ತನ್ನ ಬಗ್ಗೆ ಅಮ್ಮ ಸುಧಾ ಮೂರ್ತಿ ಬರೆದ ಪುಸ್ತಕ ಅನಾವಣ ಮಾಡಿದ 'ಗೋಪಿ'

First Published Feb 1, 2020, 6:04 PM IST

ಬೆಂಗಳೂರು ಫೆಬ್ರವರಿ 1, 2020: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಹಾಗೂ ಲೇಖಕಿ ಸುಧಾಮೂರ್ತಿ ಅವರು ತಮ್ಮ ಪ್ರೀತಿಯ ಸಾಕು ನಾಯಿ ಗೋಪಿಯ ಕುರಿತು ಬರೆದಿರುವ ಪುಸ್ತಕ “ದ ಗೋಪಿ ಡೈರೀಸ್ - ಕಮಿಂಗ್ ಹೋಮ್” ನ್ನು ಶುಕ್ರವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು. ಅಶೋಕ ನಗರದ ಹೆಡ್ಸ್ ಅಪ್ ಫಾರ್ ಟೈಲ್ಸ್ ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿಯ ನಾಯಿ ಗೋಪಿಯಿಂದಲೇ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ಬಹಳ ವಿಶೇಷವಾಗಿತ್ತು.

ಪ್ರೀತಿಯ ಸಾಕು ನಾಯಿ ಗೋಪಿಯಿಂದ ಪುಸ್ತಕ ಬಿಡುಗಡೆಗೊಳಿಸಿದ ಸುಧಾಮೂರ್ತಿ.
undefined
ಸಾಕು ನಾಯಿ ಗೋಪಿಯ ಮೇಲೆ ಪುಸ್ತಕ ಬರೆದ ಸುಧಾಮೂರ್ತಿ.
undefined
ಅಶೋಕ ನಗರದ ಹೆಡ್ಸ್ ಅಪ್ ಫಾರ್ ಟೈಲ್ಸ್ ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿಯ ನಾಯಿ ಗೋಪಿಯಿಂದಲೇ ಪುಸ್ತಕವನ್ನು ಬಿಡುಗಡೆಗೊಳಿಸಿದರು.
undefined
sudha-murthy
undefined
ಸುಧಾಮೂರ್ತಿ ಅವರ ಮಾತನ್ನು ಪಾಲಿಸಿದ ಗೋಪಿ ತನ್ನ ಬಾಯಿಯಿಂದ ರಿಬ್ಬನ್ ಎಳೆದು ಪುಸ್ತಕ ಬಿಡುಗಡೆಗೊಳಿಸಿದ.
undefined
ತಮ್ಮ ಪ್ರೀತಿಯ ಸಾಕು ನಾಯಿ ಗೋಪಿಯ ಜೊತೆಗಿನ ಬಾಂಧವ್ಯದ ಕುರಿತು ವಿವರಿಸಿದರು.
undefined
ಗೋಪಿಯನ್ನು ವೇದಿಕೆಯಲ್ಲೇ ಮುದ್ದಾಡಿದ ಅವರು, ಗೋಪಿಯೊಂದಿಗೆ ಇರುವ ತಮ್ಮ ಆತ್ಮೀಯತೆಯನ್ನು ತೋರಿಸಿಕೊಟ್ಟರು.
undefined
ಮನೆಗೆ ಗೋಪಿಯನ್ನು ತಂದಾಗಿನಿಂದ ಇದುವರೆಗೆ ಅದರೊಂದಿಗೆ ಕಳೆದ ಅಪರೂಪದ ಕ್ಷಣಗಳನ್ನು ನೆನಪಿಸಿಕೊಂಡರು.
undefined
ಸಂವಾದದಲ್ಲಿ ಸಭಿಕರು ಸಾಕು ಪ್ರಾಣಿಗಳನ್ನು ಸಾಕುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.
undefined
ಇದಕ್ಕೆ ಉತ್ತರಿಸಿದ ಸುಧಾಮೂರ್ತಿ, ಸಾಕು ಪ್ರಾಣಿಗಳನ್ನು ಸಾಕುವಾಗ ಅನುಸರಿಸಬೇಕಾದ ಕೆಲವು ಟಿಪ್ಸ್ ನೀಡಿದರು.
undefined
ಮನೆಯಲ್ಲಿ ಪ್ರಾಣಿಗಳನ್ನು ಸಾಕಲು ಸಾಧ್ಯವಾಗದಿದ್ದರೆ ಪ್ರಾಣಿಗಳನ್ನು ಸಂರಕ್ಷಣೆ ಮಾಡುವ ಕೇಂದ್ರಗಳಿಗೆ ಅಗಾಗ್ಗೆ ಭೇಟಿ ನೀಡಿ, ಕಡೆಗಣನೆಯಾದ ಪ್ರಾಣಿಗಳ ಜೊತೆ ಬೆರೆಯಬೇಕು ಎಂದರು.
undefined
click me!