'ಗಜಕೇಸರಿ ಅಥವಾ ಮಾಸ್ಟರ್ ಪೀಸ್' ಎಂಬ ಪ್ರಶ್ನೆಗೆ ಯಶ್ ಅವರು ಆ ಪ್ರಶ್ನೆ ಬಗ್ಗೆಯೇ ಸ್ವಲ್ಪ ಬೇಸರಿಸಿಕೊಂಡು, 'ನಾನು ಆ ಎರಡೂ ಚಿತ್ರಕ್ಕೂ ಈಕ್ವಲ್ ಎಫರ್ಟ್ ಹಾಕಿದೀನಿ...
ನಟಿ ರಾಧಿಕಾ ಪಂಡಿತ್ (Radhika Pandit) ಬಗ್ಗೆ ನಟ ಯಶ್ (Yash) ಏನು ಹೇಳಿದ್ದಾರೆ? ಇದೇನಿದು ಹೀಗೆ ಅಚ್ಚರಿ ಪ್ರಶ್ನೆ ಕೇಳ್ತಿದೀರಾ? ರಾಧಿಕಾ ಪಂಡಿತ್ ಯಶ್ ಪತ್ನಿ, ಇಬ್ಬರು ಮುದ್ದಾದ ಮಕ್ಕಳು ಇದಾರೆ. ಈಗ ಯಶ್ ತಮ್ಮ ಹೆಂಡತಿ ಬಗ್ಗೆ ಏನ್ ಹೇಳ್ತಾರೆ ಅನ್ನೋ ಪ್ರಶ್ನೆನೇ ವಿಚಿತ್ರವಾಗಿದೆ ಅನ್ಬೇಡಿ.. ಆದರೆ, ನಟ ಯಶ್ ತಮ್ಮ ಹೆಂಡತಿ ರಾಧಿಕಾ ಪಂಡಿತ್ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತು ಸದ್ಯ ಸಖತ್ ವೈರಲ್ ಆಗಿದೆ. ಹಾಗಿದ್ರೆ, ರಾಕಿಂಗ್ ಸ್ಟಾರ್ ಯಶ್ ತಮ್ಮ ಹೆಂಡತಿ ಬಗ್ಗೆ ಏನು ಹೇಳಿದ್ದಾರೆ ನೋಡಿ..
ಹೌದು, ಸಂದರ್ಶಕರು ನಟ ಯಶ್ ಅವರಿಗೆ ಎರಡು ಆಯ್ಕೆಗಳನ್ನು ಕೊಟ್ಟು ಒಂದನ್ನು ಆಯ್ಕೆ ಮಾಡುವಂತೆ ಹೇಳಿದ್ದಾರೆ. ಅದಕ್ಕೆ ಯಶ್ ಒಪ್ಪಿದಾಗ ಸಂದರ್ಶಕರು ತಮ್ಮ ಮಾತು ಮುಂದುವರೆಸಿದ್ದಾರೆ. ಸಂದರ್ಶಕರು 'ಶ್ರೀನಿಧಿ ಶೆಟ್ಟಿ ಹಾಗೂ ರಾಧಿಕಾ ಪಂಡಿತ್' ಎನ್ನಲು ಯಶ್ ಅವರು 'ಆಫ್‌ಕೋರ್ಸ್ ರಾಧಿಕಾ ಪಂಡಿತ್' ಎಂದಿರುವ ಯಶ್, ಮುಂದುವರೆದು 'ರಾಧಿಕಾ ಪಂಡಿತ್ ನನ್ನ ಹೆಂಡ್ತಿ, ನನ್ನ ಸಹನಟಿಯಾಗಿಯೂ, ಲವರ್ ಆಗಿ, ಹೆಂಡತಿಯಾಗಿ ಎಲ್ಲಾ ರೀತಿಯಲ್ಲಿಯೂ ನನಗೆ ರಾಧಿಕಾ ಪಂಡಿತ್ ದಿ ಬೆಸ್ಟ್ ಕಂಪಾನಿಯನ್' ಎಂದಿದ್ದಾರೆ ಕೆಜಿಎಫ್ ಖ್ಯಾತಿಯ ನಟ ಯಶ್.
ಕತ್ತಲೆಯಿದ್ದಾಗಲೇ ನಕ್ಷತ್ರಗಳನ್ನು ನೋಡಲು ಸಾಧ್ಯ ಅಂದಿದ್ಯಾಕೆ ನಟಿ ಅನುಪಮಾ ಗೌಡ?
ಅದಕ್ಕೂ ಮೊದಲು ಕೇಳಿದ 'ಗಜಕೇಸರಿ ಅಥವಾ ಮಾಸ್ಟರ್ ಪೀಸ್' ಎಂಬ ಪ್ರಶ್ನೆಗೆ ಯಶ್ ಅವರು ಆ ಪ್ರಶ್ನೆ ಬಗ್ಗೆಯೇ ಸ್ವಲ್ಪ ಬೇಸರಿಸಿಕೊಂಡು, 'ನಾನು ಆ ಎರಡೂ ಚಿತ್ರಕ್ಕೂ ಈಕ್ವಲ್ ಎಫರ್ಟ್ ಹಾಕಿದೀನಿ, ಒಕೆ, ಮಾಸ್ಟರ್ ಪೀಸ್' ಎಂದು ಒಂದು ಹೆಸರು ಹೇಳಲೇಬೇಕಲ್ಲ ಎಂಬ ಕಾರಣಕ್ಕೆ ಹೇಳುತ್ತಾರೆ. ಆ ಬಳಿಕ ಬಂದಿದ್ದೇ ಈ 'ರಾಧಿಕಾ ಪಂಡಿತ್ ಅಥವಾ ಶ್ರೀನಿಧಿ ಶೆಟ್ಟಿ' ಎಂಬ ಪ್ರಶ್ನೆ. ಅದಕ್ಕೆ ನಟ ಯಶ್ ತುಂಬಾ ಕ್ಲಿಯರ್ ಕಟ್ ಉತ್ತರ ಕೊಟ್ಟಿದ್ದಾರೆ.
ಕನ್ನಡದ 'ಕಥಾನಾಯಕ' ಸಿನಿಮಾದಲ್ಲೂ ಹಾಡಿದ್ದ ತಮಿಳು ಗಾಯಕಿ ಉಮಾ ರಮಣನ್ ನಿಧನ
ಅಂದಹಾಗೆ, ನಟ ಯಶ್ ಸದ್ಯ ಎರಡು ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್ (Toxic)'ಸಿನಿಮಾಕ್ಕೆ ನಾಯಕರಾಗಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಯಶ್, ಇನ್ನೊಂದು ಕಡೆ ಹಿಂದಿಯ' ರಾಮಾಯಣ (Ramayana)'ಸಿನಿಮಾದಲ್ಲಿ ರಾವಣನ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದೆ. ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಹಾಗು ಯಶ್ ರಾವಣರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಪಾರ್ಟ್ನರ್ ಅಗಿ ಬಂಡವಾಳವನ್ನೂ ಹೂಡುವ ಮೂಲಕ ನಟ ಯಶ್, ಮೊದಲ ಬಾರಿಗೆ ನಿರ್ಮಾಪಕರಾಗಿಯೂ ಉದ್ಯಮಕ್ಕೆ ಕಾಲಿಟ್ಟಂತಾಗಿದೆ.
ಭಾರೀ ಟ್ರೆಂಡಿಂಗ್‌ನಲ್ಲಿ 'ನಿರ್ಗತಿಕ' ಪದ.., ಬಿಸಿಬಿಸಿ ಚರ್ಚೆ; ಫುಲ್ ಟ್ರೋಲ್ ಆಗುತ್ತಿರುವ ಪ್ರಕಾಶ್ ರಾಜ್!