ಅಕ್ವಾರೈಡ್ ಸಂಸ್ಥೆಯಿಂದ ಸ್ಕೂಬ್ ಡೈವಿಂಗ್ ನಡೆಸಲಾಗುತ್ತಿದೆ. ಮತ್ಸ್ಯ ಮೇಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಾಲಿ ಧನಂಜಯ್ ಸ್ಕೂಬ್ ಡೈವಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.
ಕಾರವಾರ(ನ.24): ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಟ ಡಾಲಿ ಧನಂಜಯ್ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಮುರುಡೇಶ್ವರದ ನೇತ್ರಾಣಿಯಲ್ಲಿ ನಟ ಡಾಲಿ ಧನಂಜಯ್ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.
ಅಕ್ವಾರೈಡ್ ಸಂಸ್ಥೆಯಿಂದ ಸ್ಕೂಬ್ ಡೈವಿಂಗ್ ನಡೆಸಲಾಗುತ್ತಿದೆ. ಮತ್ಸ್ಯ ಮೇಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಾಲಿ ಧನಂಜಯ್ ಸ್ಕೂಬ್ ಡೈವಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.
ಹೀಗೆ ಶುರುವಾಯ್ತು ಡಾಲಿ ಧನಂಜಯ್-ಧನ್ಯತಾ ಪ್ರೇಮ್ಕಹಾನಿ: ಆಕ್ಟರ್ ವೆಡ್ಸ್ ಡಾಕ್ಟರ್!
ಸಮುದ್ರದ ಆಳದ ಜಲಚರಗಳನ್ನು ನಟ ಡಾಲಿ ಧನಂಜಯ್ ಕಣ್ತುಂಬಿಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬ್ ಡೈವಿಂಗ್ ನಡೆಸಿಕೊಂಡು ಬರಲಾಗುತ್ತಿದೆ.
ಡಾಲಿ ನಿಶ್ಚಿತಾರ್ಥ, ಧನ್ಯತಾ ಸರಳತೆಗೆ ಫ್ಯಾನ್ಸ್ ಬಹುಪರಾಕ್
ಚಂದನವನದಲ್ಲಿ ಡಾಲಿ ಎಂದೇ ಗುರುತಿಸಿಕೊಂಡಿರುವ ಅದ್ಭುತ ನಟ ಅಂದ್ರೆ ಅದು ಧನಂಜಯ್. ಪುಟ್ಟ ಗ್ರಾಮದಿಂದ ಬಂದ ಪ್ರತಿಭಾನ್ವಿತ ನಟ ಧನಂಜಯ್ ಮನೆಯಲ್ಲಿ ಶೀಘ್ರದಲ್ಲಿಯೇ ಗಟ್ಟಿಮೇಳ ಮೊಳಗಲಿದೆ.
ಡಾಲಿ ಧನಂಜಯ್ ಕನ್ನಡ, ತೆಲಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕೇವಲ ನಟನೆಗೆ ಮಾತ್ರ ಸೀಮಿತವಾಗದ ಧನಂಜಯ್, ಸಾಹಿತಿ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಶಿಕ್ಷಣದಲ್ಲಿ ಸದಾ ಮುಂದಿದ್ದ ಧನಂಜಯ್, 7 ಮತ್ತು 10ನೇ ಕ್ಲಾಸ್‌ನಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು.
ಇಂಜಿನಿಯರಿಂಗ್ ಪದವಿ ಬಳಿಕ ಧನಂಜಯ್ ಅವರು ಇನ್ಫೋಸಿಸ್‌ನಲ್ಲಿ ಕೆಲಸ ಪಡೆದುಕೊಂಡಿದ್ದರು. ಆದ್ರೆ ಧನಂಜಯ್ ಅವರನ್ನು ಬಣ್ಣದ ಲೋಕ ಸೆಳೆದಿತ್ತು. ಜಯನಗರ 4th ಬ್ಲಾಕ್ ಕಿರುಚಿತ್ರದಲ್ಲಿ ಧನಂಜಯ್ ಮೊದಲು ಕ್ಯಾಮೆರಾ ಫೇಸ್ ಮಾಡಿದ್ದರು. ನಂತರ ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಧನಂಜಯ್ ಅವರಿಗೆ ಸಿಗುತ್ತದೆ. ಈ ಚಿತ್ರದ ನಟನೆಗೆ ಸೈಮಾ ಅವಾರ್ಡ್ ಸಹ ಧನಜಯ್ ಪಡೆದುಕೊಳ್ಳುತ್ತಾರೆ.
ಇದಾದ ಬಳಿಕ ರಾಠಿ, ಬಾಕ್ಸರ್, ಅಲ್ಲಮ ಸಿನಿಮಾದಲ್ಲಿ ನಟಿಸಿದರು. 2018ರಲ್ಲಿ ನಿರ್ದೇಶಕ ದುನಿಯಾ ಸೂರಿ ತಮ್ಮ ಟಗರು ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಎದುರು ಖಳನಾಯಕ ಡಾಲಿ ಪಾತ್ರಕ್ಕೆ ಆಯ್ಕೆ ಮಾಡುತ್ತಾರೆ. ಇಲ್ಲಿಂದ ಧನಂಜಯ್, ಡಾಲಿಯಾಗಿ ಫೇಮಸ್ ಆದರು. 2021ರ ರತ್ನನ್ ಪ್ರಪಂಚ್ ಸಿನಿಮಾ ಕರುನಾಡಿನ ಪ್ರತಿ ಮನೆಯನ್ನು ತಲುಪಿತ್ತು. ಹಿರಿಯ ನಟಿ ಉಮಾಶ್ರೀ ಮಗನಾಗಿ ಕಾಣಿಸಿಕೊಂಡಿದ್ದ ಧನಂಜಯ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಉಂಗುರ-ಉಂಗುರ ಬದಲಾಯ್ತು, ಮದುವೆ ಡೇಟ್ ಫಿಕ್ಸ್ ಆಯ್ತು; ಲಗ್ನ ಶಾಸ್ತ್ರದಲ್ಲಿ ಭಾಗಿಯಾದ ಡಾಲಿ-ಧನ್ಯತಾ
ಬಡವ ರಾಸ್ಕಲ್, ಹೆಡ್ ಬುಷ್, ಮಾನ್ಸೂನ ರಾಗಾ, ಗುರುದೇವ ಹೊಯ್ಸಳ, ಕೋಟಿ, ಬೈರಾಗಿ, ಪುಷ್ಪ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಟಗರು ಪಲ್ಯ ಸಿನಿಮಾಗೆ ಧನಂಜಯ್ ಬಂಡವಾಳ ಹಾಕುವ ಮೂಲಕ ನಿರ್ಮಾಪಕರಾಗಿದ್ದಾರೆ. ದರ್ಶನ್, ಪುನೀತ್ ರಾಜ್‌ಕುಮಾರ್, ದುನಿಯಾ ವಿಜಯ್, ಅಲ್ಲು ಅರ್ಜುನ್ ಜೊತೆಯಲ್ಲಿಯೂ ಧನಂಜಯ್ ತೆರೆ ಹಂಚಿಕೊಂಡಿದ್ದಾರೆ.
ಸಿನಿರಂಗದಲ್ಲಿ ಉತ್ತುಂಗದಲ್ಲಿರುವ ನಟ ಧನಂಜಯ್ ವೈವಾಹಿಕ ಬಂಧನಕ್ಕೊಳಗಾಗುತ್ತಿದ್ದಾರೆ. ವೈದ್ಯೆ ಧನ್ಯತಾ ಜೊತೆ ಇಂದು ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಮುಂದಿನ ವರ್ಷ ಫೆಬ್ರವರಿ 16ರಂದು ಮದುವೆಯಾಗಲಿದೆ. ಸ್ವಗ್ರಾಮದಲ್ಲಿ ಸಿಂಪಲ್ ಆಗಿ ನೆರವೇರಿದ ನಿಶ್ಚಿತಾರ್ಥ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಡೆದಿದೆ.