Bigg Boss 16: ಸಲ್ಮಾನ್ ಖಾನ್ ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ ಗಂಡ?

First Published Sep 6, 2022, 4:12 PM IST

ಸಲ್ಮಾನ್ ಖಾನ್ (Salman Khan) ಅವರ ವಿವಾದಾತ್ಮಕ ಶೋ ಬಿಗ್ ಬಾಸ್ 16 (Bigg Boss 16) ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಕಾರ್ಯಕ್ರಮದ ಪ್ರೀಮಿಯರ್ ಅಕ್ಟೋಬರ್‌ನಲ್ಲಿ ನಡೆಯಲಿದೆ ಎಂದು ಇತ್ತೀಚೆಗೆ ಸುದ್ದಿ ಇತ್ತು. ಈ ನಡುವೆ, ಶೋಗೆ ಸಂಬಂಧಿಸಿದ ಮತ್ತೊಂದು ಮಾಹಿತಿ ಹೊರ ಬೀಳುತ್ತಿದೆ, ಶಿಲ್ಪಾ ಶೆಟ್ಟಿ (Shilpa Shetty)  ಅವರ ಪತಿ ರಾಜ್ ಕುಂದ್ರಾ  (Raj Kundra) ಬಿಗ್ ಬಾಸ್ 16ರ ಭಾಗವಾಗಬಹುದು. ವಾಸ್ತವವಾಗಿ, ಅವರು ಪೋರ್ನ್ ವಿಡಿಯೋ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಾರಣ ಅವರ ಹೆಸರು ಹೊರಬರುತ್ತಿದೆ ಮತ್ತು ಯಾರು ವಿವಾದಗಳಲ್ಲಿ ಸಿಲುಕಿದ್ದಾರೆ ಬಿಗ್ ಬಾಸ್‌ಗೆ ಅಂತಹವರನ್ನು ಮಾತ್ರ ಸಂಪರ್ಕಿಸಲಾಗುತ್ತದೆ.  

ಬಿಗ್ ಬಾಸ್ 16 ರ ತಯಾರಕರು ಕಾರ್ಯಕ್ರಮಕ್ಕಾಗಿ ರಾಜ್ ಕುಂದ್ರಾ ಅವರನ್ನು ಸಂಪರ್ಕಿಸಿದ್ದಾರೆ, ಎನ್ನಲಾಗುತ್ತಿದೆ. ಬಿಗ್ ಬಾಸ್ ತಯಾರಕರು ಮತ್ತು ರಾಜ್ ಕುಂದ್ರಾ ನಡುವೆ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. 

ಕುಂದ್ರಾ ಕಾರ್ಯಕ್ರಮದ ಭಾಗವಾಗಲು ಯೋಚಿಸುತ್ತಿದ್ದಾರಂತೆ. ಪ್ರಸ್ತುತ, ರಾಜ್ ಕುಂದ್ರಾ ಕಾರ್ಯಕ್ರಮಕ್ಕೆ ಸೇರುವ ಬಗ್ಗೆ ತಯಾರಕರು ಅಧಿಕೃತ ಹೇಳಿಕೆಯನ್ನು ನೀಡುವುದು ಬಾಕಿ ಇದೆ. ಅಶ್ಲೀಲ ವೀಡಿಯೋ  ಚಿತ್ರೀಕರಣ ಪ್ರಕರಣದ ನಂತರ ಕುಂದ್ರಾ ಕೈಯಲ್ಲಿ ಕೆಲಸವಿಲ್ಲದೇ ಕೂತಿದ್ದಾರೆ.

ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಈ ಕಾರ್ಯಕ್ರಮದ ಮೂಲಕ ಅವರ ನಿಜ ಹೊರಬರಬಹುದು ಮತ್ತು ಅವರೂ ಸಹ ಇದನೇ ರೀತಿಯದ್ದನ್ನು ಬಯಸುತ್ತಾರೆ. ಒಂದು ವೇಳೆ ಕುಂದ್ರಾ ಕಾರ್ಯಕ್ರಮದ ಭಾಗವಾದರೆ, ಶೋ ಹೆಚ್ಚು ಟೆನ್ಷನ್ ಕ್ರಿಯೇಟ್ ಆಗಲಿದೆ ಎಂದು ಹೇಳಲಾಗುತ್ತಿದೆ. 

ಈ ಹಿಂದಿನ ಸೀಸನ್‌ನಲ್ಲಿ ರಾಜ್‌ ಕುಂದ್ರಾ ಅವರ ನಾದಿನಿ ಶಮಿತಾ ಶೆಟ್ಟಿ ಭಾಗವಾಗಿದ್ದರು, ಆದಾಗ್ಯೂ, ಅವರು ಪ್ರದರ್ಶನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಈ ಶೋನಲ್ಲಿಯೇ ರಾಕೇಶ್ ಬಾಪಟ್ ಜೊತೆ ಕುಛ್ ಕುಛ್ ನಡೆಯುತ್ತಿತ್ತು. ಇದೀಗ ಬ್ರೇಕ್ ಅಪ್ ಆಗಿದೆ  ಎಂಬ ಸುದ್ದಿಯೂ ಹೊರ ಬಿದ್ದಿದೆ. 

ಕಳೆದ ವರ್ಷ ಅಂದರೆ 2021 ರಲ್ಲಿ ರಾಜ್ ಕುಂದ್ರಾ ಪೋನೋಗ್ರಫಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.ವಿಷಯ ಬೆಳಕಿಗೆ ಬಂದ ನಂತರ ಅವರ ವಿರುದ್ಧ ಅನೇಕರು ನಿಂತಿದ್ದರು ಮತ್ತು ಅವರಿಗೆ ಸಂಬಂಧಿಸಿದ ಹಲವು ವಿವಾದಗಳು ಕೂಡ ಮುನ್ನೆಲೆಗೆ ಬಂದವು. ಸುದೀರ್ಘ ವಿಚಾರಣೆ ಬಳಿಕ ಜೈಲುವಾಸವನ್ನೂ ಎದುರಿಸಬೇಕಾಯಿತು. 

ಅದೇ ಸಮಯದಲ್ಲಿ, ಇತ್ತೀಚೆಗೆ, ಕುಂದ್ರಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ಈ ಪ್ರಕರಣದಲ್ಲಿ ತನಗೆ ಯಾವುದೇ ಸಂಬಂಧವಿಲ್ಲದ ಕಾರಣ ಪೋರ್ನ್ ಪ್ರಕರಣದಿಂದ ಬಿಡುಗಡೆ ಮಾಡಬೇಕು ಮತ್ತು ಅವರನ್ನು ಬಲವಂತವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಮನವಿ ಮಾಡಿದ್ದರು.

click me!