10 ದಿನದಲ್ಲಿ ದರ್ಶನ್ ಬೇಲ್ ಅವಧಿ ಮುಕ್ತಾಯ; ಆತಂಕದಲ್ಲಿ ಸರ್ಜರಿಗೆ ಓಕೆ ಅಂದುಬಿಟ್ರಾ?

Dec 3, 2024, 4:53 PM IST

ದರ್ಶನ್ ಮಧ್ಯಂತರ ಬೇಲ್ ಅವಧಿ ಮುಗಿಯೋಕೆ ಇನ್ನೂ ಹತ್ತೇ ದಿನ ಬಾಕಿ ಇದೆ. ಇಷ್ಟು ದಿನ ಸರ್ಜರಿಗೆ ಒಪ್ಪದೇ ಬಿಜಿಎಸ್ ಆಸ್ಪತ್ರೆಯಲ್ಲಿ ಮಲಗಿದ್ದ ನಟ, ಈಗ ಸರ್ಜರಿ ಓಕೆ ಅಂದಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿರೋ ದರ್ಶನ್ ಫೋಟೊವೊಂದು ಹೊರಬಿದ್ದಿದ್ದು ಫ್ಯಾನ್ಸ್ ಅಯ್ಯೋ ಪಾಪ ಅಂತಿದ್ದಾರೆ. ಸದ್ಯ ಹೈಕೋರ್ಟ್​​ನಲ್ಲಿ ದರ್ಶನ್ ರೆಗ್ಯೂಲರ್ ಬೇಲ್ ಅರ್ಜಿಯ ವಿಚಾರಣೆ ನಡೀತಾ ಇದೆ. ದರ್ಶನ್ ಪರ ವಕೀಲರು ರೆಗ್ಯೂಲರ್ ಬೇಲ್ ಕೊಡಿಸೋದಕ್ಕೆ ಶತಾಯ ಗತಾಯ ಪ್ರಯತ್ನ ಪಡ್ತಾ ಇದ್ದಾರೆ. ಆದ್ರೆ ಮೆಡಿಕಲ್ ಗ್ರೌಂಡ್ಸ್ ಮೇಲೆ ಬೇಲ್ ಪಡೆದು ಕಳ್ಳಾಟವಾಡಿದ್ದು ಸಾಬೀತಾದ್ರೆ ರೆಗ್ಯೂಲರ್ ಬೇಲ್​ಗೆ ಕೊಕ್ಕೆ ಬೀಳಲಿದೆ.