ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದಿದ್ದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

By Ravi JanekalFirst Published May 7, 2024, 1:47 PM IST
Highlights

ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ಬಿಸಲಿಗೆ ಏಕಾಏಕಿ ತಲೆಸುತ್ತು ಬಂದು ಕುಸಿದು ಬಿದ್ದು,, ಮತದಾನ ಮಾಡಲು ಬಂದು ಸರತಿಸಾಲಿನಲ್ಲಿ ನಿಂತಿದ್ದ ವೈದ್ಯರಿಂದ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದ ಘಟನೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ. ವೈದ್ಯರ ಸಮಯಪ್ರಜ್ಞೆ, ಕಾರ್ಯಕ್ಕೆ ಮತದಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಧಾರವಾಡ (ಮೇ.7): ಉತ್ತರ ಕರ್ನಾಟಕದಲ್ಲಿ ರಣಬಿಸಲು ಮುಂದುವರಿದಿದ್ದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದೆ. ವಿಪರೀತ ಬಿಸಲಿಗೆ ಚುನಾವಣಾಧಿಕಾರಿಗಳಿಗೆ ಹೃದಯಾಘತ, ತಲೆಸುತ್ತು ವಿವಿಧ ಪ್ರಕರಣಗಳು ನಡೆದಿವೆ. ಇದೀಗ ಧಾರವಾಡದಲ್ಲಿ ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ಬಿಸಲಿಗೆ ಏಕಾಏಕಿ ತಲೆಸುತ್ತು ಬಂದು ಕುಸಿದು ಬಿದ್ದ ಘಟನೆ  ಧಾರವಾಡ ಜಿಲ್ಲೆಯ ಗಾಂಧಿನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.

ಮೇಲಿನಮನಿ ಎಂಬುವವರ ಅಸ್ವಸ್ಥಗೊಂಡ ಚುನಾವಣಾಧಿಕಾರಿ. ಈ ವೇಳೆ ಮತದಾನಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದ ವೈದ್ಯ ಡಾ.ನಿತಿನ್‌ಚಂದ್ರ ಹತ್ತಿಕಾಳ ಅವರು ಗಮನಿಸಿ ಅಧಿಕಾರಿ ತಲೆಸುತ್ತು ಬಂದು ಬಿದ್ದ ಕೂಡಲೇ ಅವರ ನೆರವಿಗೆ ದಾವಿಸಿ ಬಂದು  ಆರೋಗ್ಯ ತಪಾಸಣೆ ನಡೆಸಿದರು.

LIVE: Dharwad Elections 2024: ಧಾರವಾಡದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ. 24ರಷ್ಟು ಮತದಾನ

ಚುನಾವಣಾಧಿಕಾರಿ ಮೇಲಿನಮನಿ ಅವರಿಗೆ ಬಿಪಿ, ಶುಗರ್ ಎಲ್ಲವನ್ನೂ ತಪಾಸಣೆ ಮಾಡಿದ ವೈದ್ಯ ನಿತಿನ್‌ಚಂದ್ರ ಬಳಿಕ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮೇಲಿನಮನಿ ಅವರ ಆರೈಕೆ ಮಾಡಿದ ನಂತರವೇ ಡಾ.ಹತ್ತಿಕಾಳ ಅವರು ತಮ್ಮ ಮತ ಚಲಾಯಿಸಿದರು. ವೈದ್ಯರ ಸಮಯಪ್ರಜ್ಞೆ, ಕಾರ್ಯಕ್ಕೆ ಅಲ್ಲಿ ಸೇರಿದ್ದ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದರು.

click me!