ಸ್ಟೈಲಿಶ್ ಆಗಿ ರೋಡ್‌ನಲ್ಲಿ ಪೋಸ್ ಕೊಟ್ಟ ಮಾಲಾಶ್ರೀ ಮಗಳು: ಹರಿದ ಜೀನ್ಸ್‌ಗಿಂತ ಟ್ರೆಡಿಷನಲ್ ಡ್ರೆಸ್‌ ಬೆಸ್ಟ್ ಎಂದ ಫ್ಯಾನ್ಸ್‌

First Published Apr 8, 2024, 9:34 AM IST

ಕಾಟೇರ ಸಿನಿಮಾ ಮೂಲಕ ಚಂದನವನಕ್ಕೆ ಬಂದ ಆರಾಧನಾ ರಾಮ್, ಸೋಷಿಯಲ್‌ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಒಂದಲ್ಲ ಒಂದು ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ. ಈಗ ಹೊಸ ಕೊಂಚ ಬೋಲ್ಡ್‌ ಎನಿಸುವ ಲುಕ್‌ನಲ್ಲಿ ಎದುರಾಗಿದ್ದಾರೆ.

ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್‌, ‌ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ದೊಡ್ಡ ಬ್ಯಾನರ್‌, ಸ್ಟಾರ್‌ ನಟ, ಟಾಪ್‌ ನಿರ್ದೇಶಕರ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ಆರಾಧನಾ ರಾಮ್​, ಇದೀಗ ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹರಿದ ಜೀನ್ಸ್ ತೊಟ್ಟು ರಸ್ತೆಯಲ್ಲಿ ಆರಾಧನಾ ಫೋಟೋಗೆ ಪೋಸ್​ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರಾಧನಾ ಫೋಟೋಸ್‌ಗೆ ನೆಟ್ಟಿಗರಿಂದ ಫ್ಯಾನ್ಸ್​ ಲೈಕ್​ಗಳ ಸುರಿಮಳೆಗೈದಿದ್ದು, ಅವರ​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಬ್ಬಬ್ಬಾ ಆರಾಧನಾ ಹಾಟ್ ಬ್ಯೂಟಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ತರದ ಉಡುಗೆ ಬೇಡ ಎಂದೂ ಕಾಮೆಂಟ್‌ ಮಾಡಿದ್ದಾರೆ. 

ಆರಾಧನಾ ರಾಮ್ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕಾಟೇರ ಅದ್ಭುತ ಯಶಸ್ಸು ಕಂಡರೂ, ನಾಯಕಿಯ ಮತ್ತೊಂದು ಸಿನಿಮಾ ಘೋಷಣೆ ಆಗದೇ ಇರುವುದಕ್ಕೆ ಹಲವಾರು ಚರ್ಚೆಗಳು ಕೂಡ ನಡೆದಿವೆ. 

ನಟಿ ಆರಾಧನಾ ರಾಮ್‌ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಆಹಾರದ ವಿಚಾರದಲ್ಲಿ ತಮ್ಮ ಅಭಿಮಾನಿಗಳಿಗೆ ಹೆಚ್ಚು ಮನೆ ಊಟವನ್ನೆ ಮಾಡಿ ಅಂತಲೇ ಹೇಳುತ್ತಾರೆ.

ಜೂನಿಯರ್‌ ಕನಸಿನ ರಾಣಿ ಆರಾಧನಾ ರಾಮ್‌ ನಾನ್ ವೆಜಿಟೇರಿಯನ್ ಆಗಿದ್ದರೂ, ಸದ್ಯ ವೆಜಿಟೇರಿಯನ್ ಊಟವನ್ನೇ ಸೇವಿಸುತ್ತಾರೆ. ಅಪರೂಪಕ್ಕೆ ಈ ನಟಿ ನಾನ್ ವೆಜ್ ಊಟ ಮಾಡುತ್ತಾರೆ.

ಕಾಟೇರ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಟೆಂಪಲ್ ರನ್ ಮಾಡಿದ್ದ ಆರಾಧನಾ, ಆನಂತರ ಸೀರಿಯಸ್ ಆಗಿ ಹಲವು ಕಥೆಗಳನ್ನು ಕೇಳಿದ್ದಾರಂತೆ. ಜೊತೆಗೆ ಮತ್ತಷ್ಟು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.

click me!