May 7, 2024, 3:30 PM IST
ಪ್ರಜ್ವಲ್ ರೇವಣ್ಣ (Prajwal Revanna) ಅವರ ವಿಡಿಯೋ ಇವೆ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Pendrive case) ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಬೆಳವಣಿಗೆ ಕಂಡುಬರುತ್ತಿವೆ. ಈ ನಡುವೆ ಪ್ರಕರಣ ಸಂಬಂಧ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಿಎಮ್ ಹೆಚ್‌ಡಿ ಕುಮಾರಸ್ವಾಮಿ(Former CM HD Kumaraswamy), ರಾಹುಲ್ ಗಾಂಧಿ (Rahul Gandhi) ವಿರುದ್ಧ ಕಿಡಿಕಾರಿದ್ದಾರೆ. ರಾಹುಲ್ ಅವರು ಪ್ರಜ್ವಲ್ ಕೇಸ್‌ನಲ್ಲಿ ಅಪ್ರಾಪ್ತರು ಇದ್ದಾರೆ ಅಂದಿದ್ದಾರೆ, ಯಾವ ಆಧಾರದ ಮೇಲೆ ರಾಹುಲ್ ಮಾತಾಡಿದ್ದಾನೆ, ಎಸ್ಐಟಿ ರಾಹುಲ್‌ಗೆ ಏಕೆ ನೋಟಿಸ್ ಕೊಟ್ಟಿಲ್ಲ ಎಂದು ಏಕವಚನದಲ್ಲೇ ಪ್ರಶ್ನೆ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಅಮಿತ್ ಶಾ (Prime Minister Modi, Amit Shah) ಎಳೆದು ತಂದಿದ್ದೀರಿ, ಪ್ರಜ್ವಲ್ ವಿರುದ್ಧ 2900 ಕೇಸ್ ಅಂತ ಹೇಳ್ತಿದ್ರಿ, ಈವರೆಗೂ ಎಷ್ಟು ಜನ ದೂರು ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯಗೆ (CM Siddaramaiah) ಹೆಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಈ ಸಂಬಂಧ ಹೇಳಿಕೆ ನೀಡಿದ್ದ ಹಾಸನ ಡಿಸಿ ವಿರುದ್ಧವೂ ಮಾತನಾಡಿ, ಕೋಲಾರದಲ್ಲಿ ನೀವು ನಿನ್ನ ಗಂಡ ಏನ್ ಮಾಡಿದ್ದೀರಿ ಗೊತ್ತಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: ನಮ್ಮ ನಾಯಕರಾದ ಡಿಕೆ ಶಿವಕುಮಾರ್, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ:ಶ್ರೇಯಸ್ ಪಟೇಲ್