ರಾಮನ​ ಪ್ರಾಣ ಉಳಿಸಲು ಹೋದ ಅಶೋಕನೇ ಜೀವ ತೆತ್ತು ಬಿಟ್ಟನಾ? ಇದೇನಾಗೋಯ್ತು?

Published : May 20, 2024, 04:53 PM IST
ರಾಮನ​ ಪ್ರಾಣ ಉಳಿಸಲು ಹೋದ  ಅಶೋಕನೇ ಜೀವ ತೆತ್ತು ಬಿಟ್ಟನಾ?  ಇದೇನಾಗೋಯ್ತು?

ಸಾರಾಂಶ

ರಾಮ್​ನ ಪ್ರಾಣ ಉಳಿಸಲು ಪ್ಲ್ಯಾನ್​ ಮಾಡಿದ್ದ ಅಶೋಕನ ಜೀವವೇ ಹೊರಟು ಹೋಗಿದೆಯಾ? ಇದೇನಿದು ಸೀತಾರಾಮ ಟ್ವಿಸ್ಟ್​?  

 ಸೀತಾ  ಮತ್ತು ರಾಮ್​ ಇನ್ನೇನು ಒಂದಾಗುವ ಕಾಲ ಬಂದೇ ಬಿಟ್ಟಿದೆ. ಮದುವೆ ಮಾತುಕತೆಯೂ ನಡೆಯುತ್ತಿದೆ. ಇವರಿಬ್ಬರನ್ನೂ ಹೇಗಾದರೂ ದೂರ ಮಾಡಬೇಕು ಎಂದುಕೊಂಡಿದ್ದ ಭಾರ್ಗವಿ ತಂತ್ರವೆಲ್ಲಾ ವಿಫಲವಾಗಿದೆ. ಈಗ ಆಕೆಯೂ ಮದುವೆಗೆ ಓಕೆ ಎಂದಿದ್ದಾಳೆ. ಮದುವೆಯಾದ ಮೇಲೆ ಆಟವಾಡಿಸುವುದಾಗಿ ಹೇಳಿಕೊಂಡಿದ್ದಾಳೆ. ಆದರೆ ಇದಕ್ಕೂ ಮುನ್ನ  ರಾಮ್​ನನ್ನು ಕೊಲ್ಲಲು ಚಿಕ್ಕಮ್ಮ ಭಾರ್ಗವಿ ಸಂಚು ರೂಪಿಸಿದ್ದಳು. ಆತನ ಕಾರನ್ನು ಆ್ಯಕ್ಸಿಡೆಂಟ್​ ಮಾಡಿಸಿದ್ದಳು. ಸೀತಾಳನ್ನು ತಾತ ದೇಸಾಯಿ ಮನೆಗೆ ಕರೆಸಿ ಇನ್ನೇನು ಮದುವೆ ಮಾತುಕತೆ ಮುಂದುವರೆಸಬೇಕು ಎನ್ನುವಾಗಲೇ ಇದು ಸಾಧ್ಯವಾಗಬಾರದು ಎನ್ನುವ ಕಾರಣಕ್ಕೆ ಭಾರ್ಗವಿ ಈ ತಂತ್ರವನ್ನು ರೂಪಿಸಿದ್ದಳು. ಇದಕ್ಕಾಗಿ ಎಲ್ಲರ ಎದುರು ಒಳ್ಳೆಯತನದ ಸೋಗು ಹಾಕಿಕೊಂಡಿರೋ ಭಾರ್ಗವಿ, ಯಾರಿಗೂ ಅನುಮಾನ ಬಾರದಂತೆ ರಾಮ್​ನನ್ನು ವಿದೇಶಕ್ಕೆ ಕಳುಹಿಸುವ ಸಂಚು ರೂಪಿಸಿದ್ದಳು. ಅಲ್ಲಿ ತುರ್ತಾಗಿ ಯಾವುದೇ ಆಫೀಸ್​ ಕೆಲಸಕ್ಕೆ ಸಂಬಂಧಿಸಿದಂತೆ ಮೀಟಿಂಗ್​ ಇದೆ ಎಂದು ಅವನನ್ನು ಕಳುಹಿಸಿದ್ದಳು.

ಆದರೆ ಅದೇ ಇನ್ನೊಂದೆಡೆ ಭಾರ್ಗವಿಯ ಕುತಂತ್ರ ಗೆಳೆಯ ಅಶೋಕ್​ಗೆ ತಿಳಿದಿತ್ತು. ಸತ್ಯಜೀತ್​ ಎಲ್ಲಾ ಸತ್ಯವನ್ನೂ ಹೇಳಿದ್ದ. ಇದಕ್ಕೂ ಮುನ್ನವೇ ಭಾರ್ಗವಿಯ ಎಲ್ಲಾ ತಂತ್ರಗಳೂ ಅವನಿಗೆ ಗೊತ್ತಿದ್ದರೂ, ರಾಮ್​ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅವನು ತನ್ನ ಚಿಕ್ಕಮ್ಮ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾನೆ. ತನ್ನ ತಾಯಿಯ ಸಾವಿಗೆ ಅವಳೇ ಕಾರಣ ಎನ್ನುವುದೂ ಅವನಿಗೆ ಗೊತ್ತಿಲ್ಲ. ಅದರೆ ಸೀತಾ ಮತ್ತು ರಾಮ್​ನನ್ನು ಬೇರೆ ಮಾಡಲು ಅವನನ್ನು ವಿದೇಶಕ್ಕೆ ಕಳುಹಿಸುವ ಪ್ಲ್ಯಾನ್​ ಮಾಡಿರುವುದು ಅಶೋಕ್​ಗೆ ಗೊತ್ತಾಗಿ ಕೊನೆಗೂ ರಾಮ್​ನ ಜೀವ ಉಳಿಸಿದ್ದ. ರಾಮ್​ ಜಾಗದಲ್ಲಿ ತಾನು ಹೋಗಿದ್ದ. ಆದರೆ ಅಪಘಾತದಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದ.

ಬರೀ ಮುತ್ತು ಕಣೋ.. ಅದ್ಯಾಕೆ ಅಷ್ಟು ಬೆವರ್ತಿದ್ದಿಯಾ? ಗೌತಮ್​ ಕಾಲೆಳೀತಿರೋ ನೆಟ್ಟಿಗರು...

ಆದರೆ ಇದೀಗ ಬೇರೆಯದ್ದೇ ನಡೆದು ಹೋಗಿದೆ. ಸೀತಾ-ರಾಮ ಅಲ್ಲಿ ಒಟ್ಟಾಗಿರುವ ಸಂದರ್ಭದಲ್ಲಿ ಪ್ರಿಯಾಳ ಬಾಳಿನಲ್ಲಿ ಬರಸಿಡಿಲು ಬಂದೊದಗಿದೆ. ರಾಮ್​ ಪ್ರಾಣಕ್ಕೆ ಅಪಾಯವಿದೆ ಎಂದು ಅರಿತಿದ್ದ ಅಶೋಕ್​, ತಾನು ಫಾರಿನ್​ ಟ್ರಿಪ್​ಗೆ ಹೋಗುವುದಾಗಿ ಸುಳ್ಳು ಹೇಳಿದ್ದ. ಅವನು ಅದೇನೋ ಪ್ಲ್ಯಾನ್​ ಮಾಡಿದ್ದ. ರಾಮ್​ನನ್ನು ಕೊಲ್ಲುವ ತಂತ್ರ ರೂಪಿಸುತ್ತಿರುವುದು ಭಾರ್ಗವಿಯೇ ಎಂದು ಅವನಿಗೆ ತಿಳಿದಿದ್ದರೂ ರಾಮ್​ಗೆ ಅದನ್ನು ತೋರಿಸಲು ಸಾಕ್ಷಿ ಬೇಕಾಗಿತ್ತು. ಅದಕ್ಕಾಗಿ ಏನೋ ಒಂದು ತಂತ್ರ ರೂಪಿಸಿದ್ದ. ಈ ವಿಷಯವನ್ನು ಪ್ರಿಯಾಗೆ ಮಾತ್ರ ಹೇಳಿದ್ದ. ರಾಮ್​ಗೂ ವಿಷಯ ಗೊತ್ತಿರಲಿಲ್ಲ. ನಾನು ಇಲ್ಲಿಯೇ  ಇರುತ್ತೇನೆ. ಫಾರಿನ್​​ಗೆ ಆಫೀಸ್​  ಕೆಲಸದ ನಿಮಿತ್ತ ಹೋಗಿರುವುದಾಗಿ ಸುಳ್ಳು ಹೇಳುವಂತೆ ಪ್ರಿಯಾಳಿಗೆ ಹೇಳಿದ್ದ. ಪ್ರಿಯಾ ಕೂಡ ಅದನ್ನೇ ಮಾಡಿದ್ದಳು.

ಆದರೆ ಇಲ್ಲಿ ಆಗಿರುವುದೇ ಬೇರೆ. ಅಶೋಕ್​ನ ಮನೆಯ ಗೇಟ್​ ಪ್ರಿಯಾ ತೆಗೆಯುತ್ತಿದ್ದಂತೆಯೇ ಅಶೋಕ್​ ಬಿದ್ದಿರುವುದು ಕಂಡಿದೆ. ಆತ ಸತ್ತಿದ್ದಾನೋ, ಬದುಕಿದ್ದಾನೋ ಗೊತ್ತಿಲ್ಲ. ಪ್ರಿಯಾ ಶಾಕ್​ನಿಂದ ಗೋಳಾಡುತ್ತಿದ್ದಾಳೆ. ಪ್ರಾಣ ಸ್ನೇಹಿತ ರಾಮ್​ನ ಪ್ರಾಣ ಉಳಿಸಲು ಹೋಗಿ, ಈ ಷಡ್ಯಂತ್ರದ ರೂವಾರಿ ಯಾರು ಎಂದು ಸಾಕ್ಷ್ಯಾಧಾರ ತರಲು ಹೋದ ಅಶೋಕ್​ ಪ್ರಾಣ ಬಿಟ್ಟು ಬಿಟ್ಟನಾ ಎನ್ನುವುದು ಈಗಿರುವ ಪ್ರಶ್ನೆ. ಅಶೋಕನನ್ನು ಯಾವುದೇ ಕಾರಣಕ್ಕೂ ಸಾಯಿಸಬೇಡಿ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು. ಅದರೆ ಸೀರಿಯಲ್​ಗೆ ಏನು ಟ್ವಿಸ್ಟ್​ ಬರುವುದೋ ನೋಡಬೇಕಿದೆ. 

ಐಶ್ವರ್ಯಾಳ ಬ್ಯೂಟಿಯನ್ನು ಈ ರೀತಿ ಹಾಳು ಮಾಡಿದ್ದೇ ಪ್ಲಾಸ್ಟಿಕ್​! ನಟಿ ಕಸ್ತೂರಿ ಶಂಕರ್​ ಶಾಕಿಂಗ್​ ಹೇಳಿಕೆ


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…