ಕೈಗಳಲ್ಲಿ ಬಳೆ, ಸೀರೆ, ವಧುವಿನಂತೆ ಮೇಕಪ್‌ ಧರಿಸಿ ಇಂದೋರ್‌ನ 17 ವರ್ಷದ ಹುಡುಗ ಆತ್ಮಹತ್ಯೆ?

By Santosh Naik  |  First Published May 20, 2024, 9:56 PM IST

ಮಧ್ಯಪ್ರದೇಶದ ಇಂದೋರ್‌ನಲ್ಲಿ ವರದಿಯಾಗಿರುವ ಆತ್ಮಹತ್ಯೆ ಕೇಸ್‌ ಪೊಲೀಸರು ಹಾಗೂ ಜನರ ಕುತೂಹಲಕ್ಕೆ ಕಾರಣವಾಗಿದೆ, ಆತ್ಮಹತ್ಯೆ ಮಾಡಿಕೊಂಡಿರುವ ಹುಡುಗ ನವ ವಧುವಿನ ರೀತಿ ಮೇಕಪ್‌ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ.
 


ನವದೆಹಲಿ (ಮೇ.20): ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಾಲಕನೊಬ್ಬನ ಆತ್ಮಹತ್ಯೆ ಸಾಕಷ್ಟು ವಿಚಿತ್ರವಾಗಿರುವ ಕಾರಣಕ್ಕೆ ಕುತೂಹಲಕ್ಕೀಡು ಮಾಡಿದೆ. ಸಾಯುವ ಮುನ್ನ ಹುಡುಗ ಮಹಿಳೆಯ ರೀತಿಯಲ್ಲಿ ಮೇಕಪ್‌ ಮಾಡಿಕೊಂಡಿದ್ದಾನೆ. ಹುಡುಗಿಯೊಬ್ಬಳು ಮದುವೆಯ ಟೈಮ್‌ನಲ್ಲಿ ಯಾವ ರೀತಿಯಲ್ಲಿ ಮೇಕಪ್‌ ಮಾಡಿಕೊಳ್ಳುತ್ತಾಳೋ ಅದೇ ರೀತಿಯಲ್ಲಿ ಮೇಕಪ್‌ ಮಾಡಿಕೊಂಡಿದ್ದಾರೆ. ಕೈಗಳಿಗೆ ಹಸಿರು ಬಳೆ, ಸೀರೆ ಹಾಗೂ ಮುಖಕ್ಕೆ ಚಂದದ ಮೇಕಪ್‌ ಮಾಡಿಕೊಂಡ ಬಳಿಕ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಆಗಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಇಂದೋರ್‌ನ ಈ ಅಚ್ಚರಿಯ ಆತ್ಮಹತ್ಯೆ ಕೇಸ್‌ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವೇನು ಎನ್ನುವುದೇ ಪೊಲೀಸರಿಗೆ ಅರ್ಥವಾಗಿಲ್ಲ.

ಭನ್ವಾರ್ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಸಿಕ್ಕ ಬಳಿಕ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆದರೆ ಮೃತದೇಹವನ್ನು ನೋಡಿ ಅವರೂ ಕೂಡ ಅಚ್ಚರಿ ಪಟ್ಟಿದ್ದರು. ಯಾಕೆಂದರೆ, ಮೃತಪಟ್ಟವನು ವಿದ್ಯಾರ್ಥಿ ಎಂದು ಹೇಳಲಾಗಿದ್ದರೂ, ನೇಣಿನ ಹಗ್ಗದಲ್ಲಿ ಇದ್ದ ದೇಹ ಮಹಿಳೆಯ ರೀತಿ ಕಾಣುತ್ತಿತ್ತು. ಆತ ಸಾವಿಗೂ ಮುನ್ನ ಸೀರೆ ಧರಿಸಿದ್ದ. ಅದಲ್ಲದೆ, ಆತನ ಬಾಯಿಯಿಂದ ರಕ್ತ ಸೋರುತ್ತಿತ್ತು. ಇದು ಆತನ ದೇಹದ ಮೇಲೂ ಬಿದ್ದಿತ್ತು. ವಿದ್ಯಾರ್ಥಿಯನ್ನು ಪುನೀತ್‌ ದುಬೇ ಎಂದು ಗುರುತಿಸಲಾಗಿದ್ದು, ತಂದೆ-ತಾಯಿಗೆ ಒಬ್ಬನೇ ಪುತ್ರ ಎಂದು ವರದಿಯಾಗಿದೆ.

Tap to resize

Latest Videos

ಪುನೀತ್ ದುಬೆ ಎರಡನೇ ವರ್ಷದ ಬಿಎಸ್ಸಿ ಓದುತ್ತಿದ್ದ ಎಂದು ಹೇಳಲಾಗಿದೆ. ಮಹಾರಾಜ ರಂಜಿತ್ ಸಿಂಗ್ ಕಾಲೇಜಿನ ವಿದ್ಯಾರ್ಥಿ. ಸಂತ್ ನಗರ ಪ್ರದೇಶದದಲ್ಲಿ ತಂಗುವ ಮೂಲಕ ಮಧ್ಯಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಅಚ್ಚರಿಯ ವಿಚಾರವೇನೆಂದರೆ, ಕೇವಲ ಐದು ದಿನಗಳ ಹಿಂದೆಯಷ್ಟೇ ಹಾಸ್ಟೆಲ್‌ನಲ್ಲಿ ತನ್ನ ಕೋಣೆಯನ್ನು ಬದಲಾಯಿಸಿದ್ದ. ಆದರೆ, ಮೃತ ವಿದ್ಯಾರ್ಥಿ ಸಾವುಗೂ ಮುನ್ನ ಹೆಣ್ಣಿನ ವೇಷ ಧರಿಸಿ 16ಕ್ಕೂ ಹೆಚ್ಚಿನ ವಿವಿಧ ಬಗೆಯ ವೇಷಭೂಷಣ ಧರಿಸಿದ್ದು ಯಾಕೆ ಎನ್ನುವುದು ಪೊಲೀಸರಿಗೆ ಅರ್ಥವಾಗಿಲ್ಲ. ಅಲ್ಲದೆ, ಆತನ ಕೋಣೆಯಲ್ಲಿ ಯಾವುದೇ ಸೂಸೈಡ್‌ ನೋಟ್‌ಗಳು ಕೂಡ ಸಿಕ್ಕಿಲ್ಲ.  ಹೀಗಿರುವಾಗ ವಿದ್ಯಾರ್ಥಿಯೊಬ್ಬ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಮೂಡುವುದು ಖಚಿತ.

ಪಾನ್‌ಕಾರ್ಡ್‌ ಕುರಿತು ಹುಷಾರಾಗಿರಿ..ಗುಜರಾತ್‌ನ ಚಾಯ್‌ವಾಲಾಗೆ ಬಂತು 49 ಕೋಟಿಯ ಐಟಿ ನೋಟಿಸ್‌!

ಇನ್ನು ಪ್ರವೀಣ್‌ ದುಬೆ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಪುನೀತ್‌ನ ತಂದೆ ತ್ರಿಭುವನ್ ದುಬೆ ಮಾತನಾಡಿ, ಪುನೀತ್ ಕಾಲೇಜ್‌ನಿಂದ ಹಿಂತಿರುಗಿದ ನಂತರ ರಾತ್ರಿ ಒಮ್ಮೆ ಕರೆ ಮಾಡುತ್ತಿದ್ದರು. ಶುಕ್ರವಾರ ಕರೆ ಸ್ವೀಕರಿಸದಿದ್ದಾಗ ರಾತ್ರಿ ಇಡೀ ನಾವು ಕರೆ ಮಾಡಿದರೂ ಪುನಿತ್ ಫೋನ್ ತೆಗೆಯಲಿಲ್ಲ. ಇದಾದ ಬಳಿಕ ಅಕ್ಕಪಕ್ಕದಲ್ಲಿ ವಾಸವಾಗಿದ್ದ ಸಂಬಂಧಿಕರಿಗೆ ಕರೆ ಮಾಡಿ ಪುನೀತ್ ಕೊಠಡಿಗೆ ಹೋಗುವಂತೆ ಹೇಳಿದೆವು. ಪುನೀತ್ ಸಂಬಂಧಿಕರು ರಾತ್ರಿ ಕೊಠಡಿಗೆ ತಲುಪಿ ಬಾಗಿಲು ಬಡಿದರೂ ಪುನೀತ್ ಬಾಗಿಲು ತೆರೆಯದ ಕಾರಣ ಕಿಟಕಿಯಿಂದ ಒಳಗೆ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಹೆಚ್ಚುವರಿ ಡಿಸಿಪಿ ಆನಂದ್ ಯಾದವ್ ಪ್ರಕಾರ, ಮೃತರು ರೈಸನ್ ನಿವಾಸಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಂದೋರ್‌ನಲ್ಲಿ ವಾಸಿಸುತ್ತಿದ್ದ ಅವರು ಬಿಎಸ್ಸಿ ಓದುತ್ತಿದ್ದರು. ಮಹಾರಾಜ ರಂಜಿತ್ ಸಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯುತ್ತಿದ್ದ ಎನ್ನಲಾಗಿದೆ. ಮೃತ ವಿದ್ಯಾರ್ಥಿ 2 ದಿನಗಳ ಹಿಂದೆ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ. ಈ ವೇಳೆ ಆತ ಖುಷಿಯಿಂದಲೇ ಮಾತನಾಡಿದ್ದ, ಯಾರೊಂದಿಗೂ ಆತನ ದ್ವೇಷ ಇದ್ದಿರಲಿಲ್ಲ ಎಂದು ತಿಳಿಸಿದ್ದಾರೆ.

'ಬೆತ್ತಲಾಗೋಕು ರೆಡಿ, ಐಟಂ ಡಾನ್ಸ್‌ಗೂ ಸೈ..' ನಿರ್ದೇಶಕರಿಗೆ Bold ಆಫರ್‌ ನೀಡಿದ ಯುವನಟಿ!

click me!