News Hour: ಪ್ರಜ್ವಲ್‌ ರೇವಣ್ಣಗೆ ಡೆಡ್‌ಲೈನ್‌ ನೀಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ!

May 20, 2024, 10:56 PM IST

ಬೆಂಗಳೂರು (ಮೇ. 20): ರಾಜ್ಯ ರಾಜಕೀಯವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ, ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ದಿನಕಳೆದಂತೆ ಪ್ರಜ್ವಲ್​ ಕೊರಳಿಗೆ ಕಾನೂನಿನ ಉರುಳು ಬಿಗಿಯಾಗ್ತಿದ್ದು ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. 

ಪ್ರಜ್ವಲ್ ಈ ನಡೆಯಿಂದ ದೇವೇಗೌಡರ ಕುಟುಂಬಕ್ಕೆ ಮುಜುಗರವಾಗಿದ್ದು, ಮನಸ್ನಿನಲ್ಲಿ ಬಚ್ಚಿಟ್ಟುಕೊಂಡಿದ್ದ ನೋವನ್ನು ಇಂದು ಎಚ್​ಡಿಕೆ ಹೊರ ಹಾಕಿದ್ದಾರೆ. ಇಂದು ಮಾತನಾಡಿದ ಎಚ್‌ಡಿಕೆ, 24 ಗಂಟೆಯ ಒಳಗಾಗಿ ತನಿಖೆ ಎದುರಿಸುವಂತೆ ಮನವಿ ಮಾಡಿದ್ದಾರೆ. ದೇವೇಗೌಡರ ಮೇಲೆ ಗೌರವ ಇದ್ದರೆ ತನಿಖೆಗೆ ಹಾಜರಾಗುವಂತೆ ಹೇಳಿದ್ದಾರೆ.

ಹೆಚ್‌ಡಿಡಿ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ, ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ: ಹೆಚ್‌ಡಿಕೆ

ಇದು ಪ್ರಜ್ವಲ್ ರೇವಣ್ಣಗೆ ಕುಮಾರಸ್ವಾಮಿ ಕೊಟ್ಟ ನೇರ ಸಂದೇಶ...ಪ್ರಜ್ವಲ್​ನಿಂದ ದೇವೇಗೌಡರ ಕುಟುಂಬಕ್ಕೆ ಎಷ್ಟು ಮುಜುಗರ ಆಗಿದೆ ಎಂದು ಕುಮಾರಸ್ವಾಮಿಯೇ ಬಿಚ್ಚಿಟ್ಟಿದ್ದಾರೆ.. ಪ್ರಜ್ವಲ್ ಎಲ್ಲೇ ಇದ್ರೂ ಎಸ್ಐಟಿ ಮುಂದೆ ಬರಲಿ.. 24 ಗಂಟೆಯೊಳಗೆ ತನಿಖೆ ಎದುರಿಸಲಿ.. ದೇವೇಗೌಡರ ಮೇಲೆ ಗೌರವವಿದ್ದರೆ, ಕಾರ್ಯಕರ್ತರ ಮೇಲೆ ಗೌರವವಿದ್ದರೆ ತಕ್ಷಣಕ್ಕೆ ಎಸ್​ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಎಚ್​ಡಿಕೆ ಬಹಿರಂಗವಾಗೇ ಪ್ರಜ್ವಲ್​ಗೆ  ತಾಕೀತು ಮಾಡಿದ್ದಾರೆ.