ಸತ್ಯ ತಿಳಿಯದೇ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದ್ವೆ ಮಾಡಿದ ತಾಯಿ: ಕೊನೆಗೆ ನಡೆದದ್ದೇ ರೋಚಕ...

By Suchethana D  |  First Published Nov 18, 2024, 9:55 PM IST

ಮಗನನ್ನು ಮದ್ವೆಯಾಗ್ತಿರೋ ಹುಡುಗಿ ತನ್ನ ಹೆತ್ತ ಮಗಳೇ ಎನ್ನುವ ಸತ್ಯ ಅರಿಯದೇ ಮದ್ವೆಗೆ ಮುಂದಾಗಿದ್ದ ತಾಯಿಯ ವಿಚಿತ್ರ, ಕುತೂಹಲದ ಕಥೆ ಇಲ್ಲಿದೆ... 
 


ತನ್ನ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ತಾಯಿಯೇ ಮದುವೆ ಮಾಡುತ್ತಾಳೆ ಎಂದರೆ ನಂಬುವಿರಾ? ಇಂಥ ತಾಯಿ ಇರಲು ಸಾಧ್ಯವೇ ಇಲ್ಲ ಎನ್ನುವುದು ಎಲ್ಲರ ಮಾತೇ. ಅದೇನೇ ಕಷ್ಟದ ಸ್ಥಿತಿ ಬಂದರೂ ಇಂಥ ಕೆಟ್ಟ ವಿಚಾರ ತಾಯಿಯಾದವಳು ಒಬ್ಬಳು ಮಾಡಲು ಸಾಧ್ಯವೇ ಇಲ್ಲ. ಆದ್ರೆ, ಇಲ್ಲೊಂದು ವಿಚಿತ್ರ, ಕುತೂಹಲದ ಘಟನೆಯಲ್ಲಿ ಇಂಥದ್ದೊಂದು ಪ್ರಸಂಗ ನಡೆದೇ ಹೋಗಿದೆ. ತಾಯಿಯೊಬ್ಬಳು ತನ್ನ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ್ದಾಳೆ. ಆದರೆ ಕುತೂಹಲದ ವಿಷಯ ಏನೆಂದ್ರೆ, ಅವಳಿಗೆ ತನ್ನ ಸೊಸೆಯಾಗಿ ಬರುವವಳು ತನ್ನ ಹೆತ್ತ ಮಗಳೇ ಎನ್ನುವ ವಿಷಯವೇ ತಿಳಿದಿರಲಿಲ್ಲ. ಎಲ್ಲವೂ ವಿಚಿತ್ರ ಎನಿಸುತ್ತದೆ ಅಲ್ಲವೆ?

ಇದು ನಡೆದಿರುವುದು ಚೀನಾದಲ್ಲಿ. ಅಸಲಿಗೆ ಆಗಿದ್ದು ಏನೆಂದರೆ,  ಚೀನಾದ ಜಿಯಾಂಗ್ಸುನಲ್ಲಿ ಮಗನಿಗಾಗಿ ಈ ತಾಯಿ ಹುಡುಗಿ ಹುಡುಕಿದ್ದಾಳೆ. ನಂತರ ಒಳ್ಳೆಯ ಹುಡುಗಿ ಸಿಕ್ಕಳು ಎಂದು ಮದುವೆಗೂ ಸಿದ್ಧ ಮಾಡಿದ್ದಾಳೆ. ಕೊನೆಗೆ, ಆ ಯುವತಿಯ  ಎಡಗೈಯಲ್ಲಿ ಮಚ್ಚೆ ಇರುವುದನ್ನು ನೋಡಿದ ಈ ಅಮ್ಮನಿಗೆ ಡೌಟ್ ಶುರುವಾಗಿದೆ. ಏಕೆಂದ್ರೆ ಆ ಮಚ್ಚೆ ಥೇಟ್​ ತನ್ನ ಮಗಳ ಕೈಯಲ್ಲಿ ಇರುವಂತೆಯೇ ಇತ್ತು. ಅಷ್ಟಕ್ಕೂ ಈ ಯುವತಿ 20 ವರ್ಷಗಳ ಹಿಂದೆ ಕಾಣೆಯಾಗಿದ್ದಳು! ವಿಚಿತ್ರ ಎಂದರೆ, ಅದೇ ಯುವತಿಯನ್ನು ಈ ಅಮ್ಮ ಸೊಸೆಯಾಗಿ ಸ್ವೀಕರಿಸಲು ರೆಡಿಯಾಗಿದ್ದಳು. ಮಚ್ಚೆ ನೋಡಿದ ಮೇಲೆ ಡೌಟ್​ ಬಂದ ಮಹಿಳೆ, ಈಕೆ ಬಗ್ಗೆ ತಿಳಿದುಕೊಳ್ಳಲು ಅವರ ಅಪ್ಪ-ಅಮ್ಮನನ್ನು ವಿಚಾರಿಸಿದ್ದಾಳೆ.

Tap to resize

Latest Videos

undefined

ಕುಡಿದು ಡ್ರೈವ್​ ಮಾಡ್ತಿದ್ರೆ ಇನ್ಮುಂದೆ ಸಿಕ್ಕಾಕ್ಕೊಳೋದು ಪಕ್ಕಾ! ಪೊಲೀಸರಿಂದ 'ಚಾಕ್​ ಪೀಸ್​' ಟ್ರಿಕ್ಸ್​...

ಬಳಿಕ, ಅವಳ ಸಂದೇಹ ನಿಜವಾಗಿದೆ. ಈ ಯುವತಿಯನ್ನು ಅವರು ದತ್ತು ಪಡೆದುಕೊಂಡಿದ್ದರು. ಚಿಕ್ಕ ಮಗು ರಸ್ತೆಬದಿಯಲ್ಲಿ ಬಿದ್ದು ಕೊಂಡಿತ್ತು.  ಆ ಮಗುವನ್ನು ತಮ್ಮ ಮಗಳಾಗಿ ದತ್ತು ಪಡೆದುಕೊಂಡು ಸಾಕುತ್ತಿರುವುದಾಗಿ ಅವರು ಹೇಳಿದರು. ಈ ಬಗ್ಗೆ ವಿಚಾರ ನಡೆಸಿದಾಗ, ಅವಳು ತಾನೇ ಹೆತ್ತ ಮಗಳು ಎಂದು ತಾಯಿಗೆ ತಿಳಿದಿದೆ. ಆದರೆ ಏನು ಮಾಡುವುದು? ಸೊಸೆಯಾಗಿ ಸ್ವೀಕರಿಸಲು ಸಿದ್ಧಳಾಗಿಬಿಟ್ಟಿದ್ದಳು. ಹುಡುಗ ಕೂಡ ಹುಡುಗಿಯನ್ನು ಇಷ್ಟಪಟ್ಟಿದ್ದ. ಆಕೆಯನ್ನೇ ಮದುವೆಯಾಗುವುದಾಗಿಯೂ ಪಣ ತೊಟ್ಟಿದ್ದ. ಇದೇ ಕಾರಣಕ್ಕೆ ಇಬ್ಬರ ಮದುವೆ ಮಾಡಿದ್ದಾಳೆ ಈ ಅಮ್ಮ.
 
ಮದುವೆ ಮಾಡಲು ಇನ್ನೊಂದು ಕಾರಣವೂ ಇದೆ. ಹಾಗೆ ಸಂಬಂಧದಲ್ಲಿ ನೋಡುವುದಾದರೆ ಇವರಿಬ್ಬರೂ ಅಣ್ಣ-ತಂಗಿಯಾಗಬೇಕು. ಆದರೆ ವಿಶೇಷ ಏನೆಂದರೆ, ಮದುವೆಯಾಗ ಹೊರಟಿದ್ದ ಯುವಕ ಈ ಅಮ್ಮ ಹೆತ್ತ ಮಗನಲ್ಲ. ಮಗಳು ಕಳೆದು ಹೋದ ಬಳಿಕ ಅವನನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಆದ್ದರಿಂದ  ಮದುವೆಯನ್ನು ನೆರವೇರಿಸಲಾಗಿದೆ.  20 ವರ್ಷಗಳ ಹಿಂದೆ ತನ್ನ ಮಗಳು ಕಾಣೆಯಾದ ನಂತರ ತೀವ್ರ ಹುಡುಕಾಟದ ನಂತರ, ಮಹಿಳೆ ಗಂಡು ಮಗುವನ್ನು ದತ್ತು ಪಡೆದಿದ್ದಳು. ಈಗ ಆ ಗಂಡು ಮಗುವೇ ತನ್ನ ನಿಜವಾದ ಮಗಳನ್ನು ಮದುವೆಯಾಗಲು ಹೊರಟಿದ್ದ ತನ್ನದೇ ದತ್ತು ಪುತ್ರನಾಗಿದ್ದನು. ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇಂಥ ತಿರುವುಗಳು ಸಿನಿಮಾದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.  

ಗೋದಾವರಿ ನದಿಯಲ್ಲಿ ಹಾರುತ್ತಿದ್ದವನ ಸಿನಿಮೀಯ ರೀತಿ ರಕ್ಷಿಸಿದ ಪತ್ರಕರ್ತರು: ಶಾಕಿಂಗ್​ ವಿಡಿಯೋ ವೈರಲ್​

click me!