ಕಚ್ಚೆ ಸೀರೆ, ಮೂಗಿನಲ್ಲಿ ನತ್ತು… ಹುಬ್ಳಿ ಬೆಡಗಿಯಾದ ತನಿಷಾ ಕುಪ್ಪಂಡ ಅಂದಕ್ಕೆ ಮನಸೋತ ಫ್ಯಾನ್ಸ್!

First Published | Nov 18, 2024, 9:43 PM IST

ಬಿಗ್ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಹುಬ್ಳಿ ಶೈಲಿಯಲ್ಲಿ ಸೀರೆಯುಟ್ಟು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ನಟಿಯ ಫೋಟೊವನ್ನು ಇಷ್ಟಪಟ್ಟಿದ್ದಾರೆ. 
 

ಬಿಗ್ ಬಾಸ್ ಸೀಸನ್ 10 (Bigg Boss Seaon 10) ರಲ್ಲಿ ಮಿಂಚಿದ ಬೆಡಗಿ ತನಿಷಾ ಕುಪ್ಪಂಡ. ಈಕೆ ಬಿಗ್ ಬಾಸ್ ನಲ್ಲಿ ಬೆಂಕಿ ಅಂತಾನೆ ಫೇಮಸ್. ಬಿಗ್ ಬಾಸ್ ನಿಂದ ಹೊರಬಂದ ಮೇಲೆ ತನಿಷಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
 

ಬಿಗ್ ಬಾಸ್ ನಿಂದ ಹೊರಬಂದ ಮೇಲೆ ತಮ್ಮದೇ ಆದ ಕುಪ್ಪಂಡಾಸ್ ಜ್ಯುವೆಲರಿ ಮಳಿಗೆಗಳನ್ನು ಸ್ಥಾಪಿಸಿ, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಅಷ್ಟೇ ಅಲ್ಲ ತಮ್ಮದೇ ಆದ ಅಪ್ಪುಸ್ ಕಿಚನ್ ಎನ್ನುವ ಹೋಟೆಲ್ ಕೂಡ ನಡೆಸುತ್ತಿದ್ದಾರೆ. 
 

Tap to resize

ಬಿಗ್ ಬಾಸ್ ನಲ್ಲಿ ತನಿಷಾ (Tanisha Kuppanda) ಜೊತೆ ಹೆಚ್ಚಾಗಿ ಕೇಳಿ ಬಂದ ಹೆಸರು ಅಂದ್ರೆ ಅದು ವರ್ತೂರು ಸಂತೋಷ್. ಮನೆಯಿಂದ ಹೊರ ಬಂದ ಮೇಲೂ ಇಂದಿನವರೆಗೂ ಇಬ್ಬರು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವುದರಿಂದ ಈ ಜೋಡಿ ಬೇಗನೆ ಮದುವೆಯಾಗುತ್ತೆ ಎನ್ನುವ ಸುದ್ದಿಯು ಕೂಡ ಹರಡುತ್ತಿದೆ. 
 

ಸದ್ಯ ಸಕ್ಸಸ್ ಫುಲ್ ಮಹಿಳಾ ಉದ್ಯಮಿಯಾಗಿರುವ (businness women) ತನಿಷಾ ಇತ್ತೀಚೆಗಷ್ಟೇ ಬರೋಬ್ಬರಿ ಒಂದು ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಸ್ಕವರಿ ಕಾರನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದರು. 
 

ದಂಡುಪಾಳ್ಯ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ತನಿಷಾ ನಂತರ ಬಾಡಿಗಾರ್ಡ್, ಉಂಡೆ ನಾಮ, ಪೆಂಟಗನ್, ಪೆನ್ ಡ್ರೈವ್ ಮೊದಲಾದ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ಮಂಗಳ ಗೌರಿ ಮದುವೆ, ಇಂತಿ ನಿಮ್ಮ ಆಶಾ, ಸತ್ಯಂ ಶಿವಂ ಸುಂದರಂ, ವಾರಸುದಾರ, ಪ್ರೀತಿಯಿಂದಲೇ ಮೊದಲಾದ ಧಾರವಾಹಿಗಳಲ್ಲೂ ನಟಿಸಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ತನಿಷಾ ಕುಪ್ಪಂಡ ಇದೀಗ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹುಬ್ಬಳ್ಳಿ ಸ್ಟೈಲಿಯಲ್ಲಿ ಧೋತಿ ಸೀರೆಯುಟ್ಟು ಕೈ ತುಂಬಾ ಬಳೆ, ಕಾಲಿಗೆ ಗೆಜ್ಜೆ, ಕುತ್ತಿಗೆಯಲ್ಲಿ ಉದ್ದನೆಯ ಹಾರ, ಕಿವಿಯಲ್ಲಿ ಜುಮುಕಿ, ತಲೆ ತುಂಬ ಮಲ್ಲಿಗೆ, ಮೂಗಿನಲ್ಲಿ ನತ್ತು ಮುಂದಾಲೆ ಧರಿಸಿ ತುಂಬಾನೇ ಮುದ್ದಾಗಿ ಕಾಣಿಸುತ್ತಿದ್ದಾರೆ
 

ಹಸಿರು ಮತ್ತು ಗುಲಾಬಿ ಬಣ್ಣದ ಸೀರೆಯುಟ್ಟು ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿರುವ ತನಿಷಾರ ಈ ಫೋಟೋ ಸೀರೀಸ್ ಗಳನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ ತರಹೇವಾರಿ ಕಾಮೆಂಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟಿಯನ್ನು ಹೊಗಳಿದ್ದಾರೆ. 
 

ಬೆಂಕಿ ತುಂಬಾನೇ ಬ್ಯೂಟಿ, ಹಳ್ಳಿಯ ಸಂಸ್ಕೃತಿಯ ಉಡುಗೆಯಲ್ಲಿ ಬೆಂಕಿ ತನಿಷಾ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ವರ್ತೂರ್ ಜೊತೆ ಒಂದು ಫೋಟೋ ಅಪ್ಲೋಡ್ ಮಾಡಿ ಬೆಂಕಿ ಪ್ಲೀಸ್ ಅಂತಾನೂ ಕೇಳಿದ್ದಾರೆ. ಜೊತೆಗೆ ದೇವತೆ, ಕ್ವೀನ್, ಬ್ಯೂಟಿ ಕ್ವೀನ್, ಸುಂದರಿ ತುಂಬಾನೇ ಮುದ್ದಾಗಿ ಕಾಣಿಸುತ್ತಿದ್ದೀರಿ ದೇವತೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ
 

Latest Videos

click me!