ತನ್ನ ಚಿಕ್ ಮತ್ತು ಬೋಲ್ಡ್ ಫ್ಯಾಷನ್‌ಗೆ ಫೇಮಸ್ ಆಗಿರೋ ಕಿರುತೆರೆ ನಟಿ ನಿಯಾ ಶರ್ಮಾ, ಗೋವಾದ ಬೀಚ್ ವೇಕೇಷನ್‌ನಿಂದ ಸಾಲ್ಮನ್ ಬಿಕಿನಿಯಲ್ಲಿ ತನ್ನ ಹಾಟ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತನ್ನ ಇತ್ತೀಚಿನ ಮ್ಯೂಸಿಕ್ ವೀಡಿಯೋ ದೋ ಘೂಂಟ್ ಮತ್ತು ಗರ್ಬೆ ಕಿ ರಾತ್ ಬಿಡುಗಡೆಯಾಗಿ ಹಿಟ್ ಆಗಿದ್ದು ಯಶಸ್ಸಿನಲ್ಲಿ ಮುಳುಗಿರುವ ನಟಿ ಹಾಟ್ ಫೋಟೋಸ್ ಹರಿಯಬಿಟ್ಟಿದ್ದಾರೆ. ಫ್ಯಾನ್ಸ್ ಮತ್ತಷ್ಟು ಫೋಟೋಗಳಿಗಾಗಿ ದಂಬಾಲು ಬಿದ್ದಿದ್ದಾರೆ.
ಪ್ರಸ್ತುತ ಗೋವಾದಲ್ಲಿ ವೆಕೇಷನ್‌ನಲ್ಲಿ ಬ್ಯುಸಿ ಇರುವ ನಿಯಾ ಶರ್ಮಾ ತನ್ನ ಬೀಚ್ ಟ್ಯಾನ್ ಅನ್ನು ಈಗ ವೈರಲ್ ಫೋಟೋಗಳಲ್ಲಿ ತೋರಿಸುತ್ತಿರುವಾಗ ಸಾಲ್ಮನ್ ಪಿಂಕ್ ಬಿಕಿನಿ ಟಾಪ್‌ನಲ್ಲಿ ತಮ್ಮ ಹಾಟ್ ಫಿಗರ್ ತೋರಿಸಿದ್ದಾರೆ.
ಶ್ಯಾಡೋ ಫೋಟೋಗಳಲ್ಲಿ ನಟಿ ಹಾಟ್ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗೆ ರಾಹುಲ್ ವೈದ್ಯ ಜೊತೆ ಗರ್ಭೆ ಕಿ ರಾತ್ ಸಾಂಗ್ ಮಾಡಿದ್ದು ಇದು ಹಿಟ್ ಆಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಪತ್ರಕರ್ತರೊಬ್ಬರು ಟ್ರೋಲ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂದು ಕೇಳಿದಾಗ ನಿಯಾ ಇದಕ್ಕೆ ಉತ್ತರಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎಂದು ಅವರು ಹೇಳಿದ್ದಾರೆ.
ಜನ ನನ್ನನ್ನು ಅವಹೇಳನಕಾರಿ ಪದಗಳಿಂದ ಕರೆಯುತ್ತಾರೆ. ನನ್ನ ಬೆನ್ನಿನ ಹಿಂದೆ ನಾನು ಹೇಗೆ ಬಟ್ಟೆ ಹಾಕುತ್ತೇನೆ ಎಂದು ಜನರು ಗಾಸಿಪ್ ಮಾಡುತ್ತಾರೆ. ದೋ ಘೂಂಟ್‌ನಲ್ಲಿ ಧರಿಸಿದ್ದ ಬಟ್ಟೆಗಳು ತನ್ನ ನಿರ್ಧಾರವಲ್ಲ, ಬದಲಿಗೆ ಹಾಡಿನ ಅವಶ್ಯಕತೆ ಎಂದಿದ್ದಾರೆ ನಟಿ.