ಎಲ್ಲಾದರೂ ರಿಜೆಕ್ಟ್ (Reject) ಆಗಿಬಿಟ್ರೇ ಅನ್ನೋ ಭಯದಿಂದ ಅನೇಕ ಜನರು ಮನಸ್ಸು ಬಿಚ್ಚಿ ಮಾತನಾಡಲು ಹೆದರುತ್ತಾರೆ, ಹಾಗಾಗಿ ಕೆಲವರು ಅವಸರದಲ್ಲಿ ಕೆಲವೊಂದು ತಪ್ಪನ್ನು ಮಾಡ್ತಾರೆ, ಅದನ್ನು ಸುಧಾರಿಸೋದು ತುಂಬಾ ಕಷ್ಟ. ನೀವೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಿದ್ರೆ, ಕೆಲವು ವಿಷಯಗಳನ್ನು ಫಸ್ಟ್ ಅರ್ಥಮಾಡಿಕೊಳ್ಳಿ. ಇದು ನಿಮ್ಮ ಹಾದಿಯನ್ನು ಸುಲಭಗೊಳಿಸಬಹುದು ಅಥವಾ ನಿಮ್ಮ ಪ್ರೀತಿಯ ಸತ್ಯವನ್ನು ನೀವು ತಿಳಿದುಕೊಳ್ಳಬಹುದು.
ಮೊದಲು ನಿಮ್ಮ ಫೀಲಿಂಗ್ಸ್(Feelings) ಪರೀಕ್ಷಿಸಿಕೊಳ್ಳಿ
ನೀವು ಯಾರನ್ನಾದರೂ ಪ್ರೀತಿಸುತ್ತೀರಿ ಎಂದು ನಿಮಗೆ ಅನಿಸಿದಾಗ, ನಿಮ್ಮ ಹೃದಯ ಅವರೊಂದಿಗೆ ಮಾತನಾಡಲು ಬಯಸಿದಾಗ, ಮೊದಲು ನೀವು ನಿಮ್ಮ ಭಾವನೆ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಅನೇಕ ಬಾರಿ ನೀವು ಆಕರ್ಷಣೆಯನ್ನು ಪ್ರೀತಿ ಎಂದು ಭಾವಿಸುತ್ತೀರಿ, ಆಗ ಪ್ರೊಪೋಸ್ ಮಾಡುವ ತಪ್ಪು ಮಾಡಬೇಡಿ.
ಸಂಗಾತಿ ದುಃಖ ನೋಡಿ ನೀವು ದುಃಖಿತರಾಗಿದ್ದರೆ ಮತ್ತು ಅದನ್ನು ನಿವಾರಿಸಲು ನಿಮ್ಮ ಎಲ್ಲಾ ಶಕ್ತಿ ಬಳಸಲು ಸಿದ್ಧರಿದ್ದರೆ, ನಿಮ್ಮ ಪ್ರೀತಿಯ(Love) ಸಂತೋಷಕ್ಕಾಗಿ ಏನನ್ನಾದರೂ ತ್ಯಾಗ ಮಾಡುವ ಬಗ್ಗೆ ನಿಮಗೆ ಕಷ್ಟ ಅನಿಸದಿದ್ದರೆ, ನೀವು ನಿಜವಾದ ಪ್ರೀತಿಯಲ್ಲಿದ್ದೀರಿ ಎಂದರ್ಥ.
ನಿಸ್ವಾರ್ಥ ಪ್ರೀತಿಯನ್ನು ಪ್ರೀತಿ ಎಂದು ಕರೆಯಲಾಗುತ್ತೆ. ನಿಮಗೂ ಈ ರೀತಿ ನಿಸ್ವಾರ್ಥ ಪ್ರೀತಿ ಉಂಟಾಗಿದ್ದರೆ ಮಾತ್ರ ಪ್ರಪೋಸ್ (Propose) ಮಾಡುವ ಬಗ್ಗೆ ಯೋಚಿಸಿ. ಏಕೆಂದರೆ ನಿಮಗೆ ನಿಮ್ಮ ಫೀಲಿಂಗ್ಸ್ ಬಗ್ಗೆ ಕನ್ಫ್ಯೂಸ್ ಆಗಿದ್ದರೆ ನಿಮ್ಮ ಮಾತಿನಲ್ಲಿ ನಂಬಿಕೆ ಬರೋದಿಲ್ಲ.
ತುಂಬಾ ಹೊಗಳಿಕೆ ಬೇಡ
ಅನೇಕ ಬಾರಿ ನೀವು ನಿಮ್ಮ ಮುಂದೆ ಇರುವ ವ್ಯಕ್ತಿಯನ್ನು ಇಂಪ್ರೆಸ್(Impress) ಮಾಡೋ ಸಲುವಾಗಿ, ಅವರನ್ನು ಎಷ್ಟು ಹೊಗಳಲು ಪ್ರಾರಂಭಿಸುತ್ತೀರಿ ಎಂದರೆ ಅವರು ನಿಮ್ಮಿಂದ ಇಂಪ್ರೆಸ್ ಆಗುವ ಬದಲು ನಿಮ್ಮನ್ನು ಚೀಪ್ ಎಂದು ಭಾವಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಪ್ರೀತಿ ಟೈಂಪಾಸ್ ಎಂದು ಅರ್ಥಮಾಡಿಕೊಳ್ಳುತ್ತಾರೆ. ನೀವು ಇಂಪ್ರೆಸ್ ಮಾಡಲು ಕೆಲವು ಸಲ ಮಾತ್ರ ಕಾಂಪ್ಲಿಮೆಂಟ್ ಮಾಡಿ , ಅದನ್ನು ಅವರು ಇಷ್ಟಪಡುತ್ತಾರೆ.
ಕೆಲವೊಮ್ಮೆ ಮಾತ್ರ ಕಾಂಪ್ಲಿಮೆಂಟ್(Compliment) ಮಾಡಿದ್ರೆ, ಆಗ ಅವರು ನಿಮ್ಮನ್ನು ಒಳ್ಳೆಯ ಹೃದಯದ ವ್ಯಕ್ತಿ ಎಂದು ಪರಿಗಣಿಸುತ್ತಾರೆ ಮತ್ತು ನಿಮ್ಮನ್ನು ಸ್ಪೆಷಲ್ ಎಂದು ಭಾವಿಸುತ್ತಾರೆ .ಅನೇಕ ಬಾರಿ ಅತಿಯಾದ ಹೊಗಳಿಕೆ ನಿಮ್ಮ ನೆಗಟಿವಿಟಿಯನ್ನು ತೋರಿಸುತ್ತೆ. ಇದರಿಂದ ಸಂಬಂಧ ಹಾಳಾಗುತ್ತೆ.
ಫ್ರೆಂಡ್ ಶಿಪ್(Friendship) ಮುಖ್ಯ
ನೀವು ಯಾರಿಗಾದರೂ ಒಳ್ಳೆಯ ಸ್ನೇಹಿತರಾಗಿದ್ದರೆ, ಇತರ ವ್ಯಕ್ತಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳೋದು ಸುಲಭವಾಗುತ್ತೆ. ಎಲ್ಲಾ ವಿಷಯಗಳನ್ನು ಮುಚ್ಚುಮರೆ ಇಲ್ಲದೇ ಶೇರ್ ಮಾಡ್ತಾರೆ. ಹಾಗಾಗಿ ನೀವು ಮೊದಲು ಅವರ ಉತ್ತಮ ಸ್ನೇಹಿತರಾಗಿ, ಆಗ ಮಾತ್ರ ನೀವು ಉತ್ತಮ ಸಂಗಾತಿಯಾಗಲು ಸಾಧ್ಯ.
ದಂಪತಿ(Couple) ನಡುವೆ ಫ್ರೆಂಡ್‌ಶಿಪ್ ಇರೋದು ತುಂಬಾನೆ ಮುಖ್ಯ ಮತ್ತು ನಿಮ್ಮ ಪ್ರೀತಿ ವ್ಯಕ್ತಪಡಿಸಲು ನೀವು ಈ ವಿಧಾನವನ್ನು ಅಳವಡಿಸಿಕೊಳ್ಳಬೇಕು. ನಿಮ್ಮಿಬ್ಬರ ನಡುವೆ ಸ್ನೇಹವಿದ್ದರೆ, ನೀವು ನಿಮ್ಮ ಓಪನ್ ಆಗಿ ಅವರ ಬಳಿ ಎಲ್ಲವನ್ನೂ ಹೇಳಬಹುದು. ಅವರು ನಿಮಗೆ ಒಂದು ಅವಕಾಶ ನೀಡುವ ಬಗ್ಗೆಯೂ ಯೋಚಿಸಬಹುದು ಅಥವಾ ಅವರು ನಿಮ್ಮನ್ನು ಪ್ರೀತಿಸಲೂಬಹುದು
ಎಲ್ಲಾ ಸಮಯದಲ್ಲೂ ಅಂಟಿಕೊಳ್ಳಬೇಡಿ.
ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಫ್ರೆಂಡ್‌ಶಿಪ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ, ಆದರೆ ಯಾವಾಗಲೂ ಅವರ ಹಿಂದೆ ಹಿಂದೆ ಹೋಗಬೇಡಿ. ಇದರಿಂದ ಅವರಿಗೂ ಕಿರಿ ಕಿರಿ ಎನಿಸಬಹುದು ಮತ್ತು ನಿಮ್ಮಿಂದ ದೂರವಿರಲು ಒಂದು ನೆಪ ಕಂಡುಕೊಳ್ಳಬಹುದು. ನಂತರ, ನೀವು ಅವರಿಗೆ ಪ್ರಪೋಸ್ ಮಾಡಿದರೂ ಸಹ, ಅವರು ನಿಮ್ಮ ಹಳೆಯ ಅಭ್ಯಾಸ ನೆನಪಿಸಿ, ನಿಮ್ಮನ್ನು ರಿಜೆಕ್ಟ್ ಮಾಡಬಹುದು.
ಹಾಗಾಗಿ ಯಾರಿಗೇ ಆದರೂ ಸರಿ ನಿಮಗೆ ಅಗತ್ಯವಿರುವಷ್ಟು ಆದ್ಯತೆ ನೀಡಿ. ಸಂಬಂಧದಲ್ಲಿಯೂ ಸಹ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುವ ನಿಮ್ಮ ಜಾಗ ಅವರಿಗೆ ನೀಡಿ. ಆಗ ಮಾತ್ರ ನೀವು ಅವರ ಹೃದಯ ಗೆಲ್ಲಲು ಸಾಧ್ಯವಾಗುತ್ತೆ . ನಿಮ್ಮ ಬಾಡಿ ಲಾಂಗ್ವೇಜ್ (Body language) ಸಹ ಉತ್ತಮ ಆಗಿರೋದು ತುಂಬಾನೆ ಮುಖ್ಯ.