ಸೆಕ್ಸ್ ನಿಂದ ಪಡೆಯಿರಿ 10 ಆರೋಗ್ಯಕರ ಪ್ರಯೋಜನಗಳು

Published : Jul 11, 2022, 06:29 PM IST

ಸೆಕ್ಸ್ ಎಂಬುದು ವೈವಾಹಿಕ ಜೀವನದ ಒಂದು ಪ್ರಮುಖ ಭಾಗವಾಗಿದೆ. ಇದು ಪತಿ – ಪತ್ನಿಯನ್ನು ಭಾವನಾತ್ಮಕವಾಗಿ ಬಂಧಿಸುತ್ತದೆ. ಇದರೊಂದಿಗೆ, ಹ್ಯಾಪಿ ಹಾರ್ಮೋನುಗಳು ಮತ್ತು ಡೋಪಮೈನ್ ಬಿಡುಗಡೆಯಾಗೋದ್ರಿಂದ ನಿಮ್ಮ ಸಂಬಂಧ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ. ಆದರೆ ಇದರಿಂದ ಉಂಟಾಗೋ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದ್ಯಾ? ಇಲ್ಲಾಂದ್ರೆ ಮುಂದೆ ಓದಿ….  

PREV
110
ಸೆಕ್ಸ್ ನಿಂದ ಪಡೆಯಿರಿ 10 ಆರೋಗ್ಯಕರ ಪ್ರಯೋಜನಗಳು

1. ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತೆ
ಶಾರೀರಿಕ ಸಂಬಂಧವನ್ನು ಹೊಂದಿರುವ ಜನರು ಕಡಿಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಪದೇ ಪದೇ ಲೈಂಗಿಕ ಕ್ರಿಯೆ(Sex) ನಡೆಸುವ ಜನರ ದೇಹದಲ್ಲಿ 'ಇಮ್ಯುನೊಗ್ಲೋಬ್ಯುಲಿನ್ ಎ' ಮಟ್ಟವು ಹೆಚ್ಚಾಗುತ್ತೆ. ಇದು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

210

2. ಕಾಮಾಸಕ್ತಿ ಹೆಚ್ಚುತ್ತೆ

ನೀವು ದೀರ್ಘ ಲೈಂಗಿಕ ಜೀವನವನ್ನು ಬಯಸುವ ವ್ಯಕ್ತಿಯಾಗಿದ್ದರೆ, ಸೆಕ್ಸ್ ಮಾಡೋದ್ರಿಂದ ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುವುದಲ್ಲದೆ, ನಿಮ್ಮ ಕಾಮಾಸಕ್ತಿಯನ್ನು ಸುಧಾರಿಸುತ್ತದೆ ಎಂದು ತಿಳಿದುಕೊಳ್ಳಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಸಮಸ್ಯೆ(Phusical and mental problem) ನಿವಾರಿಸಲು ಸಹಾಯ ಮಾಡುತ್ತದೆ.

310

3. ವಜೈನಾ(Vagina) ಆರೋಗ್ಯವಾಗಿರುತ್ತೆ
ನಿಯಮಿತ ಲೈಂಗಿಕತೆಯು ಯೋನಿಯ ಅಂಗಾಂಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ನಿಮ್ಮ ಮೂತ್ರಕೋಶವನ್ನು ಬಲಪಡಿಸುತ್ತದೆ.
 

410

4. ರಕ್ತದೊತ್ತಡ(Blood pressure) ನಿಯಂತ್ರಿಸುತ್ತೆ
ಸೆಕ್ಸ್ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆಗೆ ನಡುವೆ ಸಂಬಂಧ ಇದೆ. ಉತ್ತಮ ಲೈಂಗಿಕತೆಯು ವ್ಯಕ್ತಿಯ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

510

5. ಹೃದಯಾಘಾತದ(Heart attack) ಅಪಾಯ ಕಡಿಮೆ
ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಲೈಂಗಿಕ ಜೀವನವನ್ನು ಹೊಂದಿದ್ದರೆ, ನಿಮ್ಮ ಹೃದಯವು ಖಂಡಿತವಾಗಿಯೂ ಆರೋಗ್ಯಕರವಾಗಿರುತ್ತದೆ. ದೈಹಿಕ ಸಂಬಂಧಗಳನ್ನು ಹೊಂದಿರುವುದು ದೇಹದಲ್ಲಿ ಸೃಷ್ಟಿಯಾಗುತ್ತಿರುವ ಹೆಚ್ಚುವರಿ ಕ್ಯಾಲೊರಿ ಬರ್ನ್ ಮಾಡೋದು ಮಾತ್ರವಲ್ಲ, ಬದಲಾಗಿ ಸೆಕ್ಸ್ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳ ನಡುವೆ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

610

6. ನೋವನ್ನು(Pain) ನಿವಾರಿಸುತ್ತೆ
ಉತ್ತಮ ದೈಹಿಕ ಸಂಬಂಧವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಎಂಡಾರ್ಫಿನ್ ಗಳು ಮತ್ತು ಇತರ ಹಾರ್ಮೋನುಗಳ ಹೆಚ್ಚಿನ ಹರಿವು ತಲೆ, ಬೆನ್ನು ಮತ್ತು ಕಾಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಂಧಿವಾತ ಮತ್ತು ಪಿರಿಯಡ್ಸ್ ನೋವನ್ನು ಸಹ ಕಡಿಮೆ ಮಾಡುತ್ತೆ.

710

7 ಪ್ರಾಸ್ಟೇಟ್ ಕ್ಯಾನ್ಸರ್(Prostate cancer) ಅಪಾಯವನ್ನು ಕಡಿಮೆ ಮಾಡುತ್ತೆ
ಅನೇಕ ಆರೋಗ್ಯ ವರದಿಗಳ ಪ್ರಕಾರ, ಸೆಕ್ಸ್ ಅತ್ಯುತ್ತಮ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ, ಇದು ಪ್ರಾಸ್ಟೇಟ್ ಕ್ಯಾನ್ಸರ್ ನಿವಾರಿಸಲು ಸಹಾಯ ಮಾಡುತ್ತದೆ.  ತಿಂಗಳಿಗೆ ಕನಿಷ್ಠ 21 ಬಾರಿ ಸೆಕ್ಸ್ ಮಾಡೋದ್ರಿಂದ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಗುರಿಯಾಗುವ ಸಾಧ್ಯತೆ ಕಡಿಮೆ ಇರುತ್ತೆ.

810

8. ನಿಮಗೆ ಉತ್ತಮ ನಿದ್ರೆ(Good sleep) ನೀಡುತ್ತದೆ
ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುವ ಮತ್ತೊಂದು ಪ್ರಯೋಜನವೆಂದರೆ ಸೆಕ್ಸ್ ನಿಂದ ಉತ್ತಮವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತೆ. ಉತ್ತಮ ಲೈಂಗಿಕತೆಯು ನಿಮಗೆ ಹೆಚ್ಚು ತ್ವರಿತವಾಗಿ ಮತ್ತು ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
 

910

9. ಒತ್ತಡ (Stress)ನಿವಾರಿಸುತ್ತೆ
ಲೈಂಗಿಕ ಕ್ರಿಯೆಯು ಒತ್ತಡವನ್ನು ದೂರ ಮಾಡುತ್ತೆ. ಸೆಕ್ಸ್ ಸಮಯದಲ್ಲಿ, ಎಂಡಾರ್ಫಿನ್ ಗಳು ಮತ್ತು ಆಕ್ಸಿಟೋಸಿನ್ ನಂತಹ ಸಂತೋಷದ ಹಾರ್ಮೋನುಗಳು ದೇಹದಲ್ಲಿ ಬಿಡುಗಡೆಯಾಗುತ್ತವೆ, ಇದು ಖಿನ್ನತೆಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ.

1010

10. ನೆನಪಿನ ಶಕ್ತಿ(Memory power) ಹೆಚ್ಚಾಗುತ್ತೆ 
ಸೆಕ್ಸ್ ಮಾಡೋದ್ರಿಂದ ಜ್ಞಾಪಕ ಶಕ್ತಿ ಸುಧಾರಿಸುತ್ತದೆ ಎಂದು ಕೆಲವು ಸಂಶೋಧನೆಗಳು ಆರಂಭಿಕ ಹಂತಗಳಲ್ಲಿ ತೋರಿಸಿವೆ. ನೀವು ಸೆಕ್ಸ್ ಮಾಡೋದು ನಿಲ್ಲಿಸಿದಾಗ ಮರೆವಿನ ಕಾಯಿಲೆ ಉಂಟಾಗುತ್ತೆ ಎಂದು ಸಂಶೋಧನೆ ತಿಳಿಸಿದೆ.  ವಿಶೇಷವಾಗಿ 50 ರಿಂದ 89 ವರ್ಷ ವಯಸ್ಸಿನ ಜನರಿಗೆ ಈ ಸಮಸ್ಯೆ ಉಂಟಾಗುತ್ತೆ. 
 

click me!

Recommended Stories