ಲೀಗ್‌ನ ಕ್ಯಾಂಡಿ ಸ್ವಾಂಪ್ ಆರ್ಮಿ ತಂಡದ ಮಾಲೀಕ, ಭಾರತದ ಯೋನಿ ಪಟೇಲ್ ಹಾಗೂ ಪಂಜಾಬ್ ರಾಯಲ್ಸ್‌ನ ವ್ಯವಸ್ಥಾಪಕ ಆಕಾಶ್‌ಗೆ ಶ್ರೀಲಂಕಾದಿಂದ ಹೊರಹೋಗದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.
ಕೊಲಂಬೊ(ಏ.24): ಕಳೆದ ಮಾರ್ಚ್ 8ರಿಂದ 19ರ ವರೆಗೆ ಶ್ರೀಲಂಕಾದಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಆರೋಪ ಕೇಳಿಬಂದಿದ್ದು, ತನಿಖೆ ಆರಂಭಿಸಲಾಗಿದೆ. ಲೀಗ್‌ನ ಕ್ಯಾಂಡಿ ಸ್ವಾಂಪ್ ಆರ್ಮಿ ತಂಡದ ಮಾಲೀಕ, ಭಾರತದ ಯೋನಿ ಪಟೇಲ್ ಹಾಗೂ ಪಂಜಾಬ್ ರಾಯಲ್ಸ್‌ನ ವ್ಯವಸ್ಥಾಪಕ ಆಕಾಶ್‌ಗೆ ಶ್ರೀಲಂಕಾದಿಂದ ಹೊರಹೋಗದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.
ಪಟೇಲ್ ಹಾಗೂ ಆಕಾಶ್ ತಮ್ಮ ತಂಡಗಳ ಆಟಗಾರರಿಗೆ ಫಿಕ್ಸಿಂಗ್ ನಡೆಸಲು ಸೂಚಿಸಿದ್ದರು ಎಂದು ಶ್ರೀಲಂಕಾ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಉಪುಲ್ ತರಂಗಾ ಹಾಗೂ ನ್ಯೂಜಿಲೆಂಡ್‌ನ ಮಾಜಿ ಆಟಗಾರ ನೀಲ್ ಬ್ರೂಮ್ ದೂರು ಸಲ್ಲಿಸಿದ್ದರು.
ಡೆಲ್ಲಿಗೆ ಇಂದು ಗುಜರಾತ್ ಎದುರು ಮಾಡು ಇಲ್ಲವೇ ಮಡಿ ಪಂದ್ಯ..!
ಹಸರಂಗಗಾಗಿ ಚಹಲ್‌ರನ್ನು ಖರೀದಿಸಲಾಗಲಿಲ್ಲ: ಹೆಸ್ಸನ್
ನವದೆಹಲಿ: ಕಳೆದ ಆವೃತ್ತಿ ಐಪಿಎಲ್‌ನ ಹರಾಜಿನ ವೇಳೆ ಶ್ರೀಲಂಕಾದ ಹಸರಂಗರನ್ನು ಖರೀದಿಸಿದ್ದರಿಂದ ಯಜುವೇಂದ್ರ ಚಹಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರ ತಪ್ಪಿತು ಎಂದು ಆರ್‌ಸಿಬಿಯ ಮಾಜಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ತಿಳಿಸಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ನನ್ನ ವೃತ್ತಿ ಜೀವನ ಮುಗಿಸುವವರೆಗೂ ಮತ್ತು ಬಹುಶಃ ಅದರಾಚೆಗೂ ಚಹಲ್‌ರನ್ನು ಕಳೆದುಕೊಂಡಿರುವುದಕ್ಕೆ ನಿರಾಶೆಗೊಳ್ಳುತ್ತೇನೆ. ಅವರು ಅತ್ಯುತ್ತಮ ಬೌಲರ್. ಆದರೆ ಹರಾಜಿನಲ್ಲಿ ಖರೀದಿಸಲಾಗಲಿಲ್ಲ. ಅವರ ಹೆಸರು ತಡವಾಗಿ ಬಂತು. ಆದರೆ ನಮಗೆ ಲೆಗ್ ಸ್ಪಿನ್ನರ್ ಅಗತ್ಯವಿದ್ದ ಕಾರಣ ಅದಾಗಲೇ ಹಸರಂಗರನ್ನು ಖರೀದಿಸಲಾಗಿತ್ತು’ ಎಂದಿದ್ದಾರೆ.
ಕ್ರಿಕೆಟಿಗ ಸಂದೀಪ್ ಶರ್ಮಾ ಪತ್ನಿ ನಮ್ಮ ಬೆಂಗಳೂರಿನವರು..! ಓದಿದ್ದು ಇದೇ ಕಾಲೇಜ್
ಬಸ್ ಮಿಸ್ ಮಾಡಿಕೊಂಡ ಟಾಪ್ಲಿಗೆ ‘ಸುದ್ದಿಗೋಷ್ಠಿ’ ಶಿಕ್ಷೆ
ಕೋಲ್ಕತಾ: ಭಾನುವಾರ ಕೋಲ್ಕತಾ ವಿರುದ್ಧ ಪಂದ್ಯದ ಬಳಿಕ ತಂಡದ ಬಸ್ ಮಿಸ್ ಮಾಡಿಕೊಂಡಿದ್ದಕ್ಕೆ ಆರ್‌ಸಿಬಿ ವೇಗಿ ರೀಸ್ ಟಾಪ್ಲಿಗೆ ‘ಸುದ್ದಿಗೋಷ್ಠಿ ಶಿಕ್ಷೆ’ ನೀಡಲಾಗಿದೆ. ಪಂದ್ಯದ ಬಳಿಕ ಆರ್‌ಸಿಬಿಯ ಸುದ್ದಿಗೋಷ್ಠಿ ನಿಗದಿಯಾಗಿದ್ದರೂ, ಆಟಗಾರರು ಕ್ರೀಡಾಂಗಣದಿಂದ ತೆರಳಿದ್ದರಿಂದ ಸುದ್ದಿಗೋಷ್ಠಿ ಇಲ್ಲ ಎಂದು ಪತ್ರಕರ್ತರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಆರ್‌ಸಿಬಿಯ ಆಡುವ 11ರ ಬಳಗದಲ್ಲಿ ಇರದಿದ್ದ ಟಾಪ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದಾರೆ. ಈ ಬಗ್ಗೆ ಪತ್ರಕರ್ತರು ಟಾಪ್ಲಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಟಾಪ್ಲಿ ‘ತಂಡದ ಮುಖ್ಯ ಬಸ್ ಈಗಾಗಲೇ ಹೋಗಿದೆ. ನಾನು ಜಿಮ್‌ನಲ್ಲಿದ್ದ ಕಾರಣ ಬಸ್ ಮಿಸ್ ಮಾಡಿಕೊಂಡಿದ್ದೇನೆ. ಹೀಗಾಗಿ ನನ್ನನ್ನೇ ಸುದ್ದಿಗೊಷ್ಠಿಗೆ ಕಳುಹಿಸಿದ್ದಾರೆ’ ಎಂದಿದ್ದಾರೆ.