ವಿಡಿಯೋ ಸ್ಕ್ರಿಪ್ಟ್ ಸುರ್ಜೆವಾಲ, ಡೈರೆಕ್ಟರ್ ಸಿದ್ದರಾಮಯ್ಯ, ಪ್ರೊಡ್ಯೂಸರ್ ಶಿವಕುಮಾರ್; ಅಶೋಕ್ ವಾಗ್ದಾಳಿ!

By Suvarna NewsFirst Published May 7, 2024, 1:58 PM IST
Highlights

ಅಶ್ಲೀಲ ಪ್ರಕರಣ ತನಿಖೆಗೆ ರಚನೆಗೊಂಡಿರುವುದು SIT ಅಲ್ಲ SSS. ಸುರ್ಜೆವಾಲ, ಸಿದ್ದರಾಮಯ್ಯ, ಶಿವಕುಮಾರ್. ಇವರೆ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್ ಹಾೂ ಪ್ರೊಡ್ಯೂಸರ್ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
 

ಬೆಂಗಳೂರು(ಮೇ.07) ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ರಚನೆಯಾಗಿರುವುದು SIT( ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಂ) ಅಲ್ಲ, ಇದು SSS( ಸುರ್ಜೆವಾಲ, ಸಿದ್ದರಾಮಯ್ಯ, ಶಿವಕುಮಾರ್) ಟೀಂ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿ ಮೂಲಕ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ಧಾಳಿ ನಡೆಸಿದ ಆರ್ ಅಶೋಕ್,  ಈ ಪ್ರಕರಣಧ ಸ್ಕ್ರಿಪ್ಟ್ ರೈಟರ್  ಸುರ್ಜೆವಾಲ, ಡೈರೆಕ್ಟ್ ಸಿದ್ದರಾಮಯ್ಯ , ಪ್ರೊಡ್ಯುಸರ್ ಶಿವಕುಮಾರ್ ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಕಾಂಗ್ರೆಸ್ ಕಾರಣ. ಪ್ರಜ್ವಲ್ ಹೊರಗಡೆ ಹೋಗಲು ಬಿಟ್ಟು ಪ್ರಧಾನಿ ಮೋದಿ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ತೆಗೆಯಲು ಕಾಂಗ್ರೆಸ್ ಪ್ರಯತ್ನಿಸಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ. 

ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ, ವಿಡಿಯೋ ಟಿಕ್ ಮಾಡಿದ್ದು ಸುರ್ಜೇವಾಲ, ಹೆಚ್‌ಡಿಕೆ ಗಂಭೀರ ಆರೋಪ!

ಕಾಂಗ್ರೆಸ್ ನಾಯಕರಿಗೆ ದೇವೇಗೌಡರ ಕುಟುಂಬ, ಕುಮಾರಸ್ವಾಮಿ ಕುಟುಂಬ ಟಾರ್ಗೆಟ್. ಒಕ್ಕಲಿಗರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಈ ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ಲಿಂಗಾಯಿತರನ್ನು ಟಾರ್ಗೆಟ್ ಮಾಡಿತ್ತು. ಇದೀಗ ಒಕ್ಕಲಿಗರನ್ನು ಟಾರ್ಗೆಟ್ ಮಾಡಿದೆ ಎಂದು ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

SIT ರಬ್ಬರ್ ಸ್ಟಾಂಫ್ ಆಗಿದೆ. ಸಿದ್ದರಾಮಯ್ಯ ಶಿವಕುಮಾರ್ ಅವರ ರಬ್ಬರ್ ಸ್ಟಾಂಪ್. ಇವರಿಬ್ಬರು ಏನು ಹೇಳಿದರೂ ತಂಡ ಮುದ್ರೆ ಒತ್ತುತ್ತದೆ ಎಂದು ಆರ್ ಅಶೋಕ್ ಹೇಳಿದ್ದಾರೆ.  ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಒಂದು ಲಕ್ಷ ಪೆನ್ ಡ್ರೈವ್ ಹಂಚಲಾಗಿದೆ. ಎಷ್ಟು ಜನರ ಅರೆಸ್ಟ್ ಮಾಡಿದ್ದಾರೆ? ಈಗ ಪ್ರೆಸ್ ನೋಟು ಬಿಡುಗಡೆ ಮಾಡುತ್ತೀರಾ ಎಂದು ಎಸ್‌ಐಟಿ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.  

ವಿಡಿಯೋ ಪ್ರಕರಣ ಲೀಕ್ ಪ್ರಕರಣದಲ್ಲಿ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಮೇಲೆ ಗಂಭೀರ ಆರೋಪವಿದೆ. ಆದರೆ ಕಾಂಗ್ರೆಸ್ ಪ್ರಾಯೋಜಿತ ಘಟನೆಯಿಂದ ಕಾರು ಚಾಲಕ ವಿದೇಶಕ್ಕೆ ಹೋಗಿದ್ದಾರೆ. ಕಾರು ಚಾಲಕ ವಿದೇಶಕ್ಕೆ ಹೋಗಲು ಹಣ ನೀಡಿದ್ದು ಯಾರು? ಲಕ್ಷಾಂತರ ಹಣ ಕೊಟ್ಟಿದ್ದು ಯಾರು, ಅದು ಕಾಂಗ್ರೆಸ್ ನೀಡಿದೆ ಎಂದು ಆರ್ ಅಶೋಕ್ ನೇರ ಆರೋಪ ಮಾಡಿದ್ದಾರೆ.  

ವಿಡಿಯೋ ಪ್ರಕರಣದಲ್ಲಿ ಹೊಸ ತಿರುವು, ನವೀನ್ ಗೌಡ ಸಂಭಾಷಣೆಯ ಆಡಿಯೋ ಪ್ಲೆ ಮಾಡಿದ ಕುಮಾರಸ್ವಾಮಿ!

ಕಾರ್ತಿಕ್ ನ ವಿದೇಶಕ್ಕೆ ಕಳಿಸಿದ್ದೇವೆ ಎಂದು ಅವರೆ ಹೇಳಿದ್ದಾರೆ.  SIT ಇಲ್ಲಿ ತನಕ ಒಂದು ಸ್ಪಷ್ಟನೆ ನೀಡಿಲ್ಲ. ಯಾರು ಎಸ್ ಐಟಿ ನಾ ನಂಬುತ್ತಾರೆ?ಕಾಂಗ್ರೆಸ್ ಪಾಡು ಅಬ್ಬೆಪಾರಿ ಪಾಡಾಗಿದೆ.  ಸರ್ಕಾರದ ಕೆಲಸ ಹೆಣ್ಮಕ್ಕಳ ಮರ್ಯಾದೆ ಕಾಪಾಡೋದು. ಆದರೆ ಇದೇ ಸರ್ಕಾರ ಪೆನ್ ಡ್ರೈವ್ ಹಂಚಿಕೆ ಮಾಡಿ ಮಾನ ಮರ್ಯಾದೆ ಕಳೆದಿದೆ. ಈ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 
 

click me!