12 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಖರೀದಿಸಿದ ವಿವೇಕ್ ಒಬೆರಾಯ್, ಏನಿದೆ ಈ ಕಾರಲ್ಲಿ?

By Chethan Kumar  |  First Published Nov 24, 2024, 7:41 PM IST

ಬಾಲಿವುಡ್ ನಟ ವಿವೇಕ್ ಒಬೆರಾಯ್ ಬರೋಬ್ಬರಿ 12 ಕೋಟಿ ರೂಪಾಯಿ ನೀಡಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ಇದರ ಜೊತೆಗೆ ಮಹತ್ಪದ ಸಂದೇಶವನ್ನು ನಟ ಸಾರಿದ್ದಾರೆ. ಒಬೆರಾಯ್ ಖರೀದಿಸಿದ ಹೊಸ ರೋಲ್ಸ್ ರಾಯ್ಸ್ ಕಾರಿನಲ್ಲಿ ಏನಿದೆ?
 


ಮುಂಬೈ(ನ.24) ಬಾಲಿವುಡ್ ನಟ ನಟಿಯರು ಹೊಸ ಕಾರು ಖರೀದಿಸುವುದು ಹೊಸತೇನಲ್ಲ. ಹೊಸ ಚಿತ್ರದ ಒಪ್ಪಂದದ ಬಳಿಕ, ಚಿತ್ರದ ಯಶಸ್ಸಿನ ಬೆನ್ನಲ್ಲೇ ಹೊಸ ಕಾರುಗಳನ್ನು ಖರೀದಿಸುವುದು ಸಾಮಾನ್ಯ. ಇದೀಗ ಬಾಲಿವುಡ್ ನಟ ವಿವೇಕ್ ಒಬೆರಾಯ್ ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 12.25 ಕೋಟಿ ರೂಪಾಯಿ. ವಿವೇಕ್ ಒಬೆರಾಯ್ ತಂದೆ, ತಾಯಿ ಹಾಗೂ ಪತ್ನಿ ಜೊತೆ ಕಾರು ಸ್ವೀಕರಿಸಿದ್ದಾರೆ. ಬಳಿಕ ಹೊಸ ಕಾರಿನಲ್ಲಿ ರೌಂಡ್ ಹೊಡೆದಿದ್ದಾರೆ. ಅತೀ ದುಬಾರಿ ಮೊತ್ತದ ಕಾರು ಖರೀದಿಸಿದ ನಟ, ಯಶಸ್ಸಿನ ಕುರಿತಾದ ಒಂದು ಸಂದೇಶವನ್ನು ರವಾನಿಸಿದ್ದಾರೆ. 

ವಿವೇಕ್ ಒಬೆರಾಯ್ ಸಿಲ್ವರ್ ಗ್ರೇ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ಈ ಕಾರನ್ನು ವಿವೇಕ್ ಒಬೆರಾಯ್ ದುಬೈನಲ್ಲಿ ಖರೀದಿಸಿದ್ದಾರೆ. ದುಬೈನಲ್ಲಿ ವಿವೇಕ್ ಒಬೆರಾಯ್ ಮನೆಗೆ ರೋಲ್ಸ್ ರೋಯ್ಸ್ ಡೀಲರ್ ಕಾರು ಡೆಲಿವರಿ ಮಾಡಿದ್ದಾರೆ. ರೋಲ್ಸ್ ರಾಯ್ಸ್ ಕಲ್ಲಿನಾನ್ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲೊಂದು. ಮೊದಲಿಗೆ ಕಾರಿನ ಕೀಯನ್ನು ವಿವೇಕ್ ಒಬೆರಾಯ್ ತಂದೆಗೆ ನೀಡಿದ್ದಾರೆ. ವಿವೇಕ್ ಒಬೆರಾಯ್ ತಂದೆ ಮೊದಲು ಡ್ರೈವ್ ಮಾಡಿದ್ದಾರೆ. ಬಳಿಕ ಕಾರು ಪಡೆದ ವಿವೇಕ್ ಒಬೆರಾಯ್ ದುಬೈ ನಗರದಲ್ಲಿ ಒಂದು ರೌಂಡ್ ಹೊಡೆದಿದ್ದಾರೆ. ಪೋಷಕರು, ಪತ್ನಿ ಜೊತೆ ಸುತ್ತಾಡಿದ್ದಾರೆ.

Tap to resize

Latest Videos

undefined

ಪಡ್ಡೆ ಮಂದಿ ಕಣ್ಣಿಗೆ ಹಬ್ಬ, ಮಾರುತಿ ಜಿಮ್ನಿ ಖರೀದಿಸಿ ವಿಡಿಯೋ ಹರಿಬಿಟ್ಟ ನೀಲಿ ಚಿತ್ರ ತಾರೆ ಸಶಾ!

ಎಸ್‌ಯುವಿ ಹಾಗೂ ಕ್ರಾಸ್‌ಓವರ್‌ಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದಂತೆ ರೋಲ್ಸ್ ರಾಯ್ಸ್ 2018ರಲ್ಲಿ ಕಲ್ಲಿನನ್ ಕಾರು ಬಿಡುಗಡೆ ಮಾಡಿತ್ತು. ಅಷ್ಟೇ ವೇಗದಲ್ಲಿ ಕಲ್ಲಿನನ್ ಅತ್ಯಂತ ಜನಪ್ರಿಯ ಕಾರಾಗಿ ಹೊರಹೊಮ್ಮಿತು. ಸೆಲೆಬ್ರೆಟಿಗಳು, ಉದ್ಯಮಿಗಳ ನೆಚ್ಚಿನ ಕಾರಾಗಿ ಹೊರಹೊಮ್ಮಿತು. ಭಾರತದಲ್ಲಿ ಹಲವು ಸೆಲೆಬ್ರೆಟಿಗಳು , ಉದ್ಯಮಿಗಳು ರೋಲ್ಸ್ ರಾಯ್ಸ್ ಕಲ್ಲಿನನ್ ಖರೀದಿಸಿದ್ದಾರೆ. ಈ ಸಾಲಿಗೆ ವಿವೇಕ್ ಒಬೆರಾಯ್ ಕೂಡ ಸೇರಿಕೊಂಡಿದ್ದಾರೆ.

ವಿವೇಕ್ ಒಬೆರಾಯ ದುಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ದುಬೈನಲ್ಲಿ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಭಾಗಿತ್ವದಲ್ಲಿ ಹಲವು ಕಂಪನಿ ನಡೆಸುತ್ತಿದ್ದಾರೆ. ಈ ಪೈಕಿ ಫಿನ್ ಟೆಕ್ ಸೇರಿದಂತೆ ಕೆಲ ಭಾರಿ ಆದಾಯ ತಂದುಕೊಡುತ್ತಿರುವ ಕಂಪನಿಗಳು ಇವೆ. ಮುಂಬೈನಲ್ಲೂ ವಿವೇಕ್ ಒಬೆರಾಯ ಐಷಾರಾಮಿ ಮನೆ ಹೊಂದಿದ್ದಾರೆ. ಬ್ಯೂಸಿನೆಸ್ ಕಾರಣ ಒಬೆರಾಯ್ ಕೆಲ ಕಾಲ ಮುಂಬೈ ಹಾಗೂ ದುಬೈ ನಡುವೆ ಪ್ರಯಾಣ ಬೆಳೆಸುತ್ತಲೇ ಇರುತ್ತಾರೆ. ಮುಂಬೈನ ಜುಹುವಿನಲ್ಲಿ ವಿವೇಕ್ ಒಬೆರಾಯ ಐಷಾರಾಮಿ ಮನೆ ಹೊಂದಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Vivek Oberoi (@vivekoberoi)

 

ವಿವೇಕ್ ಒಬೆರಾಯ್ ಬಳಿ ಹಲವು ಐಷಾರಾಮಿ ಕಾರುಗಳಿವೆ. 3.11 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಗಲ್ಲಾರ್ಡೋ, 4.5 ಕೋಟಿ ರೂಪಾಯಿ ಬೆಲೆಯ ಕ್ರಿಸ್ಲರ್ 300ಸಿ ಲಿಮೊಸಿನ್ ಕಾರು, ಮರ್ಸಡೀಸ್ ಜಿಎಲ್‌ಎಸ್ ಹಾಗೂ ಜಿಎಲ್‌ಇ ಸೇರಿದಂತೆ ಇತರ ಕೆಲ ಕಾರುಗಳನ್ನು ಹೊಂದಿದ್ದಾರೆ. 

ಮೆಕ್ಲೆರೆನ್ ಒಕೆ ಮಗಾ ಎಂದ ಅಜ್ಜಿ, ಮರುದಿನ ₹12 ಕೋಟಿ ಕೊಟ್ಟು ಕಾರು ಮನೆಗೆ ತಂದ ಮೊಮ್ಮಗ!
 

click me!