ಪಾಕ್ ನಂಟು, ತುರ್ತುಪರಿಸ್ಥಿತಿ ವೇಳೆ ವಿವಾಹ: ಸುಷ್ಮಾ ಬಗ್ಗೆ ಗೊತ್ತಿರದ ಸಂಗತಿಗಳು

First Published Aug 7, 2019, 11:28 AM IST

ಸುಷ್ಮಾ ಸ್ವರಾಜ್... ಬಿಜೆಪಿಯ ಕಟ್ಟಾಳು, ಮಮತಾಮಯಿ, ಅಪ್ರತಿಮ ವಾಗ್ಮಿ, ಸವ್ಯಸಾಚಿ ನಾಯಕಿ, ವಿದೇಶಾಂಗ ಖಾತೆಯನ್ನು ಹೀಗೂ ನಿಭಾಯಿಸಬಹುದು ಎಂದು ತೋರಿಸಿಕೊಟ್ಟ 'ಟ್ವಿಟರ್ ಮಿನಿಸ್ಟರ್'. ಇವು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದನ್ನು ಹೊರತುಪಡಿಸಿ ಸುಷ್ಮಾ ಹಾಗೂ ಪಾಕ್ ನಂಟು, ಅವರ ವೈವಾಹಿಕ ಜೀವನ, ಜ್ಯೋತಿಷ್ಯದಲ್ಲಿ ಅವರಿಗಿದ್ದ ನಂಬಿಕೆ ಬಹುಶಃ ಇವೆಲ್ಲಾ ಕೆಲವರಿಗಷ್ಟೇ ತಿಳಿದಿದೆ. ಬಿಜೆಪಿ ಮಹಿಳಾ ಮುಂಚೂಣಿ ಮುಖವಾಗಿದ್ದ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹೀಗಿರುವಾಗ ಅವರ ಕುರಿತು ತಿಳಿಯದ ಕೆಲ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ

ಸುಷ್ಮಾಗೆ ಪಾಕಿಸ್ತಾನ ನಂಟಿತ್ತು: ಸುಷ್ಮಾ ಸ್ವರಾಜ್‌ ಅವರ ಪೋಷಕರು ಪಾಕಿಸ್ತಾನದ ಲಾಹೋರ್‌ನ ಧರಂಪುರ ಮೂಲದವರು. ಇದೇ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವರಾಜ್‌ ಅವರು ಧರಂಪುರಕ್ಕೆ ಭೇಟಿ ನೀಡಿದ್ದರು.
undefined
ಎನ್‌ಸಿಸಿಯಲ್ಲೂ ಸಕ್ರಿಯ: ಎಸ್‌.ಡಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಸುಷ್ಮಾ ಸ್ವರಾಜ್‌ ಅವರು ಉತ್ತಮ ಎನ್‌ಸಿಸಿ ಎಂಬ ಕೀರ್ತಿಗೆ ಭಾಜನರಾಗಿದ್ದರು.
undefined
ಉತ್ತಮ ಭಾಷಣಗಾರ್ತಿ: ಹರ್ಯಾಣದ ಭಾಷಾ ಇಲಾಖೆ ನಡೆಸಿಕೊಡುವ ಭಾಷಣ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳ ಕಾಲ ಉತ್ತಮ ಭಾಷಣಗಾರ್ತಿಯಾಗಿ ಹೊರಹೊಮ್ಮಿದ್ದರು.
undefined
ಸುಷ್ಮಾ ಆಸಕ್ತಿಗಳು: ಕ್ಲಾಸಿಕಲ್‌ ಮ್ಯೂಸಿಕ್‌, ಕವಿತೆಗಳು, ಕಲೆ, ಹಾಗೂ ನಾಟಕ ಸ್ಪರ್ಧೆಯಲ್ಲೂ ಸಕ್ರಿಯರಾಗುವ ಮೂಲಕ ಆಲ್‌ರೌಂಡರ್‌ ಆಗಿದ್ದರು.
undefined
ಸುಪ್ರೀಂಕೋರ್ಟ್‌ ವಕೀಲೆ: 1973ರಲ್ಲಿ ಸುಷ್ಮಾ ಭಾರತದ ಸುಪ್ರೀಂ ಕೋರ್ಟ್‌ನ ವಕೀಲೆಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. 1975-77ರಲ್ಲಿ ಬರೋಡಾ ಡೈನಾಮೈಟ್‌ ಪ್ರಕರಣದಲ್ಲಿ ಸುಷ್ಮಾ, ಪತಿ ಸ್ವರಾಜ್‌ ಕೌಶಲ್‌ ಜೊತೆಗೂಡಿ ಜಾಜ್‌ರ್‍ ಫರ್ನಾಂಡೀಸ್‌ ಪರ ವಾದಿಸಿದ್ದರು.
undefined
ತುರ್ತು ಪರಿಸ್ಥಿತಿ ವೇಳೆ ವಿವಾಹ: 1973ರ ಜು.13ಕ್ಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗಲೇ ಸುಷ್ಮಾ-ಸ್ವರಾಜ್‌ ಕೌಶಲ್‌ ದಾಂಪತ್ಯ ಜೀವನಕ್ಕೆ. ತಮ್ಮ 34ನೇ ವಯಸ್ಸಿನಲ್ಲೇ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲ ಎಂಬ ಸ್ಥಾನಮಾನ ಪಡೆದಿದ್ದ ಸುಷ್ಮಾ ಪತಿ ಸ್ವರಾಜ್‌ ಕೌಶಲ್‌.
undefined
ಕಿರಿ ವಯಸ್ಸಲ್ಲೇ ಕ್ಯಾಬಿನೆಟ್‌ ದರ್ಜೆ: ಸಚಿವೆ 1977ರಲ್ಲಿ ಹರ್ಯಾಣ ಮುಖ್ಯಮಂತ್ರಿ ದೇವಿಲಾಲ್‌ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಸುಷ್ಮಾ ತಮ್ಮ 25ನೇ ವಯಸ್ಸಿನಲ್ಲೇ ಕ್ಯಾಬಿನೆಟ್‌ ಸಚಿವೆಯಾಗುವ ಮೂಲಕ ದೇಶದ ಅತಿ ಕಿರಿಯ ಸಚಿವೆ ಎಂಬ ಕೀರ್ತಿಗೆ ಭಾಜನ
undefined
ಕಿರಿ ವಯಸ್ಸಲ್ಲೇ ಬಿಜೆಪಿ ರಾಜ್ಯಾಧ್ಯಕ್ಷೆ: 1979ರಲ್ಲಿ ಅಂದರೆ, ತಮ್ಮ 27ನೇ ವಯಸ್ಸಿನಲ್ಲಿ ಹರ್ಯಾಣ ಬಿಜೆಪಿ ಘಟಕದ ಅಧ್ಯಕ್ಷೆಯಾಗುವ ಮೂಲಕ ರಾಷ್ಟ್ರೀಯ ಪಕ್ಷವೊಂದರ ಅತಿ ಕಿರಿಯ ರಾಜ್ಯಾಧ್ಯಕ್ಷೆ ಎಂಬ ಪಟ್ಟ. ರಾಷ್ಟ್ರೀಯ ಪಕ್ಷವೊಂದರ ಮೊದಲ ಮಹಿಳಾ ವಕ್ತರೆಯಾಗಿಯೂ ಆಯ್ಕೆ. ಅಲ್ಲದೆ, ಬಿಜೆಪಿಯ ಮೊದಲ ಮಹಿಳಾ ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ, ಪ್ರತಿಪಕ್ಷ ನಾಯಕಿ, ಕೇಂದ್ರ ಸಚಿವೆ, ವಕ್ತಾರೆ ಹಾಗೂ ವಿದೇಶಾಂಗ ಸಚಿವೆಯಾಗಿಯೂ ಸೇವೆ.
undefined
6 ಏಮ್ಸ್‌ ಘಟಕ: ಸ್ಥಾಪನೆ 2003-04ವರೆಗೂ ಕೇಂದ್ರ ಆರೋಗ್ಯ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ಅವರು, ಭೋಪಾಲ್‌, ಭುವನೇಶ್ವರ, ಜೋಧ್‌ಪುರ, ಪಟನಾ, ರಾಯ್‌ಪುರ ಹಾಗೂ ರಿಷಿಕೇಶ್‌ನಲ್ಲಿ ಏಮ್ಸ್‌ನ 6 ಘಟಕಗಳನ್ನು ಸ್ಥಾಪನೆ ಮಾಡಿದರು.
undefined
ಅತ್ಯುತ್ತಮ ಸಂಸದೀಯ ಪ್ರಶಸ್ತಿ: 2004 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ಮಹಿಳೆ ಸುಷ್ಮಾ ಸ್ವರಾಜ್‌ ಅವರು. 7 ಬಾರಿ ಸಂಸತ್ತಿಗೆ ಆಯ್ಕೆಯಾದರೆ, ಹರ್ಯಾಣ ರಾಜ್ಯದ ಶಾಸಕಿಯಾಗಿ 3 ಬಾರಿ ಆಯ್ಕೆಯಾಗಿದ್ದರು. ಅಲ್ಲದೇ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.
undefined
ತೆಲಂಗಾಣ ರಚನೆಯಲ್ಲಿ ಪ್ರಮುಖ ಪಾತ್ರ: ಅಖಂಡ ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಇಬ್ಭಾಗವಾಗಿ ಪ್ರತ್ಯೇಕ ರಾಜ್ಯ ರಚನೆಯಾಗುವಲ್ಲಿ ಸುಷ್ಮಾ ಸ್ವರಾಜ್‌ರ ಪಾತ್ರ ಅಧಿಕವಾಗಿದೆ. ಅಲ್ಲದೇ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಇಚ್ಛಾಶಕ್ತಿ ತೋರಿದ್ದರು. ಇದಕ್ಕಾಗಿ ಅವರು ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರೊಂದಿಗೆ ವಾದ ಮಾಡಿದ್ದರು.
undefined
ವಿದೇಶಾಂಗ ಖಾತೆ ನಿರ್ವಹಿಸಿದ ಎರಡನೇ ಮಹಿಳೆ: ವಿದೇಶಾಂಗ ಇಲಾಖೆ ಖಾತೆ ನಿರ್ವಹಿಸಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಖಾತೆ ನಿರ್ವಹಿಸಿದ್ದರು.
undefined
ರಾಜತಾಂತ್ರಿಕ ನಿಪುಣೆ: ಯಮೆನ್‌ ದೇಶದ ಬಿಕ್ಕಟ್ಟು ಪರಿಹಾರಕ್ಕೆಂದು ನಡೆಸಿದ ಆಪರೇಷನ್‌ ರಾಹತ್‌ ವೇಳೆ ರಾಜತಾಂತ್ರಿಕ ನೈಪುಣ್ಯ ತೋರ್ಪಡಿಸಿದ್ದರು. ಇಂಗ್ಲೆಂಡ್‌, ರಷ್ಯಾ, ಪಾಕಿಸ್ತಾನ ದೇಶಗಳಿಗೆ ಸಹಾಯ ನೀಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
undefined
ರತ್ನಶಾಸ್ತ್ರ, ಜ್ಯೋತಿಷ್ಯದಲ್ಲಿ ನಂಬಿಕೆ: ಸುಷ್ಮಾ ಸ್ವರಾಜ್‌ ಅವರು ಜ್ಯೋತಿಷ್ಯ, ರತ್ನಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರು. ಜ್ಯೋತಿಷ್ಯದಂತೆ ಬಟ್ಟೆಧರಿಸುವುದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುತ್ತಿದ್ದರು.
undefined
ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದ ಸುಷ್ಮಾ, ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್‌ ಮೂಲಕ ಸಂಪರ್ಕಿಸಿದ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದರು.
undefined
25ನೇ ವರ್ಷ​ಕ್ಕೆ ಸಚಿ​ವೆ​ಯಾ​ಗುವ ಮೂಲಕ ದೇಶದ ಅತ್ಯಂತ ಕಿರಿಯ ಸಚಿವೆ ಎನ್ನುವ ಕೀರ್ತಿಗೆ ಪಾತ್ರ​ರಾಗಿದ್ದರು.
undefined
ತಮ್ಮ 27ನೇ ವಯ​ಸ್ಸಿಗೆ ಹರ್ಯಾಣ ರಾಜ್ಯ ಬಿಜೆ​ಪಿಯ ಅಧ್ಯ​ಕ್ಷೆ​ಯಾ​ಗಿ ಆಯ್ಕೆ​ಯಾಗಿದ್ದರು. ಬಿಜೆ​ಪಿಯ ಮೊದಲ ಮಹಿಳಾ ವಕ್ತಾ​ರೆಯಾಗಿದ್ದರು.
undefined
ಬಿಜೆ​ಪಿಯ ಮೊದಲ ಮಹಿಳಾ ಮುಖ್ಯ​ಮಂತ್ರಿ, ಬಿಜೆಪಿಯ ಮೊದಲ ಕೇಂದ್ರ ಮಹಿಳಾ ಸಚಿವೆ, ಮೊದಲ ಮಹಿಳಾ ವಿರೋಧ ಪಕ್ಷದ ನಾಯ​ಕಿ, ಮೊದಲ ಮಹಿಳಾ ವಿದೇ​ಶಾಂಗ ಸಚಿವೆ, ಮೊದಲ ಮಹಿಳಾ ಅತ್ಯು​ತ್ತಮ ಸಂಸದೆ ಎಂಬ ಕೀರ್ತಿಗೂ ಪಾತ್ರ​ರಾಗಿದ್ದರು.
undefined
4 ರಾಜ್ಯ​ಗ​ಳಿಂದ 11 ಬಾರಿ ವಿಧಾನಸಭೆ ಹಾಗೂ ಲೋಕ​ಭೆಗೆ ಸ್ಪರ್ಧೆಗೆ ಮಾಡಿ​ರುವ ಏಕೈಕ ಮಹಿಳೆ ಎಂಬ ಹಿರಿಮೆ
undefined
ಸುಷ್ಮಾ ಸ್ವರಾಜ್‌ 4 ಬಾರಿ ಹಿಂದಿ ಸಾಹಿತ್ಯ ಸಮ್ಮೇ​ಳ​ನದ ಅಧ್ಯ​ಕ್ಷೆಯೂ ಆಗಿ​ದ್ದ​ರು.
undefined
2019 ಫೆ. 19 ಎಂದು 2015ರ ನೇಪಾಳ ಭೂಕಂಪದ ವೇಳೆ ನಾಗ​ರಿ​ಕರ ರಕ್ಷ​ಣೆಗ ಕೈಗೊಂಡ ನಿರ್ಧಾ​ರ​ಕ್ಕೆ ಸ್ಪಾನಿಶ್‌ ಸರ್ಕಾರ ನೀಡು​ವ ಪ್ರತಿಷ್ಠಿತ ನಾಗ​ರಿಕ ಪ್ರಶಸ್ತಿ ಗ್ರಾಂಡ್‌ ಕ್ರಾಸ್‌ ಅವಾರ್ಡ್‌ ಲಭಿ​ಸಿದೆ.
undefined
click me!