ಸೆಕ್ಸ್ ಲೈಫ್ ಸೂಪರ್ ಆಗಿರಬೇಕೆಂದರೆ ಈ ವಿಷಯಗಳನ್ನು ನೆನಪಲ್ಲಿಟ್ಟುಕೊಂಡರೆ ಒಳಿತು!

First Published Mar 30, 2021, 5:35 PM IST

ಹಿಂದೆಲ್ಲಾ ಮಿಲನಕ್ರಿಯೆ ಎಂದ ಕೂಡಲೇ ಅದರ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದರು. ಆದರೆ ಇದು ಪತಿ ಪತ್ನಿಯ ಜೀವನದ ಪ್ರಮುಖ ಅಂಶವಾಗಿದೆ. ಮತ್ತು ಇದರ ಬಗ್ಗೆ ಮಾತನಾಡುವ ಅಗತ್ಯವೂ ಇದೆ. ಲೈಂಗಿಕ ಕ್ರಿಯೆ ಎಂಬ ಮಧುರ ಅನುಭೂತಿಯಲ್ಲಿ ಪತಿ - ಪತ್ನಿ ಎಲ್ಲವನ್ನೂ ಮರೆತು ಒಬ್ಬರಲ್ಲೊಬ್ಬರು ಬೆರೆತು ಹೋಗುತ್ತಾರೆ. ಆದರೆ ಅದಕ್ಕೆ ಮುನ್ನ ಪತಿ ಪತ್ನಿ ಕೆಲ ಅಂಶಗಳತ್ತ ಗಮನಹರಿಸಬೇಕು. ಇಲ್ಲವಾದರೆ ಆ ಕ್ಷಣವನ್ನು ಸಂಪೂರ್ಣವಾಗಿ ಎಂಜಾಯ್‌ ಮಾಡಲು ಸಾಧ್ಯವಾಗೋದಿಲ್ಲ.  

ಕಂಫರ್ಟ್‌ ಆಗಿರಿ : ಲೈಂಗಿಕ ಕ್ರಿಯೆ ನಡೆಸುವ ವೇಳೆ ನೀವು ಕಂಫರ್ಟ್ ಆಗಿರಿ. ಒತ್ತಡಗಳಿಂದ ಮುಕ್ತರಾಗಿರಿ. ತಲೆಯಲ್ಲಿ ಬೇರೆ ವಿಷಯಗಳನ್ನು ತುಂಬಿಕೊಂಡು ಸಂಗಾತಿಯತ್ತ ಹೋಗಬೇಡಿ.ಇದರಿಂದ ಆ ಕ್ಷಣದ ಸಂತಸ ನಿಮಗೆ ದೊರೆಯಲು ಸಾಧ್ಯವಿಲ್ಲ. ಸೆಕ್ಸ್‌ ವರ್ಕ್‌ ಔಟ್‌ ಆಗಲು ನೀವು ಹಾಟ್‌ ಸ್ಪಾಟ್‌ಗಳನ್ನು ಗುರುತಿಸಿಎಂಜಾಯ್‌ ಮಾಡಿ.
undefined
ಫೋರ್ ಪ್ಲೆ : ಮಿಲನಕ್ಕೂ ಮುನ್ನ ಫೋರ್ ಪ್ಲೆ ತುಂಬಾನೇ ಮುಖ್ಯ, ಫೋರ್ ಪ್ಲೆ ಚೆನ್ನಾಗಿ ಆದರೆ ಮಾತ್ರ ಮಿಲನದ ನಿಜವಾದ ಸುಖ ಅನುಭವಿಸಲು ಸಾಧ್ಯವಾಗುತ್ತದೆ. ಆದುದರಿಂದ ಫೋರ್ ಪ್ಲೇಗೆ ಆದ್ಯತೆ ನೀಡಿ.
undefined
ದೇಹದಲ್ಲಾಗುವ ವೈಬ್ರೇಶನ್‌ಗಳನ್ನು ಫೀಲ್‌ ಮಾಡಿ: ಮಿಲನದ ಸಂದರ್ಭ ದೇಹದಲ್ಲಾಗುವ ಪ್ರತಿಯೊಂದು ಬದಲಾವಣೆಗಳನ್ನು ಫೀಲ್‌ ಮಾಡಿಕೊಳ್ಳಿ. ಸಂಗಾತಿಗೆ ಆತನ ಅಥವಾ ಆಕೆಯ ಎಲ್ಲಾ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವಂತೆ ನೋಡಿಕೊಳ್ಳಿ.
undefined
ಕಲ್ಪನಾ ಲೋಕದಲ್ಲಿ ವಿಹರಿಸಿ: ದೈಹಿಕ ಸಂಪರ್ಕ ಹೊಂದುವ ಸಮಯದಲ್ಲಿ ನಿಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿ. ಇದರಿಂದ ಬೆಸ್ಟ್ ಸೆಕ್ಸ್‌ ನಿಮ್ಮದಾಗುತ್ತದೆ. ಹಾಗೂ ಎಲ್ಲಾ ಆಲೋಚನೆಗಳಿಂದ ಮನಸ್ಸನ್ನು ದೂರಗೊಳಿಸಿ, ಇದರಿಂದ ಸಂಗಾತಿ ಜೊತೆ ಮಧುರ ಸಮಯ ಕಳೆಯಲು ನೆರವಾಗುತ್ತದೆ.
undefined
ಅಡೆತಡೆಗಳನ್ನು ನಿವಾರಿಸಿ : ಮಿಲನದ ನಡುವೆ ಉಂಟಾಗುವ ಅಥವಾ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿ. ಟಿವಿ ವೀಕ್ಷಿಸುವುದು, ಮೊಬೈಲ್‌ ಚೆಕ್‌ ಮಾಡೋದು, ಮೆಸೇಜ್‌ ಓದೋದು ಯಾವುದು ಬೇಡ ಬದಲಾಗಿ ಸಂಪೂರ್ಣ ಸಮಯ ಸಂಗಾತಿಗೆ ಮೀಸಲಿಡಿ.
undefined
ಫಲಿತಾಂಶದ ಬಗ್ಗೆ ಯೋಚನೆ ಬೇಡ : ಈ ಸೆಕ್ಸ್‌ನಿಂದ ಸಂಗಾತಿಗೆ ಸಂಪೂರ್ಣ ಸಂತೋಷ ಸಿಕ್ಕಿದೆಯೇ. ಅವನಿಗೆ ಇನ್ನೂ ಏನು ಬೇಕಾಗಿರಬಹುದು. ಸೆಕ್ಸ್‌ ಉತ್ತಮವಾಗಿ ಕೊನೆಗೊಳ್ಳುವುದೇ ಎಂಬುದನ್ನು ಯೋಚನೆ ಮಾಡೋದನ್ನು ಬಿಟ್ಟು ಬಿಡಿ. ಬದಲಾಗಿ ವರ್ತಮಾನಕ್ಕೆ ಹೆಚ್ಚಿನ ಒತ್ತು ಕೊಡಿ.
undefined
ಈ ಬಗ್ಗೆ ಚರ್ಚಿಸಿ : ಸೆಕ್ಸ್‌ ಎಂಬ ಪದವನ್ನು ಹೇಳುವುದು ಹಿಂದೆ ಅಪಚಾರವಾಗಿತ್ತು. ಆದರೆ ಇಂದು ಹಾಗಿಲ್ಲ. ಆದುದರಿಂದ ಸಂಗಾತಿ ಜೊತೆ ಸೆಕ್ಸ್‌ ಬಗ್ಗೆ ಮನ ಬಿಚ್ಚಿ ಮಾತನಾಡಿ. ಇದರಿಂದ ಆ ಸಮಯದಲ್ಲಿ ಇಬ್ಬರಿಗೂ ಹೆಚ್ಚು ಕಂಫರ್ಟೇಬಲ್‌ ಆಗಿರುತ್ತದೆ.
undefined
ನಾಟಿ ಟಾಕ್ : ಮಿಲನ ಕ್ರಿಯೆ ಉತ್ತಮವಾಗಿರಲು ಸ್ವಲ್ಪ ನಾಟಿ ಟಾಕ್ ಸಹ ಮುಖ್ಯವಾಗಿದೆ. ಇದರಿಂದ ಮಿಲನಕ್ರಿಯೆ ಸ್ಪೈಸಿ ಆಗಲು ಸಾಧ್ಯವಾಗುತ್ತದೆ.
undefined
click me!