ಗಾಯಕಿಯಾಗಿ, ನಾಯಕಿಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಮಿಂಚುತ್ತಿರುವ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ (Chaitra J Achar). ಈ ನಟಿ ಹೆಚ್ಚಾಗಿ ತಮ್ಮ ಬೋಲ್ಡ್ ಲುಕ್, ಫೋಟೋ ಶೂಟಿನಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿಯೂ ತಮ್ಮ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ.
ಯಾವ ಪಾತ್ರಕ್ಕೂ ಜೀವ ತುಂಬುವಂತಹ ಅದ್ಭುತ ನಟಿ ಚೈತ್ರಾ ಆಚಾರ್. ಟೋಬಿ ಚಿತ್ರದಲ್ಲಿ ಜೆನ್ನಿಯಾಗಿ, ಸಪ್ತಸಾಗರದಾಚೆ ಸಿನಿಮಾದಲ್ಲಿ ಮನುವನ್ನು ಪ್ರೇಮಿಸುವ ಪ್ರೇಮಿ, ವೇಶ್ಯೆ ಸುರಭಿಯಾಗಿ ಚೈತ್ರಾ ಆಚಾರ್ ತಮ್ಮ ಅಭಿನಯದ ಮೂಲಕವೇ ಮೋಡಿ ಮಾಡಿದವರು.
ಗಾಯಕಿ, ನಟಿ, ಡ್ಯಾನ್ಸರ್ ಆಗಿ ಸೈ ಎನಿಸಿಕೊಂಡಿರುವ ಚೈತ್ರಾ, ಸ್ಯಂಡಲ್‌ವುಡ್‌ನ ಬೋಲ್ಡ್ ಸುಂದರಿ ಅಂದ್ರೆ ತಪ್ಪಲ್ಲ. ಅದಕ್ಕೆ ಕಾರಣ ಇವರ ಫೋಟೋ ಶೂಟ್, ಹೆಚ್ಚಾಗಿ ಸೋಶಿಯಲ್ ಮಿಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಚೈತ್ರಾ ಪ್ರತಿದಿನ ಹೊಸ ಫೋಟೋ ಶೂಟ್ ಇಂಟರ್ನೇಟ್ ನಲ್ಲಿ ಕಿಚ್ಚು ಹೆಚ್ಚಿಸುತ್ತಿರುತ್ತಾರೆ.
ಕೇವಲ ಮಾಡರ್ನ್ ಡ್ರೆಸ್ ನಲ್ಲಿ ಮಾತ್ರವಲ್ಲ, ಸೀರೆಯಲ್ಲೂ ಸಹ ಸಖತ್ ಬೋಲ್ಡ್ ಆಗಿ ಕಾಣಿಸುವ ಚೈತ್ರಾ ಆಚಾರ್, ಈ ಬಾರಿ ತಿಳಿ ಬಣ್ಣದ ಸೀರೆ ಅದಕ್ಕೊಪ್ಪುವ ಬ್ರೌನ್ ಬಣ್ಣದ ಡೀಪ್ ನೆಕ್ ಬ್ಲೌಸ್ ಧರಿಸಿರುವ ಚೈತ್ರಾ, ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕೈತುಂಬಾ ಮೆಟಲ್ ಬಳೆ ಧರಿಸಿ, ಹಣೆ ಮೇಲೆ ಕಪ್ಪು ಬೊಟ್ಟು ತೊಟ್ಟು, ತಮ್ಮ ಸ್ಮೋಕಿ ಕಣ್ಣುಗಳ ಮೂಲಕ ಮಾದಕ ನೋಟ ಬೀರಿದ್ದಾರೆ. ಅಲ್ಲಲ್ಲಿ ತಮ್ಮ ಸೀರೆ ಸೆರಗು ಕೊಂಚ ಸರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ತಮ್ಮ ಬೋಲ್ಡ್ ನೆಸ್ ಅನ್ನು ಈ ಮೂಲಕ ತೋರಿಸಿದ್ದಾರೆ.
ಹೆಚ್ಚಾಗಿ ತಮ್ಮ ಫೋಟೋಗಳಿಗೆ ಬರುವ ಕೆಟ್ಟ ಕಾಮೆಂಟ್ ಗಳಿಂದ ಕೋಪಗೊಂಡಿರುವ ಚೈತ್ರಾ, ತಮ್ಮ ಕಾಮೆಂಟ್ ಸೆಕ್ಷನ್ ಅನ್ನು ಕೆಲವು ವ್ಯಕ್ತಿಗಳಿಗೆ ಮಾತ್ರ ಕಾಮೆಂಟ್ ಮಾಡುವಂತೆ ಸೀಮಿತಗೊಳಿಸಿದ್ದಾರೆ. ಆ ಮೂಲಕ ನೆಗೆಟಿವಿಟಿ ಹರಡೋದಕ್ಕೆ ತಾವೇ ಕಡಿವಾಣ ಹಾಕಿದ್ದಾರೆ.
ಹೊಸ ವಿಷ್ಯ ಏನಪ್ಪಾ ಅಂದ್ರೆ ಚೈತ್ರಾ ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಉತ್ತರಕಾಂಡ (Uttarakhanda) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರು ಈ ಚಿತ್ರದಲ್ಲಿ ಲಚ್ಚಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರ ಹೇಗಿರಬಹುದು ಎನ್ನುವ ಕುತೂಹಲ ಇದೀಗ ಹೆಚ್ಚಾಗಿದೆ.