Latest Videos

ಅಂದು ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಕನ್ನಡದ ಹಾಟ್ ನಟಿಯರು ಈಗ ಹೇಗಿದ್ದಾರೆ ನೋಡಿ!

First Published May 26, 2024, 8:23 PM IST

ಕನ್ನಡ ಚಿತ್ರರಂಗದಲ್ಲಿ 70 ರ ದಶಕದಲ್ಲೇ ಬಿಕಿನಿ ಕಲ್ಚರ್ ಆರಂಭವಾಗಿತ್ತು. ಪಡ್ಡೆಗಳ ಎದೆಯಲ್ಲಿ ಬಿರುಗಾಳಿ ಎಬ್ಬಿಸಿದ್ದ ದಿವಂಗತ ನಟ ಜಯಂತಿ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಿಕಿನಿ ತೊಟ್ಟಿದ್ದರು. ಅದಾದ ಬಳಿಕ ಮಾಲಾಶ್ರೀ ಕೂಡ ತೊಟ್ಟಿದ್ದರು. ಬಳಿಕ ಕನ್ನಡ ಹಲವು ನಟಿಯರು ಟು ಪೀಸ್‌ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ನಟಿಯರ ಪಟ್ಟಿ ಇಂತಿದೆ.

 1976ರಲ್ಲಿ ಬಿಡುಗಡೆಯಾದ ಡಾ. ರಾಜ್ ಕುಮಾರ್ ಅಭಿನಯದ 'ಬಹದ್ದೂರ್ ಗಂಡು' ಚಿತ್ರದಲ್ಲಿ ಮೊದಲ ಬಾರಿಗೆ ಜಯಂತಿ ಸ್ವಿಮ್ ಸೂಟ್​​​​​​​​​​​​​​​​​​​​​​​​​ನಲ್ಲಿ ಮಿಂಚಿದ್ದರು. ಕನಸಿನ ರಾಣಿ ಮಾಲಾಶ್ರೀ ಮೊದಲ ಚಿತ್ರ ರಾಘವೇಂದ್ರ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ 'ನಂಜುಂಡಿ ಕಲ್ಯಾಣ' ದಲ್ಲಿ ಬಿಕಿನಿ ತೊಟ್ಟು ಮಿಂಚಿದ್ದರು. ನಟ ಸುನಿಲ್ ಅಭಿನಯದ 'ಸ್ನೇಹದ ಕಡಲಲ್ಲಿ' ಚಿತ್ರದಲ್ಲೂ ಮಾಲಾಶ್ರೀ ಬಿಕಿನಿ ತೊಟ್ಟಿದ್ದರು.

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಅಂದಕ್ಕೆ ಮರುಳಾಗದವರಿಲ್ಲ. ತುಪ್ಪದ ಬೆಡಗಿ ಎಂದೇ ಹೆಸರು ಪಡೆದಿರುವ ಇವರು ಆಗಾಗ ತಮ್ಮ ಹಾಟ್‌ ಫೋಟೋಗಳನ್ನು ಹಾಕುತ್ತಿರುತ್ತಾರೆ. ಇವರು ಮೊದಲು ಮಾಡೆಲಿಂಗ್ ಗೆ ಧರಿಸಿದ್ದರು. ಮ್ಯಾಗಸೀನ್‌ ಒಂದಕ್ಕೆ ಬಿಳಿ,ಹಳದಿ ಮತ್ತು ನೀಲಿ ಮಿಶ್ರಿತ ಬಿಕಿನಿ ತೊಟ್ಟಿದ್ದರು.

ಹಾಟ್‌ ಮತ್ತು ಗ್ಲಾಮರಸ್‌ ನಟಿ ಹಲವು ಭಾಷೆಗಳಲ್ಲಿ ಬಣ್ಣ ಹಚ್ಚಿರುವ ಪ್ರಿಯಾಮಣಿ ತೆಲುಗು ಸಿನೆಮಾವೊಂದಕ್ಕೆ ಮೊದಲು ಸ್ಕಿನ್ ಕಲರ್ ಬಿಕಿನಿ ತೊಟ್ಟಿದ್ದರು.

'ಮನಸಾರೆ' ಬೆಡಗಿ ನಟಿ ಐಂದ್ರಿತಾ ರೇ ಅವರು, 2012ರಲ್ಲಿ  ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಎರಡನೇ ಸೀಸನ್‌ ಕ್ಯಾಲೆಂಡರ್‌ನಲ್ಲಿ ತಮ್ಮ ಬೆಡಗು ಬಿನ್ನಾಣ ತೋರಿದ್ದರು. ಗೋವಾದಲ್ಲಿ ಈ ಫೋಟೋ ಶೂಟ್ ಮಾಡಿಸಲಾಗಿತ್ತು.

ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಸಿನೆಮಾ ಕ್ಷೇತ್ರಕ್ಕೆ ಬರುವ ಮುನ್ನ ಬಿಕಿನಿಯಲ್ಲಿ ತೆಗೆಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.  ಸದ್ಯ ಉದ್ಯಮಿಯನ್ನು ಮದುವೆಯಾಗಿ ಆರಾಮ ಇದ್ದಾರೆ.

ಮಂಗಳೂರಿನ ಬೆಡಗಿ ಮಾಡೆಲ್ ಕಮ್ ನಟಿ ಶುಭಾ ಪೂಂಜಾ ಮೊಗ್ಗಿನ ಮನಸ್ಸು ಮೂಲಕ ಕನ್ನಡ ಸಿನಿಮಾ ಜರ್ನಿ ಶುರು ಮಾಡಿದರು. 2003 ರಲ್ಲಿ ‘ಮಿಸ್ ಚೆನ್ನೈ ಟಾಪ್ ಮಾಡೆಲ್ ’ ಕಿರೀಟವನ್ನು ತನ್ನದಾಗಿಸಿಕೊಂಡಿದ್ದು, ಹಲವು ಬಾರಿ ಬಿಕಿನಿ ತೊಟ್ಟಿದ್ದಾರೆ.

ಕೊಡಗಿನ ಕುವರಿ ನಿಧಿ ಸುಬ್ಬಯ್ಯ ಕೂಡ ಬಿಕಿನಿಯಲ್ಲಿ ಮಿಂಚಿದ್ದಾರೆ. ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರ ಗರಡಿಯಿಂದ ಬಂದಂತಹ   ನಿಧಿ ಸುಬ್ಬಯ್ಯ ಬಾಲಿವುಡ್ ನಲ್ಲೂ ನಟಿಸಲು ಮುಂದಾಗಿದ್ದರು. ಈ ವೇಳೆ ಬಿಕಿನಿ ತೊಟ್ಟಿದ್ದರು. ಇದಕ್ಕೂ ಮುನ್ನ ಸಿಸಿಎಲ್‌ ಕ್ಯಾಲೆಂಡರ್‌ ಗೆ ಬಿಕಿನಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದರು.

'ಸುಂಟರಗಾಳಿ' ಚಿತ್ರದಲ್ಲಿ ದರ್ಶನ್ ಜೊತೆ ಡ್ಯುಯೆಟ್ ಹಾಡಿದ್ದ ರಕ್ಷಿತಾ, ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗುವ ಮೊದಲು ಹಳದಿ ಬಣ್ಣದ ಸೆಮಿ-ಬಿಕಿನಿಯಲ್ಲಿ ಕಾಣಿಕೊಂಡಿದ್ದರು.

ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಮಾಲ್ಡೀವ್ಸ್ ನಲ್ಲಿ ಬಿಕಿನಿಯಲ್ಲಿದ್ದ ಫೋಟೋವನ್ನು ಶಾನ್ವಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಸೋಶಿಯಲ್​ ಮೀಡಿಯಾದಲ್ಲಿ ನಟಿ ಸಂಯುಕ್ತಾ ಹೆಗಡೆ ಅವರು ಸಖತ್​ ಆಕ್ಟೀವ್​ ಆಗಾಗ ತಮ್ಮ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬಿಕಿನಿ ಧರಿಸಿ ಹಲವಾರು ಫೋಟೋಗಳನ್ನು ಶೇರ್‌ ಮಾಡಿದ್ದು,  ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. 

'ಎರಡನೇ ಸಲ', 'ದಯವಿಟ್ಟು ಗಮನಿಸಿ' ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರ ಗಮನ ಸೆಳೆದ ನಟಿ ಸಂಗೀತ ಭಟ್ ಅವರು ಕಳೆದ ವರ್ಷ ಬಿಕಿನಿಯಲ್ಲಿದ್ದ ಫೋಟೋ ಹಂಚಿಕೊಂಡಿದ್ದರು. ಬಾಲಿಗೆ ವೆಕೆಷನ್‌ಗೆ ಹೋಗಿದ್ದಾಗ ಗಂಡ ನಟ ಸುದರ್ಶನ ರಂಗಪ್ರಸಾದ್ ಈ ಫೋಟೋವನ್ನು ತೆಗೆದಿದ್ದರು. 

click me!