ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ; ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ!

First Published Jan 5, 2021, 8:42 PM IST

ಗೋ ಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಈ ಮೂಲಕ ಪರ ವಿರೋಧದ ನಡುವೆ ಕರ್ನಾಟಕದಲ್ಲಿ ಹೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಪರ ವಿರೋಧ ಹಾಗೂ ಭಾರಿ ಚರ್ಚೆಗೆ ಒಳಗಾಗಿದ್ದ ಗೋ ಹತ್ಯೆ ನಿಷೇಧ ಕಾಯ್ದೆ ಕರ್ನಾಟಕದಲ್ಲಿ ಜಾರಿಯಾಗಿದೆ . ಗೋ ಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ.
undefined
ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ಕ್ಕೆ ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲ ಸಹಿ ಹಾಕಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಬಹು ವಿವಾದಿತ ಕಾಯ್ದೆ ಜಾರಿಯಾಗಿದೆ.
undefined
ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಪ್ರಕಾರ, ಕರ್ನಾಟಕದಲ್ಲಿ ಯಾವುದೇ ವ್ಯಕ್ತಿ ಜಾನುವಾರ ಹತ್ಯೆ ಮಾಡಲು ಅಥಾವ ಹತ್ಯೆ ನಡೆಸುವವರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ.
undefined
ಕಾಯ್ದೆಯಿಂದ ಕರ್ನಾಟಕದೊಳಗೆ ಹಾಗೂ ಇತರ ರಾಜ್ಯಕ್ಕೆ ಜಾನುವಾರ ಸಾಗಾಣಿಕೆಯ ಮೇಲೂ ನಿರ್ಬಂಧ ಬಿದ್ದಿದೆ. ಆದರೆ ಕೃಷಿ ಹಾಗೂ ಪಶುಸಂಗೋಪನೆ ಕಾರಣಕ್ಕಾಗಿ ಸಾಗಣಿಕೆ ಮಾಡಲು ಅನುವು ಮಾಡಿಕೊಡಲಾಗಿದೆ.
undefined
ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಜಾನುವಾರ ಹತ್ಯೆಗಾಗಿ ಜಾನುವಾರ ಮಾರಾಟ, ಖರೀದಿ ಅಥವಾ ವಿಕ್ರಯಕ್ಕೂ ನಿಷೇಧ ಹೇರಲಾಗಿದೆ.
undefined
ನಿಯಮ ಉಲ್ಲಂಘಿಸಿ ಜಾನುವಾರ ಹತ್ಯೆ ಮಾಡಿದರೆ ಅಥವಾ ಹತ್ಯೆಗಾಗಿ ಸಾಗಾಣಿಕೆ, ಮಾರಾಟ ಮಾಡಿದರೆ, 3 ರಿಂದ 7 ವರ್ಷದ ವರೆಗೆ ಜೈಲು ಶಿಕ್ಷೆ ಗುರಿಯಾಗಬೇಕಾಗುತ್ತದೆ.
undefined
ಜೈಲು ಶಿಕ್ಷೆ ಮಾತ್ರವಲ್ಲ, 50,000 ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ನಿಯದಲ್ಲಿ ಅವಕಾಶವಿದೆ. ಇಷ್ಟೇ ಅಲ್ಲ ಜಾನುವಾರಗಳನ್ನ ಜಪ್ತಿ ಮಾಡುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ.
undefined
ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯವನ್ನು ಗೊತ್ತುಪಡಿಸಲು ಸೂಚಿಸಲಾಗಿದೆ.
undefined
click me!