ಬಾಲಿವುಡ್‌ಗೆ ಬಂತು ಬಂಗಾರದ ಬೊಂಬೆ; ಕೋಮಲ್ ಝಾ ಗ್ಲಾಮರ್‌ಗೆ ಗಂಡ್‌ಹೈಕ್ಳ ಗುಂಡಿಗೆ ಗಡಗಡ!

First Published | May 20, 2024, 10:23 PM IST

ಬಾಲಿವುಡ್‌ ಸಿನಿಮಾ ನಿರ್ಮಾಪಕರು ಕೋಮಲ್ ಝಾ ಫೋಟೋ ನೋಡಿ ಅಕ್ಷರಶಃ ಫಿದಾ ಆಗಿದ್ದಾರೆ. ಹಾಗೂ, ಇಲ್ಲಿಯವರೆಗೂ ಅವರು ನಟಿಸಿದ ಸಿನಿಮಾಗಳಲ್ಲಿ ಅವರ ಅಭಿನಯವನ್ನೂ ಸಹ ಮೆಚ್ಚಿಕೊಂಡು ಚಾನ್ಸ್ ನೀಡಿದ್ದಾರೆ...

ಬಾಲಿವುಡ್‌ನಲ್ಲಿ ಹೊಸಗಾಳಿ ಬೀಸಲು ಆರಂಭಿಸಿದೆ. ಅದು ಅತಿಂಥ ಗಾಳಿಯಲ್ಲ, ಭಾರೀ ಬಿರುಗಾಳಿ. ಸುಂಟರಗಾಳಿಯೇ ಎನ್ನಬಹುದಾದ ಈ ಅಬ್ಬರದ ಅಲೆಯ ಹೆಸರು ಕೋಮಲ್ ಝಾ. ಟಾಲಿವುಡ್‌ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕೋಮಲ್‌ ಝಾಗೆ (Komal Jha) ಬಾಲಿವುಡ್ ಈಗ ಬಾಗಿಲು ತೆರೆದು 'ಕಮಾನ್' ಎಂದಿದೆ. 

ಹೀಗಾಗಿ ಬಾಲಿವುಡ್‌ನಲ್ಲಿ ಕೋಮಲ್‌ ಝಾ ಈಗ 'ಮೈ ಡ್ಯಾಡ್ಸ್‌ ವೆಡ್ಡಿಂಗ್' ಹೆಸರಿನ ಕಾಮಿಡಿ ಜೋನರ್ ಸಿನಿಮಾ ಶೂಟಿಂಗ್‌ನಲ್ಲಿ ಬಯುಸಿಯಾಗಿದ್ದಾರೆ. 'ಮೈ ಡ್ಯಾಡ್ಸ್‌ ವೆಡ್ಡಿಂಗ್' ಚಿತ್ರವನ್ನು ಬಾಲಿವುಡ್‌ನ ಆನಂದ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. 
 

Tap to resize

ನಟಿ ಕೋಮಲ್ ಝಾ ಇದೇ ಮೊದಲ ಬಾರಿಗೆ ಸಂಪೂರ್ಣ ಕಾಮಿಡಿ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದು, ಇದೊಂಥರಾ ವಿಭಿನ್ನ ಪಾತ್ರ ಪೋಷಣೆಯಾಗಿದೆ. ಸಿಕ್ಕ ಈ ವಿಶಿಷ್ಠ ಅವಕಾಶಕ್ಕೆ ಸಖತ್ ಥ್ರಿಲ್ ಆಗಿದ್ದಾರೆ ನಟಿ ಕೋಮಲ್ ಝಾ.
 

ಈ ಬಗ್ಗೆ ನಟಿ ಕೋಮಲ್ ಝಾ 'ನಾನು ಈ ಚಿತ್ರದ ಒನ್‌ಲೈನ್ ಹಾಗೂ ಪಂಚ್ ಲೈನರ್‌ ಡೈಲಾಗ್‌ಗಳಿಗೆ ಫುಲ್ ಫಿದಾ ಆಗಿದ್ದೀನಿ. ಈ ಚಿತ್ರದಲ್ಲಿ ನಾನು ನನ್ನ ತಂದೆಯ ಮರುಮದುವೆಗೆ ಸಂಬಂಧಿಸಿದ ಸ್ಟೋರಿ ಬೇಸ್ಡ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. 

'ಮೈ ಡ್ಯಾಡ್ಸ್‌ ವೆಡ್ಡಿಂಗ್' ಚಿತ್ರದಲ್ಲಿ ನಾನು ಹೀರೋನ ಲವರ್ ಆಗಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಜತೆಗೆ, ನಾನು ಈ ಚಿತ್ರದ ಸ್ಟೋರಿ ನರೇಶನ್‌ನಲ್ಲೂ ಮುಖ್ಯವಾದ ಪಾತ್ರ ನಿರ್ವಹಿಸುತ್ತಿದ್ದೇನೆ. ಈ ಸಿನಿಮಾ ಮೂಲಕ ಸಿನಿಪ್ರೇಕ್ಷಕರು ಹೊಚ್ಚಹೊಸ ರೀತಿಯ, ತುಂಬಾ ವಿಭಿನ್ನ ಪಾತ್ರದ ಮೂಲಕ ನನ್ನ ನಟನೆ ನೋಡಲಿದ್ದಾರೆ. 

ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದ್ದು, ನಾನು ಅದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಪಾತ್ರ ಹಾಗೂ ಕಾಮಿಡಿ ಆಶಾರಿತ ಪಂಚ್ ಡೈಲಾಗ್‌ಗಳು ನನಗೆ ಸಂಪೂರ್ಣ ತೃಪ್ತಿ ತಂದಿವೆ. ಈ ಚಿತ್ರದ ಬಿಡುಗಡೆಯನ್ನೇ ನಾನು ಎದುರು ನೋಡುವಂತಾಗಿದೆ' ಎಂದಿದ್ದಾರೆ ಕೋಮಲ್ ಝಾ.

ಅಂದಹಾಗೆ, ನಟಿ ಕೋಮಲ್ ಝಾ ಅವರು ವೇದಿಕ್ ಆಸ್ಟ್ರಾಲಜಿಯಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿದ್ದಾರೆ. 'ಚಿಕ್ಕಂದಿನಿಂದಲೂ ಈ ವಿಷಯದಲ್ಲಿ ನನಗೆ ತುಂಬಾ ಆಸಕ್ಕಿ ಇತ್ತು. ಮೊದಮೊದಲು ಹವ್ಯಾಸವಾಗಿದ್ದ ಈ ವೇದಿಕ್ ಜ್ಯೋತಿಷ್ಯ ವಿಷಯವು ಬಳಿಕ ನನಗೆ ತುಂಬಾ ಮುಖ್ಯ ಎನಿಸಿ ನಾನು ಎರಡು ವರ್ಷದ ಕೋರ್ಸ್ ತೆಗೆದುಕೊಂಡು ಕಂಪ್ಲೀಟ್ ಮಾಡಿದೆ. 

ನನಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತುಂಬಾ ಒಲವಿದೆ, ಕುತೂಹಲವಿದೆ. ನನಗೀಗ, ಜಾತಕ, ಒಳ್ಳೆಯ ಹಾಗೂ ಕೆಟ್ಟ ಕ್ಷಣಗಳು ಹಾಗೂ ಭವಿಷ್ಯದ ಹಲವು ಘಾನೆಗಳ ಬಗ್ಗೆ ಮುನ್ನೋಟ ಸಿಗುತ್ತಿದ್ದು, ಈ ಮೂಲಕ ನಾನು ಬುದ್ದಿವಂತಿಕೆಯಿಂದ ನನ್ನ ಆಯ್ಕೆಗಳನ್ನು ಮಾಡಲು, ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ' ಎಂದಿದ್ದಾರೆ 

ಕೋಮಲ್ ಜಾ. ಒಟ್ಟಿನಲ್ಲಿ, ಬಾಲಿವುಡ್‌ ಸಿನಿಮಾ ಮೂಲಕ ಇಡೀ ಭಾರತದ ಸಿನಿಪ್ರಪಂಚದಲ್ಲಿ ಬಿರುಗಾಳಿ ಎಬ್ಬಿಸಲು 'ಮೈ ಡ್ಯಾಡ್ಸ್‌ ವೆಡ್ಡಿಂಗ್'ಮೂಲಕ ಕಾಯುತ್ತಿದ್ದಾರೆ ನಟಿ ಕೋಮಲ್ ಜಾ. ಈ ನಟಿಯ ಫೋಟೋ ನೋಡಿದವರು, ಡೈರೆಕ್ಷನ್ ಟೀಮ್ ಈ ಚಿತ್ರದ ಶೂಟಿಂಗ್ ಬೇಗ ಮುಗಿಸಿ, ಆದಷ್ಟೂ ಬೇಗ ಸಿನಿಮಾವನ್ನು ತೆರೆಗೆ ತರಲಿ ಎಂದು ಹರಕೆ ಹೊತ್ತಿರುವ ಸಂಗತಿ ಗುಟ್ಟಾಗಿ ಇಲ್ಲ!
 

Latest Videos

click me!