ರೂಪಾ ರಾಯಪ್ಪ ಇವರ ಹೆಸರಿಗೂ ರೂಪಕ್ಕೂ ಮೀರಿ ಇವರ ಲುಕ್ ಆ್ಯಂಡ್ ಫೀಲ್ ಇರುತ್ತದೆ. ತೆರೆ ಮೇಲೆ ಸೀದಾ-ಸಾದಾ ಇದ್ರೂ ಕೂಡ ರಿಯಲ್ ಲೈಫ್‌ನ ನಿರೀಕ್ಷೆ ಮಾಡದೆ ಇರೋ ಮಟ್ಟಕ್ಕೆ ಹೊಳೆಯುತ್ತಲೇ ಇರುತ್ತಾರೆ.
ನಟಿ ರೂಪಾ ರಾಯಪ್ಪ ಇದೀಗ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೈ ಮೇಲೆ ಪ್ಲ್ಯಾಸ್ಟಿಕ್ ಚಿಟ್ಟೆ ಅಂಟಿಸಿಕೊಂಡು ಟಾಪ್‌ಲೆಸ್ ಆಗಿ ರೂಪಾ ಕಾಣಿಸಿಕೊಂಡಿದ್ದಾರೆ. ರೂಪಾ ಲುಕ್ ಅನ್ನು ಬಾಲಿವುಡ್ ಬೆಡಗಿ ಉರ್ಫಿಗೆ ಹೋಲಿಸಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ನಟಿಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಿನಿಮಾಗಳಲ್ಲಿ ಹೊಸ ಬಗೆಯ ಪಾತ್ರಗಳ ಮೂಲಕ ಪ್ರಯೋಗ ಮಾಡುವ ಹಾಗೆಯೇ ನಟಿ ಫೋಟೋಶೂಟ್‌ನಲ್ಲಿ ಹೊಸ ಪ್ರಯೋಗ ಮಾಡಿ ನಯಾ ಭಂಗಿಗಳಲ್ಲಿ ಪೋಸ್ ನೀಡುವ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.
ಸದ್ಯ ರೂಪಾ ರಾಯಪ್ಪ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಮೈ ಮೇಲೆ ಪ್ಲ್ಯಾಸ್ಟಿಕ್ ಚಿಟ್ಟೆ ಅಂಟಿಸಿಕೊಂಡು ನಟಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರೂಪಾ ನಯಾ ಲುಕ್ ನೋಡಿ ಪಡ್ಡೆಹುಡುಗರು ಇದೇನಿದು ಉರ್ಫಿ ಜಾವೇದ್ 2.0 ಕನ್ನಡ ವರ್ಷನ್ ಎಂದು ನಟಿಯ ಕಾಲೆಳೆದಿದ್ದಾರೆ.
ನಾಯಕಿ ಅಂದ್ಮೇಲೆ ಇದೆಲ್ಲಾ ಕಾಮನ್ ಎಂದು ನಟಿಯ ಬೆನ್ನು ತಟ್ಟಿದ್ದಾರೆ. ಇನ್ನೂ ಕೆಲವರು ನಟಿಯ ವಿಭಿನ್ನ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ. ಹಾಟ್ ಫೋಟೋಗಳ ಮೂಲಕವೇ ಹಲ್‌ಚಲ್ ಎಬ್ಬಿಸಿರುವ ರೂಪಾ, ಇತ್ತೀಚೆಗೆ ವಿವಿಧ ಭಂಗಿಗಳ ಬಿಕಿನಿ ಫೋಟೋ ಹಂಚಿಕೊಂಡು ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.
‘ದಿ ಜಡ್ಜ್‌ಮೆಂಟ್’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಕೆ ಜೊತೆ ‘ಕಾಡ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.