
ಮೈಸೂರು(ಡಿ.03) ಮುಡಾ ಪ್ರಕರಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹೆಜ್ಜೆ ಹೆಜ್ಜೆಗೆ ಸಂಕಷ್ಟ ತರುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಹಂಚಿಕೆ ಮಾಡಿರುವ 14 ಸೈಟ್‌ನಲ್ಲಿ ಅಕ್ರಮ ನಡೆದಿರುವ ಆರೋಪ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಕುರಿತು ಈಗಾಗಲೇ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೂ ಹಾಜರಾಗಿದ್ದಾರೆ. ಇದರ ನಡುಲೆ ಪಿಎಂಎಲ್ಎ ಕಾಯ್ದೆ ಅಡಿಯಲ್ಲಿ ಇಡಿ ಈ ಪ್ರಕರಣಧ ತನಿಖೆ ನಡೆಸುತ್ತಿದೆ. ಈ ವೇಳೆ ಕೆಲ ಸ್ಫೋಟಕ ಮಾಹಿತಿ ಹೊರಬಂದಿದೆ. ನಕಲಿ ವ್ಯಕ್ತಿಗಳು, ಬೇನಾಮಿ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ. ಬರೋಬ್ಬರಿ 1095 ಸೈಟ್‌ಗಳನ್ನು ಮುಡಾ ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಹಂಚಿಕೆ ಮಾಡಿರುವದು ಪತ್ತೆಯಾಗಿದೆ. ಒಟ್ಟು 700 ಕೋಟಿ ರೂಪಾಯಿ ಮೌಲ್ಯದ ಸೈಟ್ ಹಂಚಿಕೆಯಲ್ಲಿ ಅಕ್ರಮ ಪತ್ತೆಯಾಗಿದೆ.
ಮುಡಾ ಸೈಟ್ ಹಂಚಿಕೆ ವೇಳೆ ಕಾನೂನು ಗಾಳಿಗೆ ತೂರಿರುವುದು ಪತ್ತೆಯಾಗಿದೆ. ಹಿಂದಿನ ಆಯುಕ್ತ ದಿನೇಶ್ ಕುಮಾರ್ ಕೋಟ್ಯಾಂತರ ಬೆಳೆಬಾಳುವ ನಿವೇಶನಗಳನ್ನು ಜುಜುಬಿ ಮೊತ್ತಕ್ಕೆ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಲವು ಸಂಘ ಸಂಸ್ಥೆಗಳ ಹೆಸರಿನಲ್ಲಿ ಸೈಟ್ ಹಂಚಿಕಯಾಗಿದೆ. ಆದರೆ ಈ ರೀತಿಯ ಯಾವುದೇ ಸಂಘ ಸಂಸ್ಥೆಗಳು ಅಸ್ತಿತ್ವದಲ್ಲೇ ಇಲ್ಲ ಅನ್ನೋದು ಬಹಿರಂಗವಾಗಿದೆ. ಕೋಟಿ ಕೋಟಿ ರೂಪಾಯಿ ಬೆಳಬಾಳುವ ಸೈಟ್‌ಗಳನ್ನು ಕೇವಲ 5 ರಿಂದ 6 ಲಕ್ಷ ರೂಪಾಯಿಗೆ ಹಂಚಿಕೆ ಮಾಡಲಾಗಿದೆ ಅನ್ನೋದು ತನಿಖೆಯ ಸಾರಾಂಶ.
ಮುಡಾ ಹಗರಣ: ಸಚಿವ ಬೈರತಿ ಸುರೇಶ್ ಕಚೇರಿಗೂ ಬಂತು ಇ.ಡಿ ನೋಟಿಸ್
ಸಿದ್ದರಾಮಯ್ಯ ಪತ್ನಿಗೆ ಮುಡಾದಿಂದ 14 ಸೈಟ್ ಹಂಚಿಕೆ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಪುತ್ರ ಯತಿಂದ್ರ ಸಿದ್ದರಾಮಯ್ಯ ಮುಡಾ ಸದಸ್ಯರಾಗಿದ್ದರು. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಸಿದ್ದರಾಮಯ್ಯ ಪಿಎ ಕೂಡ ತೀವ್ರ ಒತ್ತಡ ಹೇರಿದ್ದಾರೆ ಅನ್ನೋದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇಡಿ ತನಿಖಾ ಪತ್ರಿ ಲೋಕಾಯುಕ್ತ ಕೈಸೈರುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಸರ್ಕಾರ ಅಲರ್ಟ್ ಆಗಿದೆ. ಅಕ್ರಮವಾಗಿ ಹಂಚಿಕೆ ಮಾಡಿರುವ 48 ಸೈಟ್ ಹಂಚಿಕೆ ಪ್ರಕ್ರಿಯೆಯನ್ನು ಸರ್ಕಾರ ರಾತ್ರೋರಾತ್ರಿ ರದ್ದುಗೊಳಿಸಿದೆ. ಮುಡಾ ತನಿಖಾ ವರದಿಯನ್ನ ಸರ್ಕಾರ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ರಾತ್ರೋ ರಾತ್ರಿ ಸರ್ಕಾರ 49 ಸೈಟ್ ಹಂಚಿಕೆಯನ್ನು ರದ್ದು ಮಾಡಿದೆ. ಈ ಕುರಿತು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಘುನಂದನ್ ಆದೇಶ ಹೊರಡಿಸಿದ್ದಾರೆ. ಹಂಚಿಕೆಗೆ ಆದೇಶ ನೀಡಿರುವ 48 ಸೈಟ್‌ಗಳ ಖಾತೆಗೆ ನೋಂದಣಿ ವರ್ಗಾವಣೆ ಮಾಡದಂತೆ ನಗರ ಪಾಲಿಕೆ ಆಯುಕ್ತ ಹಾೂ ಜಿಲ್ಲಾ ನೋಂದಣಿ ಅಧಿಕಾರಿಗೆ ಪತ್ರ ಬರೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ