ಧರ್ಮೇಂದ್ರ- ಹೇಮಾ ದಾಂಪತ್ಯಕ್ಕೆ 44 ವರ್ಷ: ಮದ್ವೆಗಾಗಿ ದಿಲಾವರ್ ಖಾನ್- ಆಯೇಷಾಬೀ ಆಗಿದ್ದ ರೋಚಕ ಕಥೆ ಇಲ್ಲಿದೆ...

By Suvarna News  |  First Published May 2, 2024, 1:11 PM IST

ಬಾಲಿವುಡ್‌ ನಟರಾದ ಧಮೇಂದ್ರ ಮತ್ತು ಹೇಮಾ ಮಾಲಿನಿ ಅವರ 44ನೇ ಮದುವೆ ವಾರ್ಷಿಕೋತ್ಸವ ಇಂದು. ಈ ಸಂದರ್ಭದಲ್ಲಿ ಧರ್ಮ ಬದಲಿಸಿಕೊಂಡಿದ್ದ ಈ ಜೋಡಿಯ ರೋಚಕ ಕಥೆ ಇಲ್ಲಿದೆ!
 


ಹಲವಾರು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿ, ಪ್ರೀತಿಸಿ ನಿಜ ಜೀವನದಲ್ಲಿ ಮದುವೆಯಾದ ಜೋಡಿಗಳು ಚಿತ್ರರಂಗದಲ್ಲಿ ಸಾಕಷ್ಟು ಇವೆ. ಆ ಜೋಡಿಗಳಲ್ಲಿ ಧರ್ಮೇಂದ್ರ ಮತ್ತು ಕನಸಿನ ಹುಡುಗಿ ಹೇಮಾ ಮಾಲಿನಿ ಜೋಡಿ ಕೂಡ ಒಂದು. ಇಂದು  ಅಂದರೆ ಮೇ 2 ಈ ಜೋಡಿ ಮದುವೆಯಾಗಿ 44 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಇವರ ಅಪರೂಪದ, ಕುತೂಹಲದ ಹಾಗೂ ವಿಚಿತ್ರ ಪ್ರೇಮ್‌ ಕಹಾನಿಯನ್ನು ಇಲ್ಲಿ ಹೇಳಲಾಗಿದೆ. ಅಷ್ಟಕ್ಕೂ ಹಿರಿತೆರೆಯಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೋಡಿಯನ್ನು ಜನರು ತುಂಬಾ ಇಷ್ಟಪಡುತ್ತಿದ್ದ ಕಾಲವೊಂದಿತ್ತು. ಇವರಿಬ್ಬರೂ ಮದುವೆಯನ್ನೂ ಆಗಿ ಸುಖಿ ದಾಂಪತ್ಯವನ್ನೂ ನಡೆಸುತ್ತಿದ್ದಾರೆ. ಆದರೆ ಇವರ ಮದುವೆಯ ಹಿನ್ನೆಲೆಯೇ ರೋಚಕವಾಗಿದ್ದು, ಧರ್ಮವನ್ನೂ ಬದಲಿಸಿಕೊಂಡಿದ್ದು ಕೆಲವೇ ಕೆಲವು ಜನರಿಗೆ ತಿಳಿದಿದೆ!

ಹೌದು.  ಧರ್ಮೇಂದ್ರ ಹೇಮಾ ಮಾಲಿನಿಯನ್ನು ಮದುವೆಯಾದಾಗ, ಧರ್ಮೇಂದ್ರ ಅವರು ಈಗಾಗಲೇ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರು. ಅದಾಗಲೇ ಮದುವೆಯಾಗಿದ್ದ, ತನಗಿಂತ 13 ವರ್ಷ ದೊಡ್ಡವ ಮತ್ತು ನಾಲ್ಕು ಮಕ್ಕಳ ತಂದೆಯಾಗಿರುವ ಧರ್ಮೇಂದ್ರನನ್ನು ಹೇಮಾ ಮಾಲಿನಿ ಹೇಗೆ ಪ್ರೀತಿಸಿದ್ದರು. ಆದ್ದರಿಂದ ಇವರಿಬ್ಬರೂ ಮದುವೆಯಾಗಲು ಸಾಕಷ್ಟು ತೊಂದರೆ ಅನುಭವಿಸಬೇಕಾಗಿತ್ತು, ಧರ್ಮೇಂದ್ರ ಅವರು 19 ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. ಧರ್ಮೇಂದ್ರ ಹೇಮಾಳನ್ನು ಪ್ರೀತಿಸಿದಾಗ ಅವರಿಗೆ 35 ವರ್ಷ ಮತ್ತು ಹೇಮಾಗೆ 22 ವರ್ಷ. ಆ ಸಮಯದಲ್ಲಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಇಬ್ಬರೂ ತಮ್ಮ ಚಲನಚಿತ್ರ ವೃತ್ತಿಜೀವನ ಉತ್ತುಂಗದಲ್ಲಿದ್ದರು. ಇದಾಗಲೇ ಧರ್ಮೇಂದ್ರ ಅವರಿಗೆ ಮದುವೆಯಾಗಿದ್ದರಿಂದ ಈ ಸಂಬಂಧಕ್ಕೆ ಭವಿಷ್ಯವಿದೆಯೋ ಇಲ್ಲವೋ ಎಂದು ತಿಳಿಯದೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ಮಕ್ಕಳ ತಂದೆಯಾಗಿದ್ದರು.

Tap to resize

Latest Videos

ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!
 
ಪ್ರತಿಜ್ಞಾ ಚಿತ್ರದ ಶೂಟಿಂಗ್ ವೇಳೆ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದರು ಎಂದು ನಂಬಲಾಗಿದೆ. ವಿವಾಹಿತ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಕ್ಕೆ ಹೇಮಾ ಮಾಲಿನಿ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹೇಮಾ ಮಾಲಿನಿಯ ಸಂಬಂಧವನ್ನು  ಬಾಲಿವುಡ್ ನಟ ಜೀತೇಂದ್ರ ಅವರ ಜೊತೆ ಫಿಕ್ಸ್ ಮಾಡಿದ್ದರು.  ಜಿತೇಂದ್ರ ಅವರನ್ನು ಮದುವೆಯಾಗುವಂತೆ ಕುಟುಂಬಸ್ಥರು ಹೇಮಾ ಮಾಲಿನಿಯ ಮೇಲೆ ಒತ್ತಡ ಹೇರಿದ್ದು, ಇಷ್ಟವಿಲ್ಲದಿದ್ದರೂ ಹೇಮಾ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಹೇಮಾ ಮಾಲಿನಿ ಮದುವೆ ವಿಚಾರ ತಿಳಿದ ಧರ್ಮೇಂದ್ರ ಮದುವೆ ಮುರಿದುಕೊಳ್ಳಲು ಹೇಮಾ ಮಾಲಿನಿ ಮನೆಗೆ ಬಂದು ಮದುವೆ ಮುರಿಯುವಲ್ಲಿ ಯಶಸ್ವಿಯಾಗಿದ್ದರು.
 
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೋಡಿಯು ಹಿರಿತೆರೆಯಲ್ಲಿ ಸುಲಭವಾಗಿ ಯಶಸ್ವಿಯಾದರೂ, ಇಬ್ಬರೂ ನಿಜ ಜೀವನದಲ್ಲಿ ಒಂದಾಗಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಆ ಸಮಯದಲ್ಲಿ ಇವರ ದಾಂಪತ್ಯದಲ್ಲಿ ಎರಡು ಸಮಸ್ಯೆಗಳಿದ್ದವು. ಒಬ್ಬರು ಹೇಮಾ ಮಾಲಿನಿಯ ತಂದೆ ಮತ್ತು ಧರ್ಮೇಂದ್ರ ಅವರ ಮೊದಲ ಪತ್ನಿ. ಹೇಮಾ ಮಾಲಿನಿ ಅವರ ತಂದೆ 1978 ರಲ್ಲಿ ನಿಧನರಾದರು. ನಂತರ ಹೇಮಾ ಮಾಲಿನಿ ಒಂಟಿಯಾಗಿದ್ದರು. ಧರ್ಮೇಂದ್ರನೊಂದಿಗೆ ಹೇಮಾಳ ಒಂಟಿತನ ಕಾಣಿಸಲಿಲ್ಲ. ಅಂತಿಮವಾಗಿ 1980 ರಲ್ಲಿ ಹೇಮಾ ಮತ್ತು ಧರ್ಮೇಂದ್ರ ವಿವಾಹವಾದರು. ಆದರೆ ಇದಕ್ಕೂ   ಧರ್ಮೇಂದ್ರ  ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಬೇಕಿತ್ತು. ಏಕೆಂದರೆ ಧರ್ಮೇಂದ್ರ ಅವರು ಈಗಾಗಲೇ ಮದುವೆಯಾಗಿದ್ದರಿಂದ ಕಾನೂನುಬದ್ಧವಾಗಿ ಮದುವೆಯಾಗಲು ಸಾಧ್ಯವಾಗಲಿಲ್ಲ. ಮತಾಂತರಗೊಂಡ ನಂತರ ಧರ್ಮೇಂದ್ರ ತನ್ನ ಹೆಸರನ್ನು ದಿಲಾವರ್ ಖಾನ್ ಎಂದು ಬದಲಾಯಿಸಿಕೊಂಡರು ಮತ್ತು ಹೇಮಾ ಮಾಲಿನಿ ತನ್ನ ಹೆಸರನ್ನು ಆಯೇಶಾ ಬಿ ಎಂದು ಬದಲಾಯಿಸಿದರು. 

ಮದುವೆಯ ನಂತರ ಹೇಮಾ ಮಾಲಿನಿ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. ಒಂದರ ಹಿಂದೆ ಒಂದರಂತೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ಕೊಟ್ಟವರು ಧರ್ಮೇಂದ್ರ. ಸಮಾಜ ಮತ್ತು ಕುಟುಂಬದ ವಿರುದ್ಧ ಅವರ ವಿವಾಹವು ಅವರ ಚಲನಚಿತ್ರ ವೃತ್ತಿಜೀವನಕ್ಕೆ ಅಡ್ಡಿಯಾಗಲಿಲ್ಲ.
 

ಪಿನ್ ತೆಗೆದರೆ ಸೀರೆ ಜಾರಬೇಕು..ನಮಗೆ ಅದೇ ಬೇಕು; ಆ ಕರಾಳ ದಿನ ನೆನಪಿಸಿಕೊಂಡ ಹೇಮಾ ಮಾಲಿನಿ

 
 
 
 
 
 
 
 
 
 
 
 
 
 
 

A post shared by ESHA DEOL (@imeshadeol)

click me!