ಹವಾಮಾನ ಬದಲಾವಣೆ: ಹವಾಮಾನ ಬದಲಾವಣೆಯಿಂದಾಗಿ ಮರುಭೂಮಿಯಲ್ಲಿ ಹಿಮಪಾತ, ಬಿಸಿಲಿನಲ್ಲಿ ಮಳೆ, ಭೂಕಂಪನಗಳಿಲ್ಲದ ಪ್ರದೇಶಗಳಲ್ಲಿ ಭೂಕಂಪ ಸಂಭವಿಸುತ್ತಿದೆ. ಇದರಿಂದ ಭೂಮಿ ಯಾವಾಗ ಬೇಕಾದರೂ ನಾಶವಾಗಬಹುದು ಎಂಬ ಎಚ್ಚರಿಕೆಗಳು ಹೆಚ್ಚುತ್ತಿವೆ. ದಿನೇ ದಿನೇ ಉಷ್ಣಾಂಶ ಏರಿಕೆಯಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ 70 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಏರಿಕೆಯಾಗಬಹುದು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ಪರಿಸ್ಥಿತಿಯಲ್ಲಿ ಭೂಮಿಯ ಮೇಲೆ ಯಾವುದೇ ಜೀವಿಗಳು ಬದುಕುಳಿಯುವುದು ಅಸಾಧ್ಯ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.