ಬ್ಲ್ಯಾಕ್ ಆಂಡ್ ವೈಟ್ ಡ್ರೆಸ್ಸಲ್ಲಿ ನಮ್ರತಾ ಗೌಡ: ಸಾಯೋ ಮುನ್ನ ಮೀಟ್ ಆಗ್ಬೇಕೆಂದ ಫ್ಯಾನ್ಸ್!

First Published May 26, 2024, 2:57 PM IST

ಬಿಗ್ ಬಾಸ್ 10 ಖ್ಯಾತಿಯ ನಮ್ರತಾ ಗೌಡ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಬ್ಲ್ಯಾಕ್ & ವೈಟ್ ಲುಕ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಮತ್ತು ನಟಿ ನಮ್ರತಾ ಗೌಡ (Namratha Gowda) ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ತಮ್ಮ ಫೋಟೋ ಶೂಟ್ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. 
 

ಹೆಚ್ಚಾಗಿ ಸೀರೆಯುಟ್ಟು, ಮಾಡರ್ನ್ ಡ್ರೆಸ್ ಮೂಲಕ ಫೋಟೋ ಶೂಟ್ ಮಾಡುತ್ತ, ಫ್ಯಾಮಿಲಿ ಜೊತೆ ಟೂರ್ ಎಂಜಾಯ್ ಮಾಡುತ್ತಾ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡುತ್ತಿರುತ್ತಾರೆ. 
 

ಈ ಬಾರಿ ನಮ್ರತಾ ಹೊಸ ಫೋಟೋ ಶೂಟ್ ಮಾಡಿ ಶೇರ್ ಮಾಡಿದ್ದು, ತುಂಬಾನೆ ಸ್ಟೈಲಿಶ್ ಮತ್ತು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಈ ಬ್ಲ್ಯಾಕ್ ಆಂಡ್ ಫೋಟೋದಲ್ಲಿ (black and white) ಥೈ ಹೈ ಸ್ಲಿಟ್, ಡೀಪ್ ನೆಕ್ ಗೌನ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 
 

ನಮ್ರತಾ ಫೋಟೋ ನೋಡಿ  ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನೀವು ಸೀರೆಯಲ್ಲೂ, ಮಾಡರ್ನ್ ಡ್ರೆಸ್ ನಲ್ಲೂ ಸಖತ್ತಾಗಿ ಕಾಣಿಸುತ್ತೀರಿ ಎಂದಿದ್ದಾರೆ, ನೀವು ಮಾಡರ್ನ್ ಡ್ರೆಸ್ ಗಿಂತ ಸೀರೆಯಲ್ಲೇ ಚೆನ್ನಾಗಿ ಕಾಣಿಸುತ್ತೀರಿ ಎಂದೂ ಕಾಮೆಂಟ್ ಮಾಡಿದವರಿದ್ದಾರೆ. 
 

ಇನ್ನೂ ಕೆಲವರು ಬ್ಲ್ಯಾಕ್ ಬ್ಯೂಟಿ, ಡೈಮಂಡ್, ಬ್ಯೂಟಿಫುಲ್, ತುಂಬಾ ಹಾಟ್ ಆಗಿ ಕಾಣಿಸುತ್ತೀರಿ, ಪಿಕಾಸೋ ನ ಆರ್ಟ್ ಥರ ಕಾಣಿಸ್ತಿದ್ದೀರಿ, ಸಾಯೋ ಮುನ್ನ ನಿಮ್ಮನ್ನ ಭೇಟಿ ಮಾಡಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 
 

ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಮ್ರತಾ, ಬಳಿಕ ಪುಟ್ಟ ಗೌರಿಯ ಮದುವೆ ಸೀರಿಯಲ್ ನಲ್ಲಿ ಕಾಣಿಸಿಕೊಂಡರು. ಬಳಿಕ ನಾಗಿಣಿ 2 ಸೀರಿಯಲ್ ನಲ್ಲಿ ನಟಿಸಿದ್ದರು. ಬಳಿಕ ಬಿಗ್ ಬಾಸ್ ಸೀಸನ್ 10 (Bigg Boss Season 10) ರ ಮೂಲಕ ಮಿಂಚಿದರು. 
 

Latest Videos

click me!