ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡೋದು ಹೀಗೆ!

First Published Jun 23, 2020, 6:48 PM IST

ಸದ್ಯ ಕೊರೋನಾ ವೈರಸ್ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳು ಜನರ ನಿದ್ದೆ ಕೆಡಿಸಿದೆ. ಇತ್ತ ಮೃತರ ಸಂಖ್ಯೆಯೂ ಹೆಚ್ಚುತ್ತಿದ್ದು ಜನರನ್ನು ಮತ್ತಷ್ಟು ಕಂಗಾಲು ಮಾಡಿದೆ. ಇವೆಲ್ಲದರ ನಡುವೆ ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಕುರಿತಾಗಿಯೂ ಹಲವರಲ್ಲಿ ಕುತೂಲ ಮನೆ ಮಾಡಿದೆ. ಕುಟುಂಬ ಸದಸ್ಯರಿಗೆ ಮೃತದೇಹ ನೋಡಲು, ಮುಟ್ಟಲು ಬಿಡುತ್ತಾರಾ? ಮೃತ ದೇಹದಿಂದ ಕೊರೋನಾ ಹರಡುತ್ತಾ? ಅಂತ್ಯ ಸಂಸ್ಕಾರದ ವೇಳೆ ತೆಗೆದುಕೊಳ್ಳುವ ಮುಂಜಾಗೃತಾ ಕ್ರಮಗಳು ಎಂಬಿತ್ಯಾದಿ ಪ್ರಶ್ನೆಗಳೂ ಇವೆ. ಹೌದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಚಿಕಿತ್ಸೆ ನಿಡುವ ವೇಳೆ ಎಷ್ಟು ಎಚ್ಚರ ವಹಿಸುತ್ತಾರೋ, ಅಷ್ಟೇ ಎಚ್ಚರ ಮೃತಪಟ್ಟ ಬಳಿಕ ಅಂತ್ಯ ಕ್ರಿಯೆವರೆಗೂ ವಹಿಸಬೇಕಾಗುತ್ತದೆ.. ಇಲ್ಲಿದೆ ನೋಡಿ ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ.

ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವಿಶ್ವ ಸಂಸ್ಥೆ ನಿಯಮಾವಳಿ ಜಾರಿಗೊಳಿಸಿದೆ. ಆಸ್ಪತ್ರೆ ಸಿಬ್ಬಂದಿ ಈ ಕ್ರಮಗಳನ್ನು ಪಾಲಿಸಿ ಶವ ಅಂತ್ಯಕಕ್ರಿಯೆ ಮಾಡಬೇಕಾಗುತ್ತದೆ.
undefined
ಮೃತ ವ್ಯಕ್ತಿಯ ದೇಹದಿಂದ ಕೊರೋನಾ ಹರಡುವ ಸಾಧ್ಯತೆಗಳು ಕಡಿಮೆಯಾಗಿದ್ದರೂ ಎಚ್ಚರ ಅತ್ಯಗತ್ಯ. ಹೀಗಾಗಿ ವೈದ್ಯಕೀಯ ಸಂಬಂಧಿ ಹಾಗೂ ಕುಟುಂಬ ಸದಸ್ಯರು ಅಗತ್ಯ ಎಚ್ಚರಿಕೆ ವಹಿಸಬೇಕು.
undefined
ಅದರಲ್ಲೂ ವಿಶೇಷವಾಗಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ಗ್ಲೌಸ್, ಪಿಪಿಇ ಕಿಟ್, ಸೋಂಕು ನಾಶಕ ದ್ರವ, ಶವವ ಸಾಗಿಸಲು ಬೇಕಾದ ಬ್ಯಾಗ್ ಹಾಗೂ ಇನ್ನಿತರ ಸಲಕರಣೆಗಳು ಇರುವುದು ಅತ್ಯಗತ್ಯ. ಶವವನ್ನು ಐಸೋಲೇಷನ್ ವಾರ್ಡ್‌ನಿಂದ ಶವಾಗಾರ, ಆಂಬುಲೆನ್ಸ್ ಹಾಗೂ ಸ್ಮಶಾನಕ್ಕೆ ಕೊಂಡೊಯ್ಯುವವರಿಗೆ ಇದನ್ನು ನಿರ್ವಹಿಸಲು ತೆಗೆದುಕೊಳ್ಳಬೇಕಾದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸೂಕ್ತ ಮಾಹಿತಿ ನಿಡಬೇಕಾಗುತ್ತದೆ.
undefined
ಐಸೋಲೇಷನ್ ವಾರ್ಡ್‌ನಲ್ಲಿರುವ ಶವ ಸಾಗಿಸುವುದಕ್ಕೂ ಮೊದಲು ಪಿಪಿಇ ಕಿಟ್ ಹಾಗೂ ಗ್ಲೌಸ್ ಧರಿಸಬೇಕು. ಶವಕ್ಕೆ ಹಾಕಲಾದ ಟ್ಯೂಬ್ ಇತ್ಯಾದಿಗಳನ್ನು ಸರಿಯಾಗಿ ತೆಗೆಯಬೇಕು ಹಾಗೂ ಶವಕ್ಕೆ ಯಾವುದಾದರೂ ಗಾಯಗಳಾಗಿದ್ದಲ್ಲಿ ಸೋಂಕು ನಿವಾರಕ ದ್ರವ ಸಿಂಪಡಿಸಬೇಕು. ಬಳಿಕ ಸೋಂಕು ನಿವಾರಕ ದ್ರವ ಸಿಂಪಡಿಸಲಾದ ಮೃತದೇಹವನ್ನು ಕುಟುಂಬ ಸದಸ್ಯರು ನೀಡಿದ ಬಟ್ಟೆಯಲ್ಲಿ ಸುತ್ತಿ ಶವವಿಡುವ ಬ್ಯಾಗ್‌ನಲ್ಲಿಡಬೇಕು. ಇನ್ನು ಕುಟುಂಬ ಸದಸ್ಯರು ಮೃತ ವ್ಯಕ್ತಿಯನ್ನು ನೋಡಲು ಇಚ್ಛಿಸಿದರೆ ಪಿಪಿಇ ಕಿಟ್ ಮೊದಲಾದವುಗಳನ್ನು ಅಗತ್ಯವಾಗಿ ಧರಿಸಿರಬೇಕು. ಇಲ್ಲಿಂದ ಶವವನ್ನು ಒಂದೋ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕು ಅಥವಾ ಶವಾಗಾರಕ್ಕೆ ಕಳುಹಿಸಬೇಕು.
undefined
ಐಸೋಲೇಷನ್‌ ವಾರ್ಡ್‌ನ ಪ್ರತಿಯೊಂದು ಸಾಧನ, ಕಿಟಕಿ, ಮೇಜು ಹೀಗೆ ಪ್ರತಿಯೊಂದಕ್ಕೂ ಸೋಂಕು ನಿವಾರಕ ಸಿಂಪಡಿಸಬೇಕು ಹಾಗೂ ಮೂವತ್ತು ನಿಮಿಷದವರೆಗೂ ಆ ಕೋಣೆಯನ್ನು ಒಣಗಲು ಬಿಡಬೇಕು. ಈ ವೇಳೆ ಆ ಕೋಣೆಗೆ ಯಾರೂ ಹೋಗುವಂತಿಲ್ಲ.
undefined
ಶವಾಗಾರದಲ್ಲಿಡುವ ಮೃತದೇಹವನ್ನು ನಾಲ್ಕು ಡಿಗ್ರಿ ಸೆಲ್ಶಿಯಸ್‌ನಲ್ಲಿಡಬೇಕು. ಶವಾಗಾರದಲ್ಲಿ ಸ್ವಚ್ಛತೆ ಇರುವುದು ಅತ್ಯಗತ್ಯ. ಎಲ್ಲವನ್ನೂ ಸೋಂಕು ನಿವಾರಕ ದ್ರವ ಸಿಂಪಡಿಸಿ ಸ್ವಚ್ಛಗೊಳಿಸಿರೇಕು.
undefined
ಶವಾಗಾರದಿಂದ ಮೃತರ ಮನೆಗೆ ಅಥವಾ ಸ್ಮಶಾನಕ್ಕೊಯ್ಯುವ ಶವವನ್ನು ಸೂಕ್ತ ಬ್ಯಾಗ್‌ನಲ್ಲಿ ಹಾಕಿ ಆಂಬುಲೆನ್ಸ್‌ ಮೂಲಕ ಕೊಂಡೊಯ್ಯಬೇಕು. ಈ ವೇಳೆ ಸಿಬ್ಬಂದಿ ಪಿಪಿಇ ಹಾಗೂ ಗ್ಲೌಸ್ ಧರಿಸಿರಲೇಬೇಕು. ಶವ ಸೂಕ್ತ ಸ್ಥಳಕ್ಕೆ ತಲುಪಿಸಿದ ಬಳಿ ವಾಹನಕ್ಕೂ ಸೋಂಕು ನಿವಾರಕ ಸಿಂಪಡಿಸಬೇಕು.
undefined
ಇನ್ನು ಅಂತ್ಯಕ್ರಿಯೆ ವೇಳೆ ಸ್ಮಶಾನದ ಸಿಬ್ಬಂದಿಯೂ ಸ್ಯಾನಿಟೈಸ್ ಆಗಬೇಕು. ಕುಟುಂಬ ಸದಸ್ಯರು ಮೃತರನ್ನು ಕೊನೆಯ ಹಾರಿ ನೋಡಲಿಚ್ಛಿಸಿದರೆ ಬ್ಯಾಗ್‌ ಜಿಪ್ ತೆರೆದು ಮುಖ ಮಾತ್ರ ನೋಡುವುದರಲ್ಲಿ ಅಪಾಯವಿಲ್ಲ. ಆದರೆ ಶವವನ್ನು ಸ್ನಾನ ಮಾಡಿಸುವುದು, ತಬ್ಬಿಕೊಳ್ಳುವುದು, ಮುತ್ತು ಕೊಡುವುದು ಇದ್ಯಾವುದಕ್ಕೂ ಅವಕಾಶವಿಲ್ಲ.
undefined
ಇನ್ನು ಮೃತದೇಹದ ಹತ್ತಿರ ಇರುವವರು ಪಿಪಿಇ ಕಿಟ್ ಹಾಗೂ ಗ್ಲೌಸ್ಧರಿಸುವುದು ಅತ್ಯಗತ್ಯ. ಅಂತ್ಯ ಕ್ರಿಯೆ ಬಳಿಕ ಪಿಪಿಇ ಕಿಟ್ ಹಾಗೂ ಗ್ಲೌಸ್ ತೆಗೆದಿರಿಸಿದ ಬಳಿಕ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಕೈಗಳನ್ನು ಚೆನ್ನಾಗಿ ತೊಳೆಯಬೇಕು.
undefined
ಇನ್ನು ಮೃತದೇಹವನ್ನು ಸುಡುವುದಾದರೆ ಸುಟ್ಟ ಬಳಿಕ ಬೂದಿ ತೆಗೆದುಕೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ ಮೃತದೇಹ ಸುಡುವವರೆಗೂ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
undefined
ಅಂತಿಮ ಕ್ರಿಯೆಯಲ್ಲಿ ಹೆಚ್ಚಿನ ಜನರಿಗೆ ಭಾಗವಹಿಸಲು ಅವಕಾಶವಿಲ್ಲ. ಸಾಮಾಜಿಕ ಅಂತರ ಕಾಪಾಡಬೇಕೆಂಬ ನಿಯಮ ಒಂದಾದರೆ, ಮೃತರ ಆಪ್ತರಿಗೂ ಕೊರನಾ ಸೋಂಕು ತಗುಲುವ ಸಾಧ್ಯತೆಗಳಿರುವ ಹಿನ್ನೆಲೆ ಹೆಚ್ಚಿನ ಜನ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ.
undefined
ಒಟ್ಟಾರೆಯಾಗಿ ಮೃತ ವ್ಯಕ್ತಿಯ ಮುಖ ನೋಡಲು ಅವಕಾಶ ನೀಡಲಾಗುತ್ತದೆ ಆದರೆ ಅದು ಕೂಡಾ ದೂರದಲ್ಲಿಕೊಂಡೇ ನೋಡಬೇಕಾಗುತ್ತದೆ. ಅಲ್ಲದೇ ಇದು ಕೆಲವೇ ಕ್ಷಣಗಳಿಗಷ್ಟೇ ಎಂಬುವುದು ಅತ್ಯಗತ್ಯ.
undefined
ಸದ್ಯ ಕೊರೋನಾದಿಂದ ಕಾಪಾಡಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಹೀಗೆ ಮುನ್ನೆಚ್ಚರಿಕಾ ಕ್ರಮಗಳಿಂದಷ್ಟೇ ಸಾಧ್ಯ. ಹೀಗಾಗಿ ಕೊರೋನಾವನ್ನು ನಿರ್ಲಕ್ಷಿಸದೇ ಎಚ್ಚರಿಕೆಯಿಂದ ಇದ್ದರೆ ನಮ್ಮನ್ನು ನಾವು ಕಾಪಾಡಿಕೊಳ್ಳಬುಹುದು ಹಾಗೂ ನಮ್ಮ ಕುಟುಂಬವನ್ನೂ ರಕ್ಷಿಸಿಕೊಳ್ಳಬಹುದಾಗಿದೆ. ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಿ. ಅಗತ್ಯ ಕೆಲಸವಿದ್ದರಷ್ಟೇ ಮನೆಯಿಂದ ಹೊರ ಹೋಗಿ.
undefined
click me!