ಕೃಷಿ ಸಚಿವ ಚಲುವರಾಯಸ್ವಾಮಿ ಕಾಟೇರಾ ಸಿನಿಮಾದ ವಿಲನ್ ಇದ್ದಂಗಿದ್ದಾರೆ; ಡಾ.ರವೀಂದ್ರ

By Sathish Kumar KHFirst Published Apr 23, 2024, 8:24 PM IST
Highlights

ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಅವರೊಂದಿಗೆ ಇರುವವರನ್ನು ನೋಡಿದರೆ ಕಾಟೇರ ಸಿನಿಮಾದ ವಿಲನ್‌ ಇದ್ದಂಗಿದ್ದಾರೆ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ರವೀಂದ್ರ ಟೀಕೆ ಮಾಡಿದ್ದಾರೆ.

ಮಂಡ್ಯ (ಏ.23): ಒಂದೂವರೆ ತಿಂಗಳ ಹಿಂದೆ ಸ್ಟಾರ್ ಚಂದ್ರು ಯಾರು ಎನ್ನೋದೇ ಗೊತ್ತಿರಲಿಲ್ಲ. ಇನ್ನು ಮದ್ದೂರು ಶಾಸಕ‌ ಉದಯ್‌ ಇಸ್ಪೀಟ್ , ಜೂಜು ಆಡಿಸಿಕೊಂಡಿದ್ದಾರೆ. ಸಚಿವ ಚಲುವರಾಯಸ್ವಾಮಿ ಹಾಗೂ ಇವರು ಗ್ಯಾಂಗ್‌ ನೋಡಿದ್ರೆ ಕಾಟೇರಾ ಸಿನಿಮಾದ ವಿಲನ್ ಇದ್ದಂಗಿದ್ದಾರೆ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ವಾಗ್ದಾಳಿ ಮಾಡಿದ್ದಾರೆ.

ಮದ್ದೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ದೂರು ಕ್ಷೇತ್ರದ ಶಾಸಕ‌ ಉದಯ್‌ನನ್ನು ಜನಪ್ರತಿನಿಧಿ ಎನ್ನೋಕೆ ಆಗಲ್ಲ. ಇಸ್ಪೀಟ್ , ಜೂಜು ಆಡಿಸಿಕೊಂಡು ಇದ್ದಾರೆ. ಒಂದುವರೆ ತಿಂಗಳ ಹಿಂದೆ ಸ್ಟಾರ್ ಚಂದ್ರು ಅವರನ್ನು ನೋಡಿಯೇ ಇರಲಿಲ್ಲ‌. ದುಡ್ಡು ಇದೆ ಎಂದು ಸ್ಟಾರ್ ಚಂದ್ರು ಕರೆದುಕೊಂಡು ಬಂದಿದ್ದಾರೆ. ಚಲುವರಾಯಸ್ವಾಮಿ ಹಾಗೂ ಇವರೆಲ್ಲರನ್ನೂ ನೋಡಿದ್ರೆ ಕಾಟೇರಾ ಸಿನಿಮಾದ ವಿಲನ್ ಇದ್ದ ಹಾಗೆ ಇದ್ದಾರೆ. ಮಂಡ್ಯ ಜನರನ್ನು ದುಡ್ಡಿಂದ ಕೊಳ್ಳೋಕೆ ಆಗಲ್ಲ. ಈ ಬಡ್ಡಿ ಮಕ್ಕಳ 2,000 ದುಡ್ಡಿಗೆ ಬಗ್ಗಲ್ಲ. ಮಂಡ್ಯ ಜನರು ಪ್ರೀತಿ, ವಿಶ್ವಾಸಕ್ಕೆ ಮಣಿಯುತ್ತಾರೆ. ಕುಮಾರಣ್ಣ ಮಂಡ್ಯ ಜಿಲ್ಲೆಗೆ ಹೊರಗಿನವರು ಅಲ್ಲ ಎಂದು ಹೇಳಿದರು.

622 ಕೋಟಿ ಆಸ್ತಿಯ ಒಡೆಯ ಮಂಡ್ಯ ಕೈ ಅಭ್ಯರ್ಥಿ ಕಣದಲ್ಲಿರುವ ಅತ್ಯಂತ ಶ್ರೀಮಂತ ಕುಳ, 2ನೇ ಸ್ಥಾನ ಯಾರಿಗೆ?

ಕುಮಾರಣ್ಣ ಮಂಡ್ಯ ಜಿಲ್ಲೆಯಿಂದ ಕೇಂದ್ರ ಕೃಷಿ ಹಾಗೂ ರಸಗೊಬ್ಬರ ಸಚಿವ ಆಗಲೇ ಬೇಕು. ಕೆಆರ್‌ಎಸ್‌ನಲ್ಲಿ 91 ಅಡಿ ನೀರು ಇದ್ರು ರೈತರಿಗೆ ಕೊಟ್ಟಿಲ್ಲ. ಈ ಖದೀಮರು ರೈತರನ್ನು ಪರಿಗಣಿಸಿಲ್ಲ. ಬರಿ ಚುನಾವಣೆ ಮಾಡೋದು ಅಷ್ಟೇ ಕಾಂಗ್ರೆಸ್ ನಾಯಕರಿಗೆ ಗೊತ್ತಿರೋದು. ಕುಮಾರಣ್ಣ 62 ಅಡಿ ನೀರು ಇದ್ದಾಗಲೂ ಕುಮಾರಣ್ಣ ನೀರು ಬಿಟ್ಟಿದ್ದಾರೆ. ಕಾಂಗ್ರೆಸ್ ಅವರು ಅವೈಜ್ಞಾನಿಕ ಕಾಮಗಾರಿ ಮಾಡಿ ಕಾವೇರಿ ನಿಲ್ಲಿಸಿದ್ದಾರೆ. ರೈತರು ಈಗ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದರು. ರೈತರ ದುಡಿಮೆ ಕಿತ್ತುಕೊಂಡು 2,000 ರೂ ಕೊಡ್ತಾ ಇದ್ದೀವಿ ಅಂತಾರೆ. ಯಾರಪ್ಪನ ದುಡ್ಡನ್ನು ಸಿದ್ದರಾಮಯ್ಯ ಕೊಡ್ತಾ ಇದ್ದಾರೆ ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಮಹಾರಾಜ ಯಾರಪ್ಪನ ಮನೆಯಿಂದ ದುಡ್ಡು ಕೊಟ್ಟಿದ್ದಾನೆ ಅಂತಾರೆ. ಸಿದ್ದರಾಮಯ್ಯ ಏನು ಅಕ್ಕಿ, 2 ಸಾವಿರ ರೂ. ದುಡ್ಡನ್ನು ಅವರ ಅಪ್ಪನ ಮನೆಯಿಂದ ಕೊಡ್ತಾ ಇದ್ದಾನಾ? ಸಿದ್ದರಾಮಯ್ಯ ಅಕ್ಕಿ‌ ಕೊಡುವ ಮುನ್ನ ಜನ ಅನ್ನನೇ ತಿನ್ನುತ್ತಿಲ್ಲ ಎಂದು ಹೇಳ್ತಾರೆ. ಸಿದ್ದರಾಮಯ್ಯಗೆ ಸಮ ಸಮಾಜದ ಕಾಳಜಿ‌ ಇಲ್ಲ. ಎಲ್ಲಾ ವರ್ಗದ ಜನ ನಾಯಕರನ್ನು ಮುಗಿಸಿದ್ದು ಸಿದ್ದರಾಮಯ್ಯ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯಿಂದ ವಿರೋಧ ಪಕ್ಷ ಸ್ಥಾನ ಕಿತ್ತುಕೊಂಡರು. ಪರಮೇಶ್ವರ್ ಅವರನ್ನು ಸೋಲಿಸಿದರು. ಶ್ರೀನಿವಾಸ್ ಪ್ರಸಾದ್ ಅವರನ್ನು ಕಿತ್ತಾಕಿದರು. ಇವರು ಇಟ್ಟುಕೊಂಡಿರೋದು ಮಹದೇವಪ್ಪ, ಆಂಜನೇಯ ಅಂಥವರನ್ನು ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮೋದಿ ಅಲೆಯಿಲ್ಲ, ಕಾಂಗ್ರೆಸ್ ಗ್ಯಾರಂಟಿ ಅಲೆಯಿದೆ: ಸಿಎಂ ಸಿದ್ದರಾಮಯ್ಯ

ಕುಮಾರಣ್ಣ ಮಂಡ್ಯ ಜಿಲ್ಲೆಗೆ ಹೊರಗಿನವರು ಅಲ್ಲ. ಎಸ್.ಎಂ.ಕೃಷ್ಣ ಅವರ ನಂತರ ಕುಮಾರಣ್ಣ ಮಂಡ್ಯ ಜಿಲ್ಲೆಯಿಂದ ಕೇಂದ್ರ ಸಚಿವ ಆಗಬೇಕು. ಕುಮಾರಣ್ಣ ಗೆದ್ದು ಮಂತ್ರಿಯಾದರೆ ಮಂಡ್ಯ ಜನರ ಬದುಕು ಕೆಟ್ಟು ಹೋಗುವುದನ್ನು ತಪ್ಪಿಸುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಂಬಿದ್ರೆ ನಮ್ಮಂತ ದಡ್ಡರು ಬೇರಾರೂ ಇರುವುದಿಲ್ಲ. ದೇಶದ ಎಲ್ಲಾ ಮಹಿಳೆಯರಿಗೆ 2,000 ರೂ. ಕೊಟ್ಟರೆ ಸಾವಿರಾರು ಕೋಟಿ‌ ಬೇಕು. ರಾಹುಲ್‌ ಗಾಂಧಿಯನ್ನು ಎಲ್ಲರೂ ಪಪ್ಪು ಅಂತಾರೆ. ನಾವು ಕೂಡ ಪಪ್ಪು ಎನ್ನಬೇಕಾಗಿದೆ. ಚಲುವರಾಯಸ್ವಾಮಿ ಜಿಲ್ಲೆಯ ಪಾಪದ ಫಲವಾಗಿ ಮಂಡ್ಯಗೆ ಸ್ಟಾರ್ ಚಂದ್ರು ವಕ್ಕರಿಸಿದ್ದಾರೆ. ಮೊಸಳೆಯ ಕಣ್ಣೀರನ್ನು ಚಲುವರಾಯಸ್ವಾಮಿ ಹಾಕ್ತಾ ಇದ್ದಾರೆ. ಯಾವುದಕ್ಕೂ ಮಂಡ್ಯ ಜಿಲ್ಲೆಯ ಜನರು ಮರುಳಾಗಬೇಡಿ ಎಂದು ಹೇಳಿದರು.

click me!