ನಿಮ್ಮ ಗಂಡಂಗೆ ಅಕ್ರಮ ಸಂಬಂಧವಿದೆಯಾ? ಪತ್ತೆ ಮಾಡೋದು ಬಹಳ ಸುಲಭ

First Published | Jul 6, 2022, 7:09 PM IST

ಯಾವುದೇ ಸಂಬಂಧವನ್ನು ಬಲಪಡಿಸಲು, ಮೊದಲನೆಯದಾಗಿ ಅದರಲ್ಲಿ ಸಾಕಷ್ಟು ಪ್ರೀತಿ ಇರಬೇಕು. ವಿವಾಹದ ನಂತರ, ಗಂಡ ಮತ್ತು ಹೆಂಡತಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸೋದಾಗಿ ಮತ್ತು ನಿಷ್ಠೆ ಕಾಪಾಡಿಕೊಳ್ಳೋ ಪ್ರತಿಜ್ಞೆ ಮಾಡ್ತಾರೆ. ಮದುವೆಯ ನಂತರದ ಸಂಬಂಧದಲ್ಲಿ ಸಂದೇಹ ಮತ್ತು ಮೋಸಕ್ಕೆ ಯಾವುದೇ ಅವಕಾಶ ಇರಬಾರದು. 

ಹೆಚ್ಚಿನ ಜನರು ತಮ್ಮ ಹೆಂಡತಿ ಅಥವಾ ಗಂಡನಿಗೆ ಮೋಸ(Fraud) ಮಾಡಲು ಹೆದರುತ್ತಾರೆ, ಆದರೆ ಇಂದಿನ ವಾತಾವರಣದಲ್ಲಿ ನೀವು ಆಫೀಸ್ನಲ್ಲಿ ನಿಮ್ಮ ಮಹಿಳಾ ಸ್ನೇಹಿತರೊಂದಿಗೆ ಗಂಟೆಗಳ ಕಾಲ ಕೆಲಸ ಮಾಡುತ್ತೀರಿ. ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. 

ಅನೇಕ ಬಾರಿ ವಿಷಯ ಹೀಗಾಗ್ತಾವೆ. ನೀವು ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಿತರಾಗುತ್ತೀರಿ. ಎಕ್ಸ್ಟ್ರಾ ಮರಿಟಲ್ ಅಫೇರ್ (Extra marital affair)ಇಲ್ಲಿಂದ ಪ್ರಾರಂಭವಾಗುತ್ತೆ , ಈ ಹೊಸ ಸಂಬಂಧದಿಂದಾಗಿ, ನೀವು ನಿಮ್ಮ ಪಾರ್ಟ್ನರ್ಗೆ  ಮೋಸ ಮಾಡುತ್ತೀರಿ. ನಿಮ್ಮ ಪತಿ ಎಕ್ಸ್ಟ್ರಾ ಮರಿಟಲ್ ಅಫೇರ್ ಹೊಂದಿದ್ದಾನೆಯೇ ಎಂದು ನೀವು ಸಹ ತಿಳಿದುಕೊಳ್ಳಲು ಬಯಸಿದರೆ, ಈ ಟಿಪ್ಸ್ ಫಾಲೋ ಮಾಡಿ .

Tap to resize

ತನ್ನ ಬಗ್ಗೆ ಹೆಚ್ಚು ಗಮನ ಹರಿಸೋದು - ಒಬ್ಬ ವ್ಯಕ್ತಿ ಪ್ರೀತಿಯಲ್ಲಿದ್ದಾಗ(Love) ಅಥವಾ ಯಾರೊಂದಿಗಾದರೂ ರಿಲೇಷನ್ಶಿಪ್ನ್ ಆರಂಭದಲ್ಲಿದ್ದಾಗ, ಅವನು ತನ್ನ ಬಗ್ಗೆ ಸಾಕಷ್ಟು ಗಮನ ಹರಿಸ್ತಾನೆ. ತನ್ನ ವ್ಯಕ್ತಿತ್ವ ಆಕರ್ಷಕವಾಗಿಸಲು ಪ್ರಯತ್ನಿಸುತ್ತಾನೆ. ನಿಮ್ಮ ಪತಿ ಅದೇ ರೀತಿ ಮಾಡುತ್ತಿದ್ದರೆ, ಅದು ಯಾರೋ ಒಬ್ಬರು ನಿಮ್ಮ ಪತಿಯ ಜೀವನ ಪ್ರವೇಶಿಸಿದ್ದಾರೆ ಎಂಬುದರ ಸಂಕೇತವಾಗಿರಬಹುದು. 
 

ನಿಮ್ಮನ್ನು ಹೋಲಿಕೆ(Compare) ಮಾಡೋದು - ನಿಮ್ಮ ಪತಿ ನಿಮ್ಮನ್ನು ಇನ್ನೊಬ್ಬ ಮಹಿಳೆಗೆ ಹೋಲಿಕೆ ಮಾಡಿದರೆ, ಅವರು ಈಗ ನಿಮ್ಮಲ್ಲಿರುವ ನ್ಯೂನತೆ ನೋಡಲು ಪ್ರಾರಂಭಿಸಿದ್ದಾರೆ ಎಂದು ಅರ್ಥಮಾಡಿಕೊಳ್ಳಿ. ಇದು ಅನೇಕ ಬಾರಿ ಸಂಭವಿಸುತ್ತೆ ಏಕೆಂದರೆ ನಿಮ್ಮ ಪತಿ ಇನ್ನೊಬ್ಬ ಮಹಿಳೆಯ ಒಳ್ಳೆಯತನವನ್ನು ನಿಮ್ಮಲ್ಲಿ ಹುಡುಕುತ್ತಿದ್ದಾನೆ ಎಂದರ್ಥ. 


ಫೋನ್ ಗೆ(Phone) ಅಂಟಿಕೊಳ್ಳೋದು - ಪತಿ ಫೋನ್ ನಲ್ಲಿ ತುಂಬಾ ಸಮಯದವರೆಗೆ ಅಂಟಿಕೊಂಡಿದ್ದರೆ. ತನ್ನ ಫೋನ್ ಯಾವಾಗಲೂ ತನ್ನೊಂದಿಗೆ ಇರಿಸಿಕೊಂಡಿದ್ದರೆ ಎಲ್ಲೋ ಏನೋ ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳಿ. ಫೋನ್ ಗೆ ಇಷ್ಟು ಅಟ್ಯಾಚ್ ಮೆಂಟ್ ಇರಬಹುದು ಎಂದರೆ ನೀವು ಅವರ ಫೋನ್  ಚೆಕ್ ಮಾಡಬಹುದು ಎಂದು ಅವರೊಳಗೆ ಭಯವಿರಬಹುದು. 


 ಬಾಡಿ ಲ್ಯಾಂಗ್ವೇಜ್ ನಲ್ಲಿ(Body language) ಚೇಂಜಸ್ - ನಿಮ್ಮ ಗಂಡನ  ಬಾಡಿ ಲ್ಯಾಂಗ್ವೇಜ್ ಬದಲಾಗುತ್ತಿದ್ದರೆ, ಅದಕ್ಕೆ ಬೇರೊಬ್ಬ ಮಹಿಳೆ ಕಾರಣವಾಗಿರಬಹುದು. ಆಗ ಆತ  ಕಚೇರಿಯಲ್ಲಿ ಹೆಚ್ಚು ಕೆಲಸ ಮಾಡುವಂತೆ ನಟಿಸುತ್ತಾನೆ. ಹೊರಗೆ ಹೆಚ್ಚು ಸಮಯ ಕಳೆಯುತ್ತಾನೆ. ನಿಮಗೆ ಸಮಯವಿಲ್ಲ, ಬ್ಯುಸಿ ಇದ್ದೇನೆ ಎಂದು  ಅನೇಕ ಬಾರಿ ಹೇಳಬಹುದು. ನಿಮ್ಮೊಂದಿಗೆ  ಸಮಯ ಕಳೆಯೋದನ್ನು ತಪ್ಪಿಸಿ, ನಿಮ್ಮ ಪತಿ ಬೇರೆಲ್ಲೋ ಟೈಮ್ ಸ್ಪೆಂಡ್ ಮಾಡುತ್ತಿರಬಹುದು ಎಂದು ಅರ್ಥಮಾಡಿಕೊಳ್ಳಿ. 

 ಇಂಟಿಮಸಿ(Intimacy) ಇಲ್ಲ - ವೈವಾಹಿಕ ಸಂಬಂಧದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ದೈಹಿಕ ಅನ್ಯೋನ್ಯತೆ. ನಿಮ್ಮ ಸಂಬಂಧದಲ್ಲಿ ಇದು ಹದಗೆಡುತ್ತಿದ್ದರೆ, ಜಾಗರೂಕರಾಗಿರಿ. ನಿಮ್ಮ ಪತಿಗೆ ನಿಮ್ಮ ಸ್ಪರ್ಶ ಇಷ್ಟವಾಗದಿದ್ದರೆ, ಅಥವಾ ನಿಮಗೆ ಹಾಗೆ ಅನಿಸಿದರೆ, ಅದು ನಿಮಗೆ ದೊಡ್ಡ ಲಕ್ಷಣ.ಈ ಬಗ್ಗೆ ನೀವು ಎಚ್ಚರಿಕೆಯಿಂದ ಇರೋದು ಉತ್ತಮ. 

Latest Videos

click me!