೀವು ಕಪ್ಪಾಗಿದೆ ಎನ್ನುವ ಕಾರಣಕ್ಕೆ ಅದನ್ನು ಕಸಕ್ಕೆ ಎಸೆಯುವ ಅಗತ್ಯವಿಲ್ಲ. ಕಪ್ಪಾದ ಜರಡಿ (Filte) ಬಳಸುವ ಅನಿವಾರ್ಯತೆಯೂ ಇಲ್ಲ. ಅದನ್ನು ಆರಾಮವಾಗಿ ಕ್ಲೀನ್ ಮಾಡಬಹುದು. ಚೆಫ್ ಪಂಕಜ್ ಭದೌರಿಯಾ (Pankaj Bhadauria) ಈ ಬಗ್ಗೆ ಸುಲಭ ಟಿಪ್ಸ್ ನೀಡಿದ್ದಾರೆ.

ಜೈನ ಸನ್ಯಾಸ ದೀಕ್ಷೆ ಪಡೆದ ಬೆಂಗಳೂರು ಉದ್ಯಮಿಯ ಪತ್ನಿ, 11 ವರ್ಷದ ಮಗ

ಪಂಕಜ್ ಭದೌರಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮಾಸ್ಟರ್ಚೆಫ್ ಪಂಕಚ್ ಭದೌರಿಯಾ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಪಂಕಜ್, ಟೀ ಜರಡಿ ಕ್ಲೀನ್ ಮಾಡೋದು ಹೇಗೆ ಎನ್ನುವುದನ್ನು ಹೇಳಿದ್ದಾರೆ. ಟೀ ಸ್ಟ್ರೈನರ್ ಅನ್ನು ಹೇಗೆ ಸ್ವಚ್ಛಗೊಳಿಸುವುದು ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಪಂಕಜ್ ಭದೌರಿಯಾ ಪ್ರಕಾರ, ನೀವು ಟೀ ಜರಡಿಯನ್ನು ಗ್ಯಾಸ್ ಒಲೆ ಮೇಲಿಟ್ಟು ಬಿಸಿ ಮಾಡ್ಬೇಕು. ಅದು ಹಾಳಾಗದಂತೆ, ನಿಮ್ಮ ಕೈ ಸುಡದಂತೆ ನೋಡಿಕೊಳ್ಳಿ. ಜರಡಿ ಸಂಪೂರ್ಣ ಕಪ್ಪಾಗುವವರೆಗೆ ಬಿಸಿ ಮಾಡಿ. ನಂತ್ರ ಪಾತ್ರೆ ಕ್ಲೀನ್ ಮಾಡುವ ಜೆಲ್ ಹಾಕಿ ಅದನ್ನು ಕ್ಲೀನ್ ಮಾಡಿ. ಪಂಕಜ್ ಭದೌರಿಯಾ ಇದೇ ವಿಧಾನವನ್ನು ಅನುಸರಿಸಿ ಜರಡಿ ಕ್ಲೀನ್ ಮಾಡಿದ್ದಾರೆ. 

ಚಾಣಕ್ಯ ನೀತಿ : ಮದುವೆಯಾಗುತ್ತಿದ್ದರೆ, ಸಂಗಾತಿಯ ಈ 5 ಗುಣ ಪರೀಕ್ಷಿಸಿ

ಅಡುಗೆ ಸೋಡಾ ಬಳಸಿ ಸ್ಟೀಲ್ ಸ್ಟ್ರೈನರ್ ಕ್ಲೀನ್ ಮಾಡಿ : ನೀವು ಟೀ ಸ್ಟ್ರೈನರ್ ಅನ್ನು ಬಿಸಿ ಮಾಡಿ ಮಾತ್ರವಲ್ಲ ಅಡುಗೆ ಸೋಡಾ ಬಳಸಿಯೂ ಕ್ಲೀನ್ ಮಾಡಬಹುದು. ಅಡಿಗೆ ಸೋಡಾ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನೀವು ಒಂದು ಚಮಚ ಅಡಿಗೆ ಸೋಡಾವನ್ನು ಬಿಸಿ ನೀರಿನಲ್ಲಿ ಬೆರೆಸಿ ದ್ರವವನ್ನು ತಯಾರಿಸಬೇಕು. ನಂತ್ರ ಸ್ಟೀಲ್ ಫಿಲ್ಟರ್ ಅನ್ನು 3-4 ಗಂಟೆಗಳ ಕಾಲ ಈ ದ್ರಾವಣದಲ್ಲಿ ನೆನೆಸಿ ಇಡಬೇಕು. ಆ ನಂತ್ರ ಸ್ಟ್ರೈನರ್ ಮೇಲೆ ಡಿಶ್ವಾಶ್ ದ್ರವವನ್ನು ಹಾಕಿ ಮತ್ತು ಬ್ರಷ್ ಅಥವಾ ಸ್ಕ್ರಬ್ ನಿಂದ ಅದನ್ನು ಕ್ಲೀನ್ ಮಾಡಿ. ಇದು ಫಿಲ್ಟರ್ ಅನ್ನು ತಕ್ಷಣವೇ ಸ್ವಚ್ಛಗೊಳಿಸುತ್ತದೆ ಮತ್ತು ವಾಸನೆಯನ್ನು ಕಡಿಮೆ ಮಾಡುತ್ತದೆ.
 

click me!