ಆಫೀಸಿನಲ್ಲಿ ನಿಮ್ಮ ನಡೆ ಹೀಗಿದ್ದರೆ ಉದ್ಯೋಗದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

First Published Oct 2, 2020, 6:06 PM IST

ಆಫೀಸ್ ಅಂದರೆ ಉದ್ಯೋಗಿಗಳಿಗೆ ಅನ್ನ ಕೊಡೋ ದೇವಾಲಯವಿದ್ದಂತೆ. ಅಲ್ಲಿ ನಮ್ಮಿಷ್ಟ ಬಂದಂತೆ ಇರಲು ಆಗುವುದಿಲ್ಲ. ಜೊತೆ ಕೆಲಸ ಮಾಡುವವರೊಂದಿಗೆ ಹಾಗೂ ಹಿರಿಯ ಸಹೋದ್ಯೋಗಿಗಳೊಂದಿಗೆ ನಡೆದುಕೊಳ್ಳಲು ರೀತಿ ನೀತಿಗಳಿವೆ. ದಿನದಲ್ಲಿ 8-10 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಚೇರಿಯಲ್ಲಿ ನಮ್ಮ ನಡೆ ನುಡಿ ಹೇಗಿರಬೇಕು..? ಅಲ್ಲೊಂದು ಅತ್ಯುತ್ತಮ ಬಾಂಧವ್ಯ ಕಾಪಾಡಿಕೊಳ್ಳುವುದು ಹೇಗೆ?

ಮಾತು ಮಧುರವಾಗಿರಲಿ...ಮಾತನಾಡುವು ರೀತಿ ಇನ್ನೊಬ್ಬರನ್ನು ಇಂಪ್ರೆಸ್ ಮಾಡುತ್ತೆ. ಆಡುವಾಗ ಟೋನ್ ಮೃದುವಾಗಿರಲಿ. ವಾಲ್ಯೂಮ್ ಕಡಿಮೆ ಇರಲಿ. ಫೋನ್ ಟೋನ್ ಸಹ ಕಡಿಮೆ ವಾಲ್ಯೂಮ್‌ನಲ್ಲಿರಲಿ. ನಮ್ಮ ಮಾತು, ಫೋನ್ ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಅಷ್ಟೇ.
undefined
ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಎಲ್ಲಿಯೋ ನೋಡುತ್ತಾ ಯಾರನ್ನೋ ಉದ್ದೇಶಿಸಿ ಮಾತನಾಡುವುದು ಅತ್ಯಂತ ದುರ್ನಡತೆ. ಜೊತೆಯವರೊಂದಿಗೆ ಮಾತನಾಡುವಾಗ ಕಣ್ಣಿನಲ್ಲಿ ಕಣ್ಣನ್ನಿಟ್ಟು ಮಾತನಾಡಿ. ನಿಮ್ಮ ಆತ್ಮವಿಶ್ವಾಸ ಅಲ್ಲಿ ತುಂಬಿ ತುಳುಕಲಿ. ಅವರಿಗೆ ನೀವು ನೀಡುವ ಗೌರವ ಎಷ್ಟೆಂಬುವುದು ಅರ್ಥವಾಗಲಿ.
undefined
ಟೈಮ್‌ sense ಬೇಕೇ ಬೇಕುಒಂದೊಂದು ದಿನ ಆಫೀಸಿಗೆ ಲೇಟಾಗಿ ಹೋದರೆ ನಡೆಯುತ್ತೆ. ದಿನಾಲೂ ಟ್ರಾಫಿಕ್ ಜಾಮ್ ಕಾರಣ ಹೇಳಿ ಲೇಟಾಗಿ ಹೋದರೆ ಯಾರು ನಿಮ್ಮನ್ನು ನಂಬುತ್ತಾರೆ ಹೇಳಿ? ಇದರಿಂದ ನಿಮ್ಮ ಮೇಲೆ ನೆಗಟಿವ್ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಟ್ರಾಫಿಕ್ ಜಾಮ್ ಆದರೂ ಸರಿಯಾದ ಸಮಯದಲ್ಲಿ ಆಫೀಸಿಗೆ ತಲುಪುವಂತೆ ಮನೆಯನ್ನು ಬಿಡಿ. ಆನ್ ಟೈಮ್ ಆಫೀಸಿನಲ್ಲಿರಿ.
undefined
Dress Code ಹೇಗಿರಬೇಕು?ಫ್ಯಾಷನೇಬಲ್ ಆಗಿ ಕಾಣಲು ಏನೇನೋ ಡ್ರೆಸ್ ಧರಿಸಿ, ಇಮೇಜ್ ಹಾಳು ಮಾಡಿಕೊಳ್ಳಬೇಡಿ. ವಾತಾವರಣಕ್ಕೆ ತಕ್ಕಂತೆ ಇರಲಿ ಡ್ರೆಸ್. ಮೀಟಿಂಗ್‌ಗೆ ಸೂಕ್ತವಾದ ಉಡುಗೆ ಇರಲಿ.
undefined
On Time ಕೆಲಸ ಮುಗಿಸಿಯಾವುದೇ ಅಸೈನ್‌ಮೆಂಟ್‌ಗೆ ಸಹಿ ಮಾಡುವಾಗಲೂ ಅದರ ಡೆಡ್‌ಲೈನ್ ಚೆಕ್ ಮಾಡಿ. ಅದನ್ನು ನೋಡದೆ ಕೆಲಸ ನಿಧಾನ ಮುಗಿಸಿದರೆ ಬಾಸ್‌ ಕೋಪಕ್ಕೆ ತುತ್ತಾಗುವುದು ಗ್ಯಾರಂಟಿ. ಹಾಗಾಗಿ ಕೆಲಸದ ವೇಳೆ ಟೈಂ ಕಡೆ ಗಮನ ಇರಲಿ. ಡೆಡ್‌ಲೈನ್‌ನಲ್ಲಿ ಕೆಲಸ ಮುಗಿಸುವುದನ್ನು ಕಲಿತುಕೊಳ್ಳಿ.
undefined
ಜ್ಞಾನ ಹಂಚಿ ಕೊಳ್ಳಿಅಯ್ಯೋ ನೀವು ಕಲಿತಿದ್ದನ್ನು ಇನ್ನೊಬ್ಬರಿಗೆ ಹೇಳಿ ಕೊಟ್ಟರೆ ಎಲ್ಲವೂ ಖಾಲಿಯಾಗುತ್ತೆ ಎಂದು ಯೋಚಿಸಬೇಡಿ. ನಿಮ್ಮಲ್ಲಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚಿಕೊಂಡಷ್ಟು ಮತ್ತಷ್ಟು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಕಲಿತಿದ್ದನ್ನು ಮತ್ತೊಬ್ಬರಿಗೆ ಹೇಳಿ ಕೊಡಲು ಹಿಂದು ಮುಂದು ನೋಡಿ ಕೊಳ್ಳಬೇಡಿ. ಅಲ್ಲದೇ ಕಿರಿಯ ಸಹೋದ್ಯೋಗಿಗಳಿಂದಲೂ ಕಲಿಯಲು ಹಿಂದು ಮುಂದು ನೋಡಬೇಡಿ.
undefined
ಹಿರಿಯರ ಮಾರ್ಗದರ್ಶನ ಪಡೆಯಿರಿ.ನಿಮ್ಮ ಕೆಲಸದಲ್ಲಿ ನಿಮಗೆ ವಿಶ್ವಾಸ ಇರಬೇಕು ನಿಜ. ಆದರೆ, ಅನುಭವ ಕಲಿಸಿದಷ್ಟು ಪಾಠವನ್ನು ಎಲ್ಲಿಯೂ ಕಲಿಯಲು ಸಾಧ್ಯವೇ ಇಲ್ಲ. ಆದ್ದರಿಂದ ನಿಮ್ಮ ಸೀನಿಯರ್ಸ್ ಹೇಳಿದ್ದನ್ನು ಕೇಳಿಸಿಕೊಳ್ಳಿ, ಅನುಸರಿಸಿ. ನೀವು ಮಾಡುವ ಕೆಲಸವನ್ನು ಮತ್ತಷ್ಟು ಚೆಂದವಾಗಿಸಲು ಅವರ ಸಲಹೆ, ಮಾರ್ಗದರ್ಶನ ಪಡೆದರೆ ಒಳ್ಳೆಯದು.
undefined
ಸ್ಟೇಟಸ್ ಹಾಕುವಾಗ ಹುಷಾರ್ಮನಸ್ಸಿಗೆ ಬಂದಿದ್ದನ್ನು ಹಂಚಿ ಕೊಳ್ಳಲು ಇದೀಗ ವಾಟ್ಸ್ ಆ್ಯಪ್ ಹಾಗೂ ಫೇಸ್‌ಬುಕ್ ಸ್ಟೇಟಸ್, ಸ್ಟೋರೀಸ್ ಹಂಚಿಕೊಳ್ಳುವ ಸಾಕಷ್ಟು ಅವಕಾಶಗಳಿವೆ. ಅಲ್ಲಿ ತಮ್ಮ ನೋವು, ದುಃಖ ತೋಡಿಕೊಳ್ಳಬಹುದು. ಆದರೆ, ಸೀನಿಯರ್ಸ್ ಹಾಗೂ ನಿಮ್ಮ ಲೀಡರ್ಸ್ ಬಗ್ಗೆ ನಿಮ್ಮಿಷ್ಟದಂತೆ ಪೋಸ್ಟ್ ಮಾಡಿಕೊಳ್ಳಬೇಡಿ. ಇನ್ನೊಬ್ಬರಿಗೆ ಹರ್ಟ್ ಆಗುವಂತೆ ಪೋಸ್ಟನ್ನು ಶೇರ್ ಮಾಡಿಕೊಳ್ಳುವುದು ಬೇಡ.
undefined
click me!