ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ 10 ಸಾವಿರ ಕೋಟಿ: ಕೃಷಿ ಸಚಿವ ಪಾಟೀಲ

First Published Nov 12, 2020, 10:26 AM IST

ಧಾರವಾಡ(ನ.12): ಆಹಾರ ಸಂಸ್ಕರಣೆ ಘಟಕಗಳಿಗೆ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ 10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ರೈತರು ಹೆಜ್ಜೆಯಿಟ್ಟು ಆರ್ಥಿಕ ಸದೃಢತೆ ಸಾಧಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. 

ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವವಿದ್ಯಾಲಯದ 34ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದ ಸಚಿವ ಬಿ.ಸಿ. ಪಾಟೀಲ
undefined
ಈ ಬಾರಿ ರಾಜ್ಯದೆಲ್ಲೆಡೆ ಕಳೆದ ವರ್ಷಕ್ಕಿಂತ ಶೇ. 25 ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗಗಳ ಕೆಲವು ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಯೂ ಆಗಿದೆ. ರೈತರ ಆತ್ಮಹತ್ಯೆಗೆ ನೀರಾವರಿ, ಕೃಷಿ ಸಮಸ್ಯೆಗಳು ಕಾರಣವಾಗಬಾರದು. ಬರದ ನಾಡಾಗಿರುವ ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡು ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವ ನೀರನ್ನೇ ನ್ಯಾಯೋಚಿತವಾಗಿ ಬಳಸಿ ಯಶಸ್ವಿ ಕೃಷಿ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಬೇಕು ಎಂದರು.
undefined
ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಒಂದು ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ಇದೆ ಎಂದ ಸಚಿವರು, ಹಳೆಯ ಕೃಷಿ ಪದ್ಧತಿಯಲ್ಲಿನ ಉತ್ತಮ ಅಂಶಗಳನ್ನು ಉಳಿಸಿಕೊಂಡು, ತಂತ್ರಜ್ಞಾನ ಆಧಾರಿತ ಕೃಷಿ ಮಾಡಬೇಕು. ಬಿತ್ತನೆ ಕಾಲದಲ್ಲಿ ಕೂರಿಗೆ ಪದ್ಧತಿ ಉಳಿಸಿಕೊಂಡು ನಂತರ ಹರಗುವ, ಊಳುವ ಸಂದರ್ಭದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಇಲ್ಲಿಯ ವರೆಗೆ ಕೃಷಿ ವಿವಿ ಸುಮಾರು 200 ಕ್ಕೂ ಹೆಚ್ಚು ತಳಿಗಳನ್ನು ಅಭಿವೃದ್ಧಿ ಪಡಿಸಿ ರೃತರ ಮತ್ತು ರಾಜ್ಯದ ಆದಾಯ ಉತ್ಪನ್ನ ಹೆಚ್ಚಿಸಿರುವುದು ಅಭಿನಂದನೀಯ. ವಿಶ್ವಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಅಗ್ರಿ ವಾರ್‌ ರೂಂ ಸ್ಥಾಪಿಸಿ, ಕೃಷಿಕರ ಉತ್ಪನ್ನಗಳ ಮಾರಾಟಕ್ಕೆ ನೆರವಾಗಿರುವುದು ಹೆಮ್ಮೆಯ ಸಂಗತಿ ಎಂದರು.
undefined
ಕೃಷಿ ವಿವಿಯು ಕೇವಲ ಅಕಾಡೆಮಿಕ್‌ ತರಗತಿಗಳಿಗೆ ಸೀಮಿತವಾಗದೇ ರೈತ ಸಮುದಾಯಕ್ಕೆ ಈ ಕೃಷಿತಜ್ಞರ ಮಾರ್ಗದರ್ಶನ ಸಿಗುವಂತಾಗಬೇಕು. ಕೃಷಿಕರಿಗೆ ಸಕಾಲದಲಿ ಕೃಷಿ ವಿವಿಗಳಿಂದ ಮಾರ್ಗದರ್ಶನ ಸಿಗಬೇಕು. ಇಲ್ಲಿನ ಪ್ರಾಧ್ಯಾಪಕರನ್ನು ತಾಲೂಕುಗಳು ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ನಿಯೋಜಿಸಲಾಗುತ್ತಿದೆ. ಮಣ್ಣು ಪರೀಕ್ಷೆ, ಕೃಷಿಯ ಖರ್ಚು ಕಡಿಮೆ ಮಾಡುವ ಕ್ರಮಗಳನ್ನು ರೈತರು ರೂಢಿಸಿಕೊಳ್ಳಬೇಕು. ರಾಜ್ಯದ ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಅಗ್ಗದ ದರದಲ್ಲಿ ಪರೀಕ್ಷೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ರೈತ ಸಮುದಾಯ ಉಳಿದರೆ ನಾಡಿಗೆ ಅನ್ನ ಸಿಗುತ್ತದೆ. ರೈತ ಇಲ್ಲದಿದ್ದರೆ ಜಗತ್ತಿಗೆ ಉಳಿಗಾಲವಿಲ್ಲ. ಕೊರೋನಾ ಸಂಕಷ್ಟದಲ್ಲಿ ಎಲ್ಲ ಉದ್ಯಮಗಳು ತೊಂದರೆಗೀಡಾದರೂ ಕೃಷಿ, ತೋಟಗಾರಿಕೆ ಸದೃಢವಾಗಿ ನಿಂತಿದೆ ಎಂದು ಸಚಿವರು ಹೇಳಿದರು.
undefined
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಮಹಾದೇವ ಬ. ಚೆಟ್ಟಿ ಮಾತನಾಡಿ, ಕೃಷಿ ವಿವಿಯು ನವೋದ್ಯಮ ಕೇಂದ್ರದ ಮೂಲಕ ಕೃಷಿ ಉದ್ಯಮಕ್ಕೆ ಪ್ರೋತ್ಸಾಹಿಸುತ್ತಿದೆ. ಬೀಜೋತ್ಪಾದನೆ, ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಯೋಜನೆ ಜಾರಿಗೊಳಿಸಲಾಗುತ್ತಿದೆ. ವಿವಿ ಶೈಕ್ಷಣಿಕ ಗುಣಮಟ್ಟಹೆಚ್ಚಿಸಲು 47ಕ್ಕೂ ಹೆಚ್ಚು ಪ್ರಕಟಣೆಗಳನ್ನು ಇಲ್ಲಿನ ಶಿಕ್ಷಕರು ಹೊರತಂದಿದ್ದಾರೆ. 5 ಕೋಟಿ ವೆಚ್ಚದಲ್ಲಿ ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುತ್ತಿದೆ. ಕೃಷಿ ಸಚಿವರ ಆಶಯದಂತೆ ವಿವಿ ಅಗ್ರಿವಾರ್‌ ರೂಂ ಸ್ಥಾಪಿಸಿ, ರೈತರಿಗೆ ನೆರವಾಗುತ್ತಿದೆ ಎಂದು ಕೃಷಿ ವಿವಿಯ ಸಾಧನೆಗಳನ್ನು ವಿವರಿಸಿದರು.
undefined
ಯುನಿವರ್ಸಿಟಿ ಎಟ್‌ ಎ ಗ್ಲಾನ್ಸ್‌ ಎಂಬ ನ್ಯೂಸ್‌ ಲೆಟರ್‌, ಆತ್ಮ ನಿರ್ಭರ ಕಾರ್ಯಕ್ರಮ ಅನುಷ್ಠಾನ, ಕೃಷಿ ಉದ್ಯಮಶೀಲತೆ, ಕೋವಿಡ್‌ ನಿಯಂತ್ರಣಕ್ಕಾಗಿ ಕೈಗೊಂಡ ಚಟುವಟಿಕೆಗಳ ಕಿರುಪುಸ್ತಕ, ’’ಆಶಿಯಾನಾ’’ ಕಾಫಿಟೇಬಲ್‌ ಪುಸ್ತಕ, ಬಿಟಿ ಹತ್ತಿಯಲ್ಲಿ ಐಸಿಎಂ ತಂತ್ರಜ್ಞಾನ ಹಾಗೂ ಸಮಗ್ರ ಸುಧಾರಣೆ ಕುರಿತ ಫೋಲ್ಡರ್‌, ವಿವಿಧ ತರಬೇತಿಗಳ ಡಿವಿಡಿಗಳನ್ನು ಹಾಗೂ ಸ್ಟಾರ್ಟ್‌ ಅಪ್‌ ಪ್ರೊಜೆಕ್ಟ್ ಗಳು, ಇಂಗ್ಲಿಷ ಕಲಿಕಾ ಲ್ಯಾಬ್‌ ಸಾಫ್ಟ್‌ವೇರ್‌ಗಳನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಆಂತರಿಕ ಸವಾಂರ್‍ಗೀಣ ಅಭಿವೃದ್ಧಿ ಕುರಿತ ಸಾಕ್ಷ್ಯಚಿತ್ರ ವೀಕ್ಷಿಸಿದರು.
undefined
ಕೃಷಿಯಲ್ಲಿ ಬೋಧನೆ, ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದಿರುವ 76 ಗಣ್ಯರಿಗೆ, ಕೃಷಿ ವಿ.ವಿ. ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಿ ಸಚಿವರು ಗೌರವಿಸಿದರು. ವಿವಿಯ ಪ್ರಥಮ ಕುಲಪತಿ ಡಾ. ಜೆ.ವಿ. ಗೌಡ, ಕೃಷಿ ವಿ.ವಿ. ಆಡಳಿತ ಮಂಡಳಿ ಸದಸ್ಯರಾದ ಶಶಿಮೌಳಿ ಕುಲಕರ್ಣಿ, ವೈ.ಎನ್‌. ಪಾಟೀಲ, ಪಿ. ಮಲ್ಲೇಶ, ಡಾ. ಎಸ್‌.ಬಿ. ಕಲಘಟಗಿ, ಎಲ್‌.ಎಸ್‌. ಅಜಗಣ್ಣನವರ್‌, ಡಾ. ಎಸ್‌.ಬಿ. ಹೊಸಮನಿ, ಕುಲಸಚಿವ ಡಾ. ವಿ.ಆರ್‌. ಕಿರೇಸೂರ ಇದ್ದರು. ಯಲ್ಲಪ್ಪ ಮಾಳಗಿ ಮತ್ತು ಸಂಗಡಿಗರು ರೈತಗೀತೆ ಪ್ರಸ್ತುತ ಪಡಿಸಿದರು.
undefined
click me!